ವಿನಾಯಕ ದೇವರ ರಥೋತ್ಸವಕ್ಕೆ ಸಜ್ಜು
ಬಿ.ಎನ್. ಮುಕುಂದ
ಮುಳಬಾಗಲು: ಪಟ್ಟಣದ ಸುತ್ತಮುತ್ತ ಹಲವಾರು ಪುರಾಣ ಪ್ರಸಿದ್ಧ ದೇವಾಲಯಗಳಿವೆ. ಆ ಪೈಕಿ ಪಟ್ಟಣದ ಆಂಜನೇಯಸ್ವಾಮಿ ದೇವಾಲಯ ಹಾಗೂ ಸೋಮೇಶ್ವರ ಸ್ವಾಮಿ ದೇವಾಲಯಗಳು ಒಂದಾದರೆ, ವಿರೂಪಾಕ್ಷಿಯ ವಿರೂಪಾಕ್ಷೇಶ್ವರ, ಅವಣೆಯ ರಾಮಲಿಂಗೇಶ್ವರ ದೇವಾಲಯಗಳು ಪ್ರಸಿದ್ಧಿ. ಇದರೊಂದಿಗೆ ಮುಳಬಾಗಲು ಪಟ್ಟಣಕ್ಕೆ 12 ಕಿಮೀ ದೂರದಲ್ಲಿರುವ ಕುರುಡುಮಲೆ ಗ್ರಾಮದ ವಿನಾಯಕ ದೇವಾಲಯಗಳಲ್ಲಿ ಪ್ರಸಿದ್ಧಿಯಾಗಿದೆ.
ಇಲ್ಲಿನ ಏಕಶಿಲಾ 18 ಅಡಿ ಎತ್ತರದ ಮೂರ್ತಿ, ತಮಿಳುನಾಡಿದ ಪಿಳಿಯಾರ್ಕಟ್ಟಿಯಲ್ಲಿ ಮಾತ್ರ ಕಾಣಬಹುದಾಗಿದೆ. ಪುರಾತತ್ವದ ಇತಿಹಾಸವಿರುವ ವಿನಾಯಕ ಕೂಟಾದ್ರಿ ಕ್ಷೇತ್ರವೆಂದು ಪ್ರಸಿದ್ಧಿಯಾಗಿದೆ. ಕೃತಯುಗದಲ್ಲಿ ಕೂಡುಮಲೆ ಎಂದು ಬ್ರಹ್ಮ ವಿಷ್ಣು, ಮಹೇಶ್ವರ ಸೇರಿದಂತೆ 33 ಕೋಟೆ ದೇವರುಗಳು ವಿನಾಯಕ ವಿಗ್ರಹವನ್ನು ಬಯಲಿನಲ್ಲಿ ಸ್ದಾಪಿಸಿ ಪೂಜೆ ಮಾಡಿದರೆಂಬ ಪ್ರತೀತಿ ಇದೆ. ದೇವಾಲಯದ ಸುತ್ತಮುತ್ತ ಹರಡಿರುವ ಬೆಟ್ಟದ ತಪ್ಪಲಿನ ಸುತ್ತಲು ಹರಡಿರುವ ಬೆಟ್ಟದ ತಪ್ಪಲಿನಲ್ಲಿ ಕೌಂಡಿನ್ಯ ಮಹರ್ಷಿ ವಾಸವಾಗಿದ್ದರು. ಇಲ್ಲಿ ಉಗಮವಾಗುವ ಕೌಂಡಿನ್ಯ ನದಿ ನೇರವಾಗಿ ಆಂಧ್ರಪ್ರದೇಶದಲ್ಲಿ ಹರಿಯುತ್ತದೆ. ಇದು ತ್ರಿಕೂಟ ಕ್ಷೇತ್ರವೂ ಆಗಿದೆ. ಕೃಷ್ಣದೇವರಾಯರ ಕಾಲದಲ್ಲಿ ದೇವಾಲಯ ಅಭಿವೃದ್ಧಿಗೊಂಡಿದೆ. ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಇಲ್ಲಿನ ದೇವಾಲಯಕ್ಕೆ ಬಂದು ಹೋಗುತ್ತಿದ್ದರು. ಅವರ ಕಾಲದಲ್ಲಿ ದೇವಾಲಯಕ್ಕೆ ವಿದ್ಯುತ್ ಸೌಲಭ್ಯ, ಗ್ರಾಮಕ್ಕೆ ಕೊಳವೆ ಮೂಲಕ ನೀರು ಬಂದಿತು. ಇಲ್ಲಿ ಪ್ರತಿವರ್ಷ ವಿನಾಯಕ ಚತುರ್ಥಿ ಮರುದಿವಸ ರಥೋತ್ಸವ ನಡೆಯುತ್ತದೆ. ಸೆಪ್ಟೆಂಬರ್ 9ಕ್ಕೆ ಕಲ್ಯಾಣೋತ್ಸವ ಹಾಗೂ 10ರಂದು ವಿನಾಯಕ ದೇವರಿಗೆ ಮಹಾಭಿಷೇಕ, ಕಲಶಸ್ಥಾಪನೆ, ರಥೋತ್ಸವ ಕಾರ್ಯಕ್ರಮಗಳು ನಡೆಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

