ಪಹಣಿ ತಿದ್ದುಪಡಿಗೆ ವಿಳಂಬ: ಆರೋಪ
ಬಂಗಾರಪೇಟೆ: ಇಲ್ಲಿನ ತಾಲೂಕು ಕಚೇರಿಯಲ್ಲಿರುವ ರೈತರ ಪಹಣಿ ತಿದ್ದುಪಡಿಗಳನ್ನು ತ್ವರಿತವಾಗಿ ಮಾಡದೆ ತಿಂಗಳಾನುಗಟ್ಟಲೆ ಕಚೇರಿಯಲ್ಲೇ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದು ಈ ಧೋರಣೆಯನ್ನು ಕೂಡಲೆ ಕೈ ಬಿಟ್ಟು ರೈತರ ಕೆಲಸಗಳನ್ನು ಅಲೆಸದೆ ಮಾಡಿಕೊಡಬೇಕೆಂದು ಆಗ್ರಹಿಸಿ ನವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ತಾಲೂಕು ಕಚೇರಿ ಮೊದಲೇ ಲಂಚದಿಂದ ಕೂಡಿದ್ದು ರೈತರಿಂದ ಹಣಪಡೆಯದೇ ಯಾವುದೇ ಕೆಲಸಗಳನ್ನು ಸಿಬ್ಬಂದಿ ವರ್ಗ ಮಾಡಿಕೊಡುವುದಿಲ್ಲ ಅಂತೆಯೇ ಪಹಣಿಯನ್ನು ತಿದ್ದುಪಡಿ ಮಾಡಲು ಹಣ ನೀಡದ ರೈತರ ಕಡತಗಳನ್ನು ವರ್ಷಾನುಗಟ್ಟಲೆ ಕಚೇರಿಯಲ್ಲೇ ಇಟ್ಟುಕೊಂಡು ಹಣ ನೀಡುವ ರೈತರ ಕೆಲಸಗಳು ಮಾತ್ರ ಬೇಗನೆ ನಡೆಯುತ್ತಿದೆ. ಇದರಿಂದ ದೂರದ ಗ್ರಾಮಗಳಿಂದ ನೂರಾರು ವೆಚ್ಚ ಮಾಡಿಕೊಂಡು ಕಚೇರಿಗೆ ಬರುವ ರೈತರಿಗೆ ಇಲ್ಲಿಯೂ ಶೋಷಣೆಗೆ ತುತ್ತಾಗುತ್ತಿದ್ದಾರೆ.
ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ತಾಲೂಕು ಕಚೇರಿ ಸಿಬ್ಬಂದಿ ಧೋರಣೆಯನ್ನು ಖಂಡಿಸಿದರು. ಕಚೇರಿಗೆ ಬರುವ ರೈತರ ಹಾಗೂ ಸಾರ್ವಜನಿಕರ ಕೆಲಸಗಳನ್ನು ಬೇಗನೆ ಮಾಡಿಕೊಡುವಂತೆ ಸಿಬ್ಬಂದಿಗೆ ತಹಸೀಲ್ದಾರ್ ಎಚ್ಚರಿಕೆ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು ಅಲ್ಲದೆ ನೂತನ ಶಾಸಕರು ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಯಾವುದೇ ಕಾರಣಕ್ಕೂ ರೈತರನ್ನು ಅಲೆಸದೆ ತ್ವರಿತವಾಗಿ ಮಾಡಿಕೊಡಬೇಕು ಯಾರಾದರೂ ಕೆಲಸ ಮಾಡಿಕೊಡಲು ಲಂಚ ಕೇಳಿದರೆ ನನಗೆ ತಿಳಿಸಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರೂ ಅವರ ಮಾತಿಗೂ ಕವಡೆ ಕಾಸಿನ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನವಕರ್ನಾಕಟ ರಕ್ಷಣಾ ವೇದಿಕೆ ರಾಜ್ಯದ್ಯಕ್ಷ ಎಸ್.ಎನ್. ರಾಜಗೋಪಾಲಗೌಡ, ಜಿಲ್ಲಾಧ್ಯಕ್ಷ ಚಿನ್ನಿವೆಂಕಟೇಶ್, ತಾಲೂಕು ಅಧ್ಯಕ್ಷ ಕೆ.ಸಿ. ಗೋಪಾಲ್, ಮಧು, ರಾಜು, ಜೋಗಿ, ಪ್ರಸನ್ನ, ಬಿ.ಎಂ.ಶ್ರೀನಿವಾಸ್, ತಮ್ಮಯ್ಯ, ಸಚಿನ್, ನಾಗರಾಜ್, ಬಸವಗೌಡ, ಸುರೇಶ್, ಚಂದ್ರೇಗೌಡ, ರಾಘವೇಂದ್ರ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

