ಕೋಲಾರ

ಯೋಗಿ ನಾರಾಯಣ ಮಠದಲ್ಲಿ ಸಂಗೀತ ಸುಧೆ

Published On :

ಚಿಂತಾಮಣಿ: ಕೈವಾರದ ಶ್ರೀ ಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಬೆಂಗಳೂರಿನ ಖ್ಯಾತ ಗಾಯಕಿ ಅರುಣ್ ವೆಂಕಟೇಶ್ ಅವರಿಂದ ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿತ್ತು.
ಚಿಂತಾಮಣಿ ತಾಲೂಕಿನ ಕೈವಾರದ ಶ್ರೀ ಯೋಗಿ ನಾರಾಯಣ ಮಠದಲ್ಲಿ ತಾತಯ್ಯನವರ ತತ್ವ ಪದ ಕೀರ್ತನೆಗಳನ್ನು ಹಾಡುತ್ತಾ ಭಕ್ತಾದಿಗಳನ್ನು ಮನಸ್ಸು ಉಲ್ಲಾಸದಿಂದಿರಲು ಪ್ರೇರೇಪಿಸಿದರು. ಇವರಿಗೆ ಸಹಗಾಯನದಲ್ಲಿ ಲಕ್ಷ್ಮೀ ವಿಶ್ವನಾಥ್ ಸಹಕರಿಸಿದರು. ಪಕ್ಕದ ವಾದ್ಯದಲ್ಲಿ ಎ.ವಿ.ಗೋವರ್ಧನ್ ಪಿಟೀಲು, ಕೆ.ಎಸ್.ಪ್ರಶಾಂತ್ ಮೃದಂಗ ಸಹಕಾರ ನೀಡಿದರು.
ಸಂಗೀತ ಕಛೇರಿಯಲ್ಲಿ ಹಲವಾರು ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರ ಮನ ಸೆಳೆದರು. ತ್ಯಾಗರಾಜ ಸ್ವಾಮಿಗಳ, ಕನಕದಾಸರ, ಪುರಂದರ ದಾಸರ, ಅನ್ನಮಯ್ಯ ಹಾಗೂ ಸದ್ಗುರು ತಾತಯ್ಯನವರ ಕೀರ್ತನೆಗಳನ್ನು ಸುಮಧುರ ಕಂಠದಲ್ಲಿ ಹಾಡಿ ಶ್ರೋತೃಗಳನ್ನು ಭಕ್ತಿ ಭಾವದಲ್ಲಿ ಲೇಲಿಸಿದರು.
ನಾದಸುಧಾರಸ ವೇದಿಕೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ಕನಕದಾಸರ, ಪುರಂದರದಾಸರ ಮತ್ತು ಕೈವಾರ ತಾತಯ್ಯನವರ ಕೀರ್ತನೆಗಳ ಗಾಯನ ನಿರಂತರವಾಗಿ ನಡೆಯುತ್ತಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.