ಕೋಲಾರ

ಮಾತೃ ಇಲಾಖೆಗೆ ವಾಪಸ್ ಆಗದ ಪ್ರಭಾರ ಇಒ

Published On :

ಕ.ಪ್ರ.ವಾರ್ತೆ   ಬಂಗಾರಪೇಟೆ   ಸೆ. 11
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರು ವಿವಿಧ ತಾಲೂಕು ಪಂಚಾಯ್ತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಮುಂದುವರಿಸುತ್ತಿರುವುದರಿಂದ ಪಶುಪಾಲನಾ ಇಲಾಖೆಯಲ್ಲಿ ಜಾನುವಾರುಗಳಿಗೆ ತೊಂದರೆಯಾಗಿದ್ದು, ಕೂಡಲೆ ಪ್ರಭಾರ ಇಒಗಳನ್ನು ಕೂಡಲೆ ಮಾತೃ ಇಲಾಖೆಗೆ ವಾಪಸ್ ಕಳುಹಿಸಬೇಕೆಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ಸರಸಾ ತಾಪಂ ಕಚೇರಿಗೆ ಪತ್ರ ಕಳುಹಿಸಿದ್ದರೂ ಇದುವರೆಗೂ ಪತ್ರಕ್ಕೆ ಬೆಲೆ ನೀಡದೆ ಕಸದ ಬುಟ್ಟಿಗೆ ಎಸೆಯಲಾಗಿದೆ.
ಇಲ್ಲಿನ ತಾಪಂ ಇಒ ಆಗಿದ್ದ ಶ್ರೀನಿವಾಸ್ ಹಲವು ಹಣದ ಅವ್ಯವಹಾರ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಲಾಗಿತ್ತು, ತೆರವಾಗಿದ್ದ ಅವರ ಸ್ಥಾನಕ್ಕೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಗದೀಶ್ ಅವರನ್ನು ತಾಪಂ ಪ್ರಭಾರ ಇಒ ಆಗಿ ತಿಂಗಳಿಂದ ನೇಮಿಸಲಾಗಿದೆ. ಅಂದಿನಿಂದ ಪಶುಪಾಲನಾ ಇಲಾಖೆಯಲ್ಲಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆಗೆ ಗ್ರಾಮಸ್ಥರು ಅಲೆದಾಡುವಂತಾಗಿದೆ.
ಡಾ. ಜಗದೀಶ್ ಹೆಚ್ಚಾಗಿ ತಾಪಂ ಕಡೆ ಗಮನಹರಿಸಿರುವುದರಿಂದ ಪಶುಪಾಲನಾ ಇಲಾಖೆಯಲ್ಲಿ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿದೆ. ಅಲ್ಲದೆ ಕ್ಷೇತ್ರದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ರೋಗ ಹೆಚ್ಚಾಗಿ ಕಂಡು ಬಂದಿದ್ದರೂ ಅದನ್ನು ನಿಯಂತ್ರಿಸುವ ಗೋಜಿಗೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಗದೀಶ್ ಆಸಕ್ತಿ ತೋರದೆ ಕಾಲಹರಣ ಮಾಡುತ್ತಿದ್ದಾರೆಂಬ ಟೀಕೆಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಪ್ರಭಾರ ಇಒ ಡಾ. ಜಗದೀಶ್ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಕಾಯಂ ಇಒರನ್ನು ನೇಮಿಸುವಂತೆ ಕ್ಷೇತ್ರದ ಜನರು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ. ಆದರೂ ಜಿಪಂ ಸಿಎಸ್ ಆಗಲಿ ಅಥವಾ ಕ್ಷೇತ್ರದ ಶಾಸಕರಾಗಲಿ ಗಮನಹರಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದಲ್ಲದೆ ಕೇಂದ್ರ ಪುರಸ್ಕೃತ ಯೋಜನೆಗಳಾದ ಎನ್.ಸಿ.ಪಿ, ಪಿಪಿಆರ್ ಎನ್, ಸಿಪಿಬಿ ಮತ್ತು ಕಾಲುಬಾಯಿ ಜ್ವರ ರೋಗ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಯೋಜನೆ ಅನುಷ್ಠಾನಕ್ಕೆ ಪಶುಪಾಲನೆ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರು ಪ್ರಭಾರ ಇಒಗಳಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗಿ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಭಾರ ಇಒಗಳಾಗಿದ್ದು ಅವರನ್ನು ಕೂಡಲೆ ಅವರನ್ನು ಪ್ರಭಾರದಿಂದ ವಿಮುಕ್ತಿಗೊಳಿಸಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಇಲಾಖೆ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
ಇಲ್ಲವಾದರೆ ಅಗತ್ಯ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಸರ್ಕಾರ ಅಧೀನ ಕಾರ್ಯದರ್ಶಿ ಸರಸಾ ತಾಪಂ ಕಚೇರಿಗೆ ಪತ್ರ ಬರೆದು 10 ದಿನಗಳಾದರೂ ಇದುವರೆಗೂ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.