ಲೋಕಸಭೆ ಟಿಕೆಟ್ ಆಕಾಂಕ್ಷಿ ನಾರಾಯಣಸ್ವಾಮಿ ಪ್ರಚಾರ
ಕ.ಪ್ರ. ವಾರ್ತೆ ಮಾಲೂರು ಸೆ.6
ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಬಂಗಾರಪೇಟೆಯ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಅವರು ಪಟ್ಟಣದ ಗ್ರಾಮದೇವತೆ ಮಾರಿಕಾಂಬ ದೇವಾಲಯದಲ್ಲಿ ಗುರುವಾರದಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ವರ್ಧಿಸಲು ಪಕ್ಷದ ಟಿಕೇಟ್ ಆಕಾಂಕ್ಷಿ ನನ್ನಾಗಿದ್ದು, ತಾಲೂಕಿನಲ್ಲಿರುವ ಬಿಜೆಪಿಯ ಜನಪ್ರತಿನಿಧಿಗಳು-ಮುಖಂಡರು ಹಾಗೂ ಹಿತೈಷಿಗಳನ್ನು ಭೇಟಿ ಮಾಡಲು ತಾಲೂಕಿಗೆ ಭೇಟಿ ನೀಡಿದ್ದು, ಎಲ್ಲರ ಸಹಕಾರ ಸಿಗುವ ಭರವಸೆ ಇದೆ ಎಂದರು.
ದೇಶದದ್ಯಾಂತ ಮೋದಿ ಹವಾ ಬೀಸುತ್ತಿದ್ದು,ಯುಪಿಎ ಸರ್ಕಾರದ ವಿಫಲತೆಯೇ ಬಿಜೆಪಿ ಗೆಲವಿಗೆ ಶ್ರೀರಕ್ಷೆಯಾಗಲಿದೆ ಎಂದರು. ಆಕ್ಷಾಂಕ್ಷಿಗಳು ಹೆಚ್ಚಿದ್ದರೂ ನನಗೆ ಟಿಕೇಟ್ ಸಿಗುವ ಭರವಸೆ ಇರುವುದರಿಂದ ಇಂದಿನಿಂದಲ್ಲೇ ಬಿಜೆಪಿಯ ಹೆಚ್ಚು ಬೆಂಬಲವಿರುವ ಮಾಲೂರಿನಿಂದ ಪ್ರಚಾರ ಹಾಗೂ ಮುಖಂಡರುಗಳ ಭೇಟಿ ಮಾಡುತ್ತಿದ್ದೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ಕೋಲಾರ ಕ್ಷೇತ್ರದಿಂದ ಸ್ವರ್ಧಿಸಲು ಡಿ.ಎಸ್. ವೀರಯ್ಯ, ಮಾಜಿ ಶಾಸಕ ಸಂಪಂಗಿ, ಎಂ. ನಾರಾಯಣಸ್ವಾಮಿ ಸೇರಿದಂತೆ ಹಲಾವರು ಅರ್ಹ ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಯಾಗಿದ್ದು, ಕೇಂದ್ರ ಹೈಕಮಾಂಡ್ ಸೂಚಿಸುವ ಅಭ್ಯರ್ಥಿಗೆ ಕಳೆದ ಇಪ್ಪತ್ತೈದು ವರ್ಷದಿಂದ ವಿಫಲ ಆಡಳಿತ ನಡೆಸಿದ ಕಾಂಗ್ರೆಸ್ ನ್ನು ಸೋಲಿಸಲು ಒಗಟ್ಟಿನಿಂದ ಕೆಲಸ ಮಾಡಲಿದ್ದೇವೆ ಎಂದರು.
ಈ ಬಾರಿ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಿರುವುದರಿಂದ ಟಿಕೆಟ್ ವಂಚಿತ ನಾಯಕರುಗಳು ಹಾಗೂ ಅವರ ಹಿಂಭಾಲಕರು ತಮ್ಮ ಅಸಾಮಾಧಾನವನ್ನು ಬದಿಗೊತ್ತಿ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದರು.
ತಾಲೂಕು ಅಧ್ಯಕ್ಷ ವೆಂಕಟೇಶ್, ತಾಲೂಕು ಪಂಚಾಯಿತಿ ಸದಸ್ಯ ಗೋಪಾಲ್ ಗೌಡ, ಜಿಲ್ಲಾ ಉಪಾಧ್ಯಕ್ಷರಾದ ತಬಲನಾರಾಯಣಪ್ಪ, ಬಂಗಾರಪೇಟೆಯ ನಾಗಭೂಷಣ್, ಪುರಸಭೆ ಸದಸ್ಯರಾದ ಎಂ.ವಿ. ವೇಮನ, ಎಂ.ಪಿ. ವಿಜಯಕುಮಾರ್, ಸಿ.ಪಿ. ನಾಗರಾಜ್, ಸೋಮಣ್ಣ, ಲಿಂಗೇಶ್ವರಯ್ಯ, ಶ್ರೀವಲ್ಲಿ ರಮೇಶ್ ,ಭಾರತಿ ನಂಜುಂಡಪ್ಪ, ಬಂಗಾರಪೇಟೆ ಪುರಸಭೆ ಸದಸ್ಯ ಡಿ.ಸಿ. ಮೂರ್ತಿ, ಬಂಗಾರಪೇಟೆ ತಾ.ಪಂ. ಅಧ್ಯಕ್ಷೆ ರೇಣುಕಾ ಬಾಲಚಂದ್ರ, ಸದಸ್ಯೆ ವಿಜಯಲಕ್ಷಿ, ತಿಮ್ಮರಾಯ ನಾಯಕ್, ರಾಜರಾಂ, ದೇವರಾಜ ರೆಡ್ಡಿ, ವೆಂಕಟೇಶ್, ಶೇಷಗಿರಿ, ಶಂಕರ್, ರಾಜಪ್ಪ, ಆಂಜಿನಪ್ಪ, ವೆಂಕಟೇಶ್ಗೌಡ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

