ಕೋಲಾರ

'ಸರ್ಕಾರದಿಂದ ನಿಡುಮಾಮಿಡಿ ಮಠ ನಿರ್ಲಕ್ಷ್ಯ'

Published On :

ಬಾಗೇಪಲ್ಲಿ: ಒಂದು ಸಾವಿರ ವರ್ಷಗಳಷ್ಟು ಪುರಾತನವಾದ ನಿಡುಮಾಮಿಡಿ ಮಠವನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯದಿಂದ ನೋಡುತ್ತಿರುವುದು ನೋವು ತಂದಿದೆ ಎಂದು ಗೂಳೂರು ನಿಡುಮಾಮಿಡಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವೀರಭದ್ರಚನ್ನಮಲ್ಲ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಗೂಳೂರು ನಿಡುಮಾಮಿಡಿ ಮಹಾಸಂಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ನಾನು ಬಾಲ್ಯದ ದೆಸೆಯಿಂದಲೇ ಸ್ವಾಮೀಜಿಯಾಗಿ ಸಮಾಜವನ್ನು ಬದಲಿಸುವಂತಹ ಕೆಲಸವನ್ನು ಮಾಡಬೇಕೆಂಬ ಕನಸು ಕಂಡಿದ್ದೆ. ಅದೇ ರೀತಿಯಲ್ಲಿ ನಿಡುಮಾಮಿಡಿ ಮಠಕ್ಕೆ ಮಠಾಧೀಶನಾದ ಮೇಲೆ ಈ ಭಾಗದ ಜನರಿಗೆ ಅನಕೂಲವಾಗಲೆಂದು ಪದವಿ ಕಾಲೇಜು ಪ್ರಾರಂಭಿಸಿದೆ, ಸ್ನಾತಕೋತರ ಶಿಕ್ಷಣ ಕೇಂದ್ರವನ್ನು ಇಲ್ಲಿ ತೆರೆಯಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ಸ್ಥಳೀಯ ಹಾಗೂ ರಾಜ್ಯ ಸರ್ಕಾರ ನನಗೆ ಯಾವುದೇ ರೀತಿಯಲ್ಲಿ ಸಹಕರಿಸಲಿಲ್ಲವಾದ್ದರಿಂದ ನನಗೆ ಭಾರಿ ಹಿನ್ನಡೆಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ಬೇಸರದ ಸಂಗತಿಯೆಂದರೆ ಹಲವು ದಿನಗಳಿಂದ ಈ ಮಠದಲ್ಲಿ ನಿಧಿ ಇದೆ ಎಂಬುದಾಗಿ ಪ್ರಚಾರವನ್ನು ಮಾಡಿರುವ ಹಿನ್ನೆಲೆಯಲ್ಲಿ ನಕಾರಾತ್ಮಕ ಪರಿಣಾಮ ಸಮಾಜದ ಮೇಲೆ ಬೀರಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್. ನರಸಿಂಹನಾಯ್ಡು, ವಕೀಲ ಎ.ಜಿ. ಸುಧಾಕರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಚೆಂಡೂರು ವೆಂಕಟೇಶ್, ಎಪಿಎಂಸಿ ಮಾಜಿ ಸದಸ್ಯ ಮರಿಯಪ್ಪ, ಬಿಳ್ಳೂರು ಅಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಕೆ.ಎಂ. ನಾಗರಾಜು, ಉಪನ್ಯಾಸಕ ನಯಾಜ್ ಅಹಮ್ಮದ್  ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.