ವೆಂಕಟಸ್ವಾಮಿ, ನಾರಾಯಣಪ್ಪ ಆಯ್ಕೆ
ಟೇಕಲ್: ದೊಡ್ಡನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಜೆಡಿಎಸ್ ಜೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಎಂ. ವೆಂಕಟಸ್ವಾಮಿ, ಉಪಾಧ್ಯಕ್ಷರಾಗಿ ಕೆ. ನಾರಾಯಣಪ್ಪ ಆಯ್ಕೆಯಾಗಿದ್ದಾರೆ. ಇನ್ನು ಸಂಘದ ನೂತನ ನಿರ್ದೇಶಕರಾಗಿ ಶ್ರೀರಾಮ್, ವೆಂಕಟರಾಮಪ್ಪ, ಮುನಿವೆಂಕಟಪ್ಪ, ಬಿ. ನಾರಾಯಣಪ್ಪ, ಇಂದ್ರಮ್ಮ, ಮುನಿಯಮ್ಮ, ಡಿ.ಕೆ. ವೆಂಕಟೇಶ್ಗೌಡ, ಎಂ. ಈಶ್ವರ, ಕೃಷ್ಣಪ್ಪ ನೇಮಕಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ದಿನ್ನಹಳ್ಳಿ ಗ್ರಾಪಂ ಕಾರ್ಯದರ್ಶಿ ಮುರುಳಿಪ್ರಸಾದ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ದೊಡ್ಡನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎನ್. ನಂಜುಂಡಪ್ಪ, ಎನ್. ವೆಂಕಟೇಶಪ್ಪ, ಮಾಜಿ ಉಪಾಧ್ಯಕ್ಷ ಎಂ. ನಂಜುಂಡಪ್ಪ ಹಾಗೂ ಸಂಘದ ಕಾರ್ಯದರ್ಶಿ ವೆಂಕಟೇಶಪ್ಪ ಉಪಸ್ಥಿತರಿದ್ದರು.
ಅಭಿನಂದನೆ: ಸಂಘದ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥಗೌಡ, ಜಿ.ಪಂ. ಸದಸ್ಯೆ ರತ್ನಮ್ಮನಂಜೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ವಿ. ಚಂದ್ರಶೇಖರಗೌಡ ಅವರು ಅಭಿನಂದಿಸಿದ್ದಾರೆ.
ಭಾರತಮ್ಮ, ಶ್ರೀನಿವಾಸಗೌಡ ಆಯ್ಕೆ
ಟೇಕಲ್: ಹುಳದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು 2 ಸ್ಥಾನಗಳು ಜೆಡಿಎಸ್ ಪಾಲಾಯಿತು. ಅಧ್ಯಕ್ಷರಾಗಿ ಭಾರತಮ್ಮ, ಉಪಾಧ್ಯಕ್ಷರಾಗಿ ಶ್ರೀನಿವಾಸಗೌಡ ಆಯ್ಕೆಯಾಗಿದ್ದಾರೆ. ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಾಗ ಅಧ್ಯಕ್ಷ ಸ್ಥಾನಕ್ಕೆ 3 ನಾಮಪತ್ರಗಳು ಬಂದಿದ್ದು, ಮುಕುಂದಪ್ಪ ನಾಮಪತ್ರ ವಾಪಸ್ ಪಡೆದು ಭಾರತಮ್ಮ 6 ಮತದಿಂದ ಜಯಗಳಿಸಿದ್ದು, ನಂಜಪ್ಪ 4 ಮತ ಪಡೆದಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ 2 ನಾಮಪತ್ರಗಳು ಬಂದಿದ್ದು, ಶ್ರೀನಿವಾಸಗೌಡ 6 ಮತ ಪಡೆದು ಗೆಲವು ಸಾಧಿಸಿದ್ದು, ವೆಂಕಟೇಶಪ್ಪ 5 ಮತ ಪಡೆದಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದ ಭಾರತಮ್ಮ ಮಾತನಾಡಿ, ಜಿಪಂ ಸದಸ್ಯೆ ರತ್ನಮ್ಮನಂಜೇಗೌಡ ಹಾಗೂ ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಮತ್ತು ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ವಿ. ಚಂದ್ರಶೇಖರಗೌಡ ಕೃಪಾಕಟಾಕ್ಷದಿಂದ ನಾನು ಈ ಸ್ಥಾನ ಗಳಿಸಲು ಸಾಧ್ಯವಾಯಿತು. ನನ್ನ ಕೈಲಾದ ಮಟ್ಟಿಗೆ ಈ ಸಹಕಾರ ಸಂಘವನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು. ಚುನಾವಣಾಧಿಕಾರಿಯಾಗಿ ಹುಂಗೇನಹಳ್ಳಿ ಪಿಡಿಒ ಜಿ.ಆರ್. ಮಂಜುನಾಥ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಚಲಪತಿ, ಮುಖಂಡರಾದ ಜಿ. ಚಂದ್ರಪ್ಪ, ವಿಶ್ವನಾಥಗೌಡ, ಮಧುಸೂದನ್, ಕನಕರಾಜ್, ಗೋಪಿ, ಅಣ್ಣೇಶ್, ಟಿ. ಮಂಜುನಾಥ್, ಎಚ್.ಆರ್. ನಾಗರಾಜ್, ರಾಮಕೃಷ್ಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

