ಕೋಲಾರ

ನಮೋ ಬ್ರಿಗೇಡ್ ಅರಿವು ಆಂದೋಲನ

Published On :

ಕೆಜಿಎಫ್: ದೇಶವನ್ನು ಸಮೃದ್ಧವನ್ನಾಗಿ ಮುನ್ನಡೆಸಲು ಮತ್ತು ಬಡ ಕುಟುಂಬ ವರ್ಗಗಳ ಅಭಿವೃದ್ಧಿಯ ಬಗ್ಗೆ ನಿರಂತರಾಗಿ ಚಿಂತಿಸುತ್ತಿರುವ ಹಾಗೂ ಶಕ್ತಿಶಾಲಿ ಭಾರತ ನಿರ್ಮಾಣಕ್ಕಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಇಂದಿನ ಯುವಕರು, ವಿದ್ಯಾರ್ಥಿಗಳು ಮಹಿಳೆಯರು ಮುಂದಾಗಬೇಕಿದೆ ಎಂದು ನಮೋ ಬ್ರಿಗೇಡ್ ಸಂಘಟನೆಯ ರಾಜ್ಯ ಪ್ರಮುಖರಾದ ನಿಕೇತ್ರಾಜ್ ಹಾಗೂ ಭೀಮರಾವ್ ಹೇಳಿದರು.
ಕೆಜಿಎಫ್ ನಗರದ ಕಿಂಗ್ಜಾರ್ಜ್ ಹಾಲ್ ಆವರಣದಲ್ಲಿ ಆಯೋಜಿಸಲಾಗಿದ್ದ ನಮೋ ಬ್ರಿಗೇಡ್ ಅರಿವು ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ವೇಳೆ ಮಾತನಾಡಿದ ಅವರು, ಜಗತ್ತಿಗೆ ಶಕ್ತಿಶಾಲಿಯಾದ ಭಾರತ ದೇಶವನ್ನು ಅಗ್ರಮಾನ್ಯ ರಾಷ್ಟ್ರವಾಗಿಸಲು ಚಿಂತನೆ ನಡೆಸುತ್ತಿರುವ ದೇಶದ ಯುವಕರು, ಮಹಿಳೆಯರು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು, ರೈತರು ಗ್ರಾಮಸ್ಥರ ಮತ್ತು ಹುತಾತ್ಮಕ ಸ್ವತಂತ್ರ ಹೋರಾಟರಾರರ, ಸೈನಿಕರ ಕನಸು ನನಸಾಗಲು ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಹೆಚ್ಚಿನ ಬೆಂಬಲವನ್ನು ನೀಡಲು ಎಲ್ಲರೂ ಒಗ್ಗಟಿನಿಂದ ಶ್ರಮಿಸಬೇಕು ಎಂದರು. ಭಾರತದ ರೂಪಾಯಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಯುಪಿಎ ಸರ್ಕಾರವೇ ಇಂದು ದೇಶದ ಪ್ರಧಾನಿಗಳು ರೂಪಾಯಿ ಬೆಲೆ ಕುಸಿತಕ್ಕೆ ದೇಶದ ಸುಪ್ರಸಿದ್ದ ದೇವಸ್ಥಾನಗಳಾದ ತಿರುಪತಿ ಮತ್ತು ಪದ್ಮನಾಭ ದೇವಸ್ಥಾನಗಳಲ್ಲಿರುವ ಕೋಟ್ಯಾಂತರ ರುಪಾಯನ್ನು ತಂದು ರುಪಾಯಿ ಬೆಲೆ ಕುಸಿತವನ್ನು ಸರಿಪಡಿಸಲು ಭಿಕ್ಷೆ ಬೇಡಲು ಮುಂದಾಗಿದೆ ಮತ್ತು ಲೋಕಸಭೆಯಲ್ಲಿ ಬಿಲ್ ಪಾಸ್ ಮಾಡುವ ಕುರಿತು ಚಿಂತನೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಭಾರತದ ದೇವಸ್ಥಾನಗಳಲ್ಲಿರುವ ಹಣವನ್ನು ತರುವ ಬದಲು ಸೋನಿಯಾಗಾಂಧಿ ಕುಟುಂಬಗಳು ಸ್ವಿಸ್ ಬ್ಯಾಂಕ್ನಲ್ಲಿಟ್ಟಿರುವ ಕೋಟಿ ಕೋಟಿ ಹಣವನ್ನು ತಂದು ರೂಪಾಯಿ ಕುಸಿತವನ್ನು ಸರಿ ಮಾಡಲಿ ಎಂದು ಆಪಾದಿಸಿದರು.ಆದ್ದರಿಂದ ಯುವ ಶಕ್ತಿಗಳೇ ಈ ದೇಶದ ಅಭಿವೃದ್ದಿಗಾಗಿ ಚಿಂತಿಸುತ್ತಿರುವ ವಿದ್ಯಾರ್ಥಿಗಳೇ ಭಾರತ ದೇಶ ಈ ಹಿಂದೆ ಕಾಣದಂತಹ ಆಡಳಿತ ಮತ್ತು ಬಡವರ ಕುಟುಂಬ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲರೂ ನರೇಂದ್ರಮೋದಿ ಪ್ರಧಾನಮಂತ್ರಿಯಾಗುವ ಅವಕಾಶವನ್ನು ಕಲ್ಪಿಸಲು ಒಗ್ಗಟ್ಟಿನಿಂದ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.
ನಮೋ ಬ್ರಿಗೇಡ್ ಅರಿವು ಆಂದೋಲನಾ ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡ ಭೀಮಾರಾವ್, ವಿಶ್ವಹಿಂದು ಪರಿಷತ್ ಮುಖಂಡರಾದ ಸಿಂಧ್ಯಾ, ರಾಮಕೃಷ್ಣ, ಪ್ರದೀಪ್ಗೌಡ, ಸುಬ್ರಮಣಿ ಪಂಡಿತ್, ಕಾಂತಮ್ಮ, ಭಾಗ್ಯಮ್ಮ, ಸರೋಜಮ್ಮ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಜಿಲ್ಲಾ ಸಂಚಾಲಕ ಸುನಿಲ್, ಬಿಜೆಪಿ ಪಕ್ಷದ ಅಧ್ಯಕ್ಷ ಸುರೇಶ್ನಾರಾಯಣ, ಮುಖಂಡರಾದ ನವೀನ್ರಾಮ್, ಬಿಜೆಪಿ ಪಕ್ಷ, ಎಬಿವಿಪಿ, ವಿಶ್ವಹಿಂದು ಪರಿಷತ್ ಸೇರಿದಂತೆ ಇತರೆ ಸಂಘಟನೆಗಳ ಮುಖಂಡರು ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.