ಕೋಲಾರ

ಎಲ್ಲೋಡು ಗ್ರಾಮದಲ್ಲಿ ಜನಸ್ಪಂದನ ಸಭೆ

Published On :

ಗುಡಿಬಂಡೆ: ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಸೆ.7ರಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ನಡೆಯಲಿದೆ. ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಸಭೆಯಲ್ಲಿ ನಿವೇದಿಸಿಕೊಂಡು ಪರಿಹಾರ ಪಡೆಯಬೇಕೆಂದು ತಹಸೀಲ್ದಾರ್ ಎಸ್. ಶೈಲಜಾ ಕೋರಿದ್ದಾರೆ.
ವಿದ್ಯಾರ್ಥಿ ವೇತನ ಬಿಡುಗಡೆ ಒತ್ತಾಯ
ಕೋಲಾರ: ಬಂಗಾರಪೇಟೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ವರ್ಗಗಳ ವಿದ್ಯಾರ್ಥ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ವಿಳಂಬವಾಗುತ್ತಿರುವುದನ್ನು ಖಂಡಿಸಿ ಆತ್ಮವಿಶ್ವಾಸ ವೇದಿಕೆಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ವೇದಿಕೆಯ ರಾಜ್ಯಾಧ್ಯಕ್ಷ ಸೀಸಂದ್ರ ಎಂ.ಎನ್. ಭಾರದ್ವಾಜ್ ಮಾತನಾಡಿ, ವಿದ್ಯಾರ್ಥಿ ವೇತನ ವಿಳಂಬದಿಂದಾಗಿ ಬಡ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವುದರಿಂದ ಕೂಡಲೇ ಸರ್ಕಾರ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಎಂ.ಎಸ್. ಶಾಮಸುಂದರ್, ಮುಖಂಡರಾದ ನಯಾಜ್ ಅಹ್ಮದ್, ಅಯೂಬ್, ಬಿ. ಆಕಾಶ್, ದಲಿತ ಹಿರಿಯ ಮುಖಂಡ ದಲಿತ ನಾರಾಯಣಸ್ವಾಮಿ, ಚಂದ್ರಶೇಖರ್ ಇದ್ದರು.
ಲೇಖಕಿ ಹತ್ಯೆಗೆ ಖಂಡನೆ: ಕಾಬೂಲ್ನಲ್ಲಿ ತಾಲಿಬಾನ್ ಉಗ್ರರು ಭಾರತೀಯ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಆತ್ಮ ವಿಶ್ವಾಸ ವೇದಿಕೆಯ ಅಧ್ಯಕ್ಷ ಸೀಸಂದ್ರ ಎಂ.ಎನ್.ಭಾರದ್ವಾಜ್ ತೀವ್ರವಾಗಿ ಖಂಡಿಸಿದ್ದಾರೆ.
ಕ್ರೀಡಾಕೂಟ ಉದ್ಘಾಟನೆ
ಚಿಕ್ಕಬಳ್ಳಾಪುರ: ಕ್ರೀಡೆಯ ಮೂಲಕ ಮಾನಸಿಕ ಸ್ಥಿರತೆ ಸಿಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ ತಿಳಿಸಿದರು. ಅವರು ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ 2 ದಿನದ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಶಿಕ್ಷಣ ಪಡೆಯುವುದಕ್ಕಿಂತ ಮುಖ್ಯವಾಗಿ ಹೊರಗಡೆ ಪಡೆಯುವ ಶಿಕ್ಷಣ ಸಹಾಯಕವಾಗುತ್ತದೆ. ಕ್ರೀಡೆ ಮಾನಸಿಕ ಶಕ್ತಿ, ಕ್ರಿಯಾಶೀಲತೆ ನೀಡುತ್ತದೆ. ಕ್ರೀಡಾಭಾವನೆಯಿಂದ ನಾವು ಪ್ರಗತಿ ಸಾಧಿಸುತ್ತೇವೆ. ಕ್ರೀಡಾ ಕೂಟಗಳಲ್ಲಿ ಎಷ್ಟೋ ಪ್ರತಿಭೆಗಳು ಅರಳುತ್ತದೆ. ನಾವು ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾದರೂ ಕ್ರೀಡೆಯಲ್ಲಿ ಸಾಧಿಸಿದ್ದು, ಕಡಿಮೆ  ಇದಕ್ಕೆ ನಿರಂತರ ಶ್ರಮ, ಅಭ್ಯಾಸ ಮುಖ್ಯ ಎಂದರು.
ಅಕ್ಷರ ದಾಸೋಹ ಅಧಿಕಾರಿ ಚಂದ್ರಪ್ಪ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಶ್ರಮ ಸೋಲು ಗೆಲುವಿಗೆ ದಾರಿ ಎಂದೇ ತಿಳಿಯಬೇಕು. ಗೆದ್ದವರು ಮತ್ತಷ್ಟು ಗುರಿಗಾಗಿ ಯತ್ನಿಸಬೇಕು. ಕ್ರೀಡೆಯಲ್ಲಿ ಬಹು ಮುಖ್ಯವಾಗಿ ಕ್ರೀಡಾಭಾವನೆ ಮುಖ್ಯ ಎಂದರು.
'ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ'
ಮಾಲೂರು: ವಿದ್ಯಾರ್ಥಿಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ಶಿಕ್ಷಕರಲ್ಲಿ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ಹೂರ ವಲಯಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ನಿವೃತ್ತ ಶಿಕ್ಷಕರಾದ ಚೌಡಪ್ಪ, ಕೃಷ್ಣಪ್ಪ ಹಾಗೂ ಹಿರಿಯ ಶಿಕ್ಷಕಿ ಎಸ್.ವೆಂಕಟಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಅರಣ್ಯಾಧಿಕಾರಿ ಆಂಜಿನಪ್ಪ, ಸಂಸ್ಥೆ ಕಾರ್ಯದರ್ಶಿ ಕೆ.ಆರ್.ರುದ್ರಪ್ಪ, ಸಿ.ವೆಂಕಟಸ್ವಾಮಿ, ಮುಖ್ಯೋಪಾಧ್ಯಯ ಬಿ.ಸಿ.ವೆಂಕಟರಮಣ, ಮಂಜುಳ, ಬಿಇಡಿ ಕಾಲೇಜು ಪ್ರಾಂಶುಪಾಲ ಮುನಿನಾರಾಯಣಪ್ಪ ಇದ್ದರು. ಇದೆ ಸಂದರ್ಭದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಮಂಜುನಾಥ್ ಸ್ವಾಗತಿಸಿದರು.ಶ್ರೀರಾಮ್ ನಿರೂಪಿಸಿದರು. ಕುಮಾರಿ ಇಂದ್ರಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.