ಕನ್ನಡ ಕಡೆಗಣನೆ ಸಲ್ಲ: ಶಾಸಕ
ಕ.ಪ್ರ.ವಾರ್ತೆ ಮಾಲೂರು ಸೆ. 12
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವುದು ಖೇದಕರ ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಸ್ಥಳೀಯ ಜೆಎಸ್ಎಸ್ ಸಂಸ್ಥೆ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 98 ನೇ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿ ಇತರೆ ರಾಜ್ಯಗಳಂತೆ ನಮ್ಮ ರಾಜ್ಯದಲ್ಲಿ ಶಿಕ್ಷಣದಲ್ಲಿ ರಾಜ್ಯಭಾಷೆಗೆ ಸಿಗಬೇಕಾಗಿದ್ದ ಮಾನ್ಯತೆ ಸಿಗುತ್ತಿಲ್ಲ. ಇಂಗ್ಲಿಷ್ ಇಲ್ಲದೆ ಮಕ್ಕಳ ಭವಿಷ್ಯ ಸಾಧ್ಯವಿಲ್ಲ ಎಂಬ ಭಾವನೆ ಬಂದಿದೆ. ಅದಲ್ಲದೇ ಇದು ವಾಸ್ತವವೇ ಆಗಿದೆ. ಈ ನಿಟ್ಟಿನಲ್ಲಿ ಕನ್ನಡ ಹಾಗೂ ಇಂಗ್ಲಿಷ್ನ್ನು ಪ್ರಾಥಮಿಕ ಹಂತದಿಂದಲ್ಲೇ ಸಮನಾಂತರವಾಗಿ ಭೋದಿಸಬೇಕಾಗಿದೆ ಎಂದರು.
ತಾ.ಪಂ. ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ ವಿದ್ಯಾ ಕ್ಷೇತ್ರದಲ್ಲಿ ಜೆಎಸ್ಎಸ್ ಸಂಸ್ಥೆ ಕ್ರಾಂತಿಯನ್ನೇ ಮಾಡಿದೆ. ಇಂದಿನ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಸೃಷ್ಟಿಸಿರುವ ಜೆಎಸ್ಎಸ್ ಸಂಸ್ಥೆಯು ಸಾವಿರಾರು ಸಾಧಕರಿಗೆ ಜನ್ಮ ನೀಡಿದೆ ಎಂದರು.
ಶಿವಗಂಗಾ ಶ್ರೀ ಕ್ಷೇತ್ರದ ಮೇಲಣ ಗವಿ ಮಠದ ಮಲೆಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಅಪ್ಪ ಕೂಡುವ ಹಣಕ್ಕಿಂತ ಗುರು ನೀಡುವ ವಿದ್ಯೆ ಶಾಶ್ವತವಾಗಿದ್ದು, ವಿದ್ಯೆ ಯಾರು ಕದಿಯಲಾರದ ಆಸ್ತಿಯಾಗಿದೆ ಎಂದರು.
ದತ್ತಿ ಸ್ಥಾಪಕರಾದ, ಮಾಲೂರಿನ ಉದ್ಯಮಿ ವಿಶ್ವನಾಥ್ ಗುಪ್ತ, ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣ್, ಸಂಸ್ಥೆಯ ಸಂಯೋಜನಾಧಿಕಾರಿ ಶಿವಲಿಂಗಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪುರಸಭೆ ಸದಸ್ಯರಾದ ಮುರಳೀಧರ್, ಜಾಕೀರ್ಖಾನ್, ಮುಖಂಡ ಕೃಷ್ಣ, ಪ್ರಾಂಶುಪಾಲ ಶಿವಾನಂದ್ ಇದ್ದರು. ಉಪನ್ಯಾಸಕ ಗುರುಪಾದಸ್ವಾನಮಿ ಕಾರ್ಯಕ್ರಮ ನಿರೂಪಿಸಿದರು.
ಅದ್ಧೂರಿ ಉತ್ಸವ: ಕಾರ್ಯಕ್ರಮದ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಅದ್ಧೂರಿ ಪಲ್ಲಕ್ಕಿ ನಡೆಯಿತು. ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಾವಿರಾರು ಮಕ್ಕಳು ಪಾಲ್ಗೊಂಡಿದ್ದ ಮೆರವಣಿಗೆಯಲ್ಲಿ ವೀರಗಾಸೆ ಮತ್ತು ಮಂಗಳ ವಾದ್ಯಗಳು ಭಾಗವಹಿಸಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

