'ಮಕ್ಕಳನ್ನು ದೇಶ ಭಕ್ತರನ್ನಾಗಿ ಮಾಡಿ'
ಕೋಲಾರ: ನಮ್ಮನ್ನಾಳುವ ಬಹುತೇಕರು ದೇಶಭಕ್ಷಕರೇ ಆಗಿರುವ ಸಂದರ್ಭದಲ್ಲೂ ಭಾರತವು ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿಂದ ನರಳುವಂತಾಗಿರುವುದರಿಂದ ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸುವ ಮೂಲಕ ಭಾರತವನ್ನು ರಕ್ಷಣೆ ಮಾಡುವ ಶಕ್ತಿ ತುಂಬಲು ಶಿಕ್ಷಕರು ಚಿಂತನೆ ಮಾಡಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಸಲಹೆ ಮಾಡಿದರು.
ನಗರದ ಗೋಕುಲ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಗುರುವಾರ ಶಿಕ್ಷಕ ದಿನಾಚರಣೆ ಅಂಗವಾಗಿ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ದಿಸೆಯಲ್ಲಿ ಶಿಕ್ಷಕರು ಕೇವಲ ಪಠ್ಯವಸ್ತುವಿಗಷ್ಟೇ ಸೀಮಿತರಾಗದೇ ಮಕ್ಕಳಲ್ಲಿ ದೇಶಭಕ್ತಿ, ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ತುಂಬುವ ಕೆಲಸದಲ್ಲಿ ನಿರತರಾಗಬೇಕೆಂದರು.
ಪಾಠ ಮಾಡುವುದನ್ನು ಬಿಟ್ಟು ಮಿಕ್ಕೆಲ್ಲ ಕೆಲಸಗಳಿಗೆ ಶಿಕ್ಷಕರನ್ನು ತೊಡಗಿಸುವ ಗುಂಗಿನಿಂದ ಶಿಕ್ಷಣ ಇಲಾಖೆ ಹೊರಬಂದರೆ ಮಾತ್ರ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕಿ ಜೆ.ಎಸ್. ಅನಿತಾ ನಂದೀಶ್ ಅವರಿಗೆ ಗೋಕುಲ ಉತ್ತಮ ಶಿಕ್ಷಕಿ ಹಾಗೂ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಚಾರ್ಲ್ಸ್ ಎಡ್ವರ್ಡ್ಗೆ ಪ್ಲಾರೆನ್ಸೆ ನೈಂಟಿಂಗೇಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು, ಗೋಕುಲ ಸ್ನಾತಕೋತ್ತರ ಕೇಂದ್ರದ ಪ್ರಾದ್ಯಾಪಕ ಪ್ರೊ. ಸುಬ್ಬರಾಜುರನ್ನು ಸನ್ಮಾನಿಸಲಾಯಿತು.
ಗೋಕುಲ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದು ನಗರಸಭೆ ಮಾಜಿ ಸದಸ್ಯೆ ಯಶೋಧ, ಪದವಿ ಕಾಲೇಜು ಪ್ರಾಚಾರ್ಯ ಪ್ರೊ.ವಿ. ನಾಗರಾಜ್, ಸ್ನಾತಕೋತ್ತರ ಕೇಂದ್ರದ ಎಚ್.ಎಸ್. ರಮೇಶ್, ಪಿ.ಯು ಕಾಲೇಜು ಪ್ರಾಂಶುಪಾಲೆ ಮಾಲತಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮೀ ಇದ್ದರು. ಉಪನ್ಯಾಸಕ ಗಂಗೋಜಿರಾವ್ ನಿರೂಪಿಸಿ, ನರಸಿಂಹಮೂರ್ತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

