ಕೋಲಾರ

ಕಾರ್ಯದರ್ಶಿಗೆ ಪ್ರಶಸ್ತಿ

Published On :

ಕೋಲಾರ: ನಗರದ ಹಾರೋಹಳ್ಳಿ ಹೌಸಿಂಗ್ಬೋರ್ಡ್ ಕಾಲೋಯ ಶುಭಲ ವಿದ್ಯಾಲಯ ಸಂಸ್ಥೆಯ ಕಾರ್ಯದರ್ಶಿ ಬಿ. ಲಕ್ಷ್ಮಿನಾರಾಯಣ ಅವರಿಗೆ ಭಾರತ ರತ್ನ ಡಾ.ಎಸ್. ರಾಧಾಕೃಷ್ಣನ್ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.  ಬೆಂಗಳೂರು ರಾಜಾಜಿ ನಗರದ ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ  ರಾಜ್ಯ ಮಟ್ಟದ ಶಿಕ್ಷಕರ  ದಿನಾಚರಣೆಯ ಪ್ರಯುಕ್ತ  ಆಯೋಜಿಸಿದ್ದ  ಭಾರತ ರತ್ನ ಡಾ. ಎಸ್. ರಾಧಾಕೃಷ್ಣನ್ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ರವರು ಬಿ. ಲಕ್ಷ್ಮಿನಾರಾಯಣ ರವರಿಗೆ ಪ್ರಶಸ್ತಿ ವಿತರಿಸಿ ಗೌರವಿಸಿದರು.
ವೈದ್ಯಕೀಯ ಶಿಬಿರ ಲಾಭ ಪಡೆಯಲು ಕರೆ
ಗುಡಿಬಂಡೆ: ದೀನ ದಲೀತರು, ಬಡ ಬಗ್ಗರು ಮುಂತಾದ ವರ್ಗಗಳಿಗೆ ಅನುಕೂಲಕರವಾಗುವ ದೃಷ್ಟಿಯಿಂದ ಸ್ವಯಂ ಸೇವಾ ಸಂಸ್ಥೆಗಳು ಏರ್ಪಡಿಸುವ ಉಚಿತ ವೈದ್ಯಕೀಯ ಶಿಬಿರಗಳ ಲಾಭ ಹಾಗೂ ನೀಡುವ ನೆರವನ್ನು ಅರ್ಹರು ಹೊಂದಬೇಕೆಂದು ಜಯಕರನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎನ್. ದೀಪಕ್ ನುಡಿದರು.
ಜಯಕರ್ನಾಟಕ ತಾಲೂಕು ಶಾಖೆ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಉಚಿತ ಹೃದ್ರೋಗ ಮತ್ತು ನರರೋಗ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲಾಧ್ಯಕ್ಷ ಗಂಗಾಧರ್ ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು. ಶಿಬಿರದಲ್ಲಿ ಸುಮಾರು 200 ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಸೂಕ್ತ ಸಲಹೆ ಪಡೆದರು.  ಈ ವೇಳೆ ತಾಲ್ಲೂಕು ಅಧ್ಯಕ್ಷ ತಿಮ್ಮಾರೆಡ್ಡಿ, ಉಪಾಧ್ಯಕ್ಷ ವಿ. ರಾಜಶೇಖರ್, ಪದಾಧಿಕಾರಿಗಳಾದ ಲಕ್ಷ್ಮೀಪತಿ, ಗಂಗಿರೆಡ್ಡಿ, ಮೊಯಿದ್ದೀನ್, ಸತೀಶ್, ಅಬ್ದುಲ್ ವಹಾಬ್, ಸೇರಿದಂತೆ ಹಲವರು ಇದ್ದರು.
ರಜೆ ಘೋಷಣೆಗೆ ಒತ್ತಾಯ
ಕೋಲಾರ: ಮೈಸೂರು ಹುಲಿ ಎಂದೇ ಪ್ರಖ್ಯಾತಿಯಾಗಿರುವ ಟಿಪ್ಪು ಸುಲ್ತಾನ್ ಅವರ ಜನ್ಮ ದಿನದಂದು  ಸರ್ಕಾರಿ ರಜೆ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಟಿಪ್ಪು ಸೆಕ್ಯುಲರ್ ಸೇನೆ ವತಿಯಿಂದ ಮುಜರಾಯಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕರ್ನಾಟಕಕ್ಕೆ ಇವರ ಕೊಡುಗೆ ಅಪಾರ ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನದಂದು ಸರ್ಕಾರಿ ರಜೆಯನ್ನು ಘೋಷಿಸುವಂತೆ ಟಿಪ್ಪು ಸೆಕ್ಯುಲರ್ ಸೇನೆಯ ಪ್ರಧಾನ ಕಾರ್ಯದರ್ಶಿ ಸೀಸಂದ್ರ ಎಂ.ಎನ್. ಭಾರದ್ವಾಜ್, ಜಿಲ್ಲಾಧ್ಯಕ್ಷ ಏಜಿಯಾಜ್ ಖಾನ್, ತಾಲೂಕು ಅಧ್ಯಕ್ಷ ಆಜಂ ಶರೀಫ್, ಕಾರ್ಯದರ್ಶಿ ಭರತ್ರಾಜ್, ಚಂದ್ರಶೇಖರ್, ಅಲ್ಲಾ ಬಕಾಶ್, ಆಸ್ಲಂ, ಸೈಯದ್ ನಜೀರ್ ಅಹ್ಮದ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.