ಕೋಲಾರ

ಗಣಿಗಾರಿಕೆಗೆ ಅವಕಾಶ ನೀಡದಿರಲು ಆಗ್ರಹ

Published On :

ಕ.ಪ್ರ.ವಾರ್ತೆ  ಕೋಲಾರ  ಸೆ. 12
ತಾಲೂಕಿನ ನಾಗನಾಳ ಗ್ರಾಮಕ್ಕೆ ಸೇರಿರುವ ಬೆಟ್ಟದ ತಪ್ಪಲಿನಲ್ಲಿ ಸರ್ವೇ ನಂ.42 ಮತ್ತು 41 ರಲ್ಲಿ ದಲಿತರ ಜಮೀನುಗಳು ಇರುವುದರಿಂದ ಅಲ್ಲಿ ಜಲ್ಲಿ ಕ್ರಷರ್, ಗಣಿಗಾರಿಕೆ ನಡಿಸಲು ಅನುಮತಿ ನೀಡಬಾರದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಒತ್ತಾಯಿಸಿದರು.ಕೋಲಾರ ತಾಲೂಕು, ಸುಗಟೂರು ಹೋಬಳಿ, ನಾಗನಾಳ ಗ್ರಾಮಕ್ಕೆ ಸೇರಿರುವ ಸರ್ವೇ ನಂ.42 ಮತ್ತು 41 ಹಾಗೂ 40 ರಲ್ಲಿ ಸುಮಾರು 40ವರ್ಷಗಳಿಂದ ಇಲ್ಲಿನ 15 ದಲಿತ ಕುಟುಂಬಗಳು ಬಗರ್ಹುಕುಂ ಸಾಗುವಳಿ ಮಾಡುತ್ತಿದ್ದು ಇವರೆಲ್ಲರಿಗೂ ಸಾಗುವಳಿ ಚೀಟಿಯನ್ನು 1992 ರಲ್ಲೇ ವಿತರಣೆ ಮಾಡಲಾಗಿದೆ.ಇನ್ನೂ  ನಮೂನೆ-50ಣ53 ರಲ್ಲಿ ಅರ್ಜಿ ಸಲ್ಲಿಸಿ ಭೂ ಸಕ್ರಮಾತಿ ಮುಂದೆ 10 ದಲಿತ ಕುಟುಂಬಗಳ ಅರ್ಜಿಗಳು ಬಾಕಿ ಇವೆ. ಇಂತಹ ಸಂದರ್ಭದಲ್ಲಿಯೇ ಕೆಲ ಗಣಿ ದಣಿಗಳು ಮತ್ತು ಜಲ್ಲಿ ಕ್ರಷರ್ ಮಾಲೀಕರು ಬೇರೆ ಕಡೆಯಿಂದ ಬಂದು ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಹಾಗೂ ಗಣಿ ಭೂ ವಿಜ್ಞಾನ ಇಲಾಖೆಗೆ ಸುಳ್ಳು  ಮಾಹಿತಿಯನ್ನು ನೀಡಿ, ಸುಗಟೂರು ಹೋಬಳಿ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಬೆದರಿಕೆ ಹಾಕಿ ತಮ್ಮ ಪರವಾಗಿ ವರದಿ ಸಲ್ಲಿಸುವಂತೆ ಧಮಕಿ ಹಾಕುತ್ತಿದ್ದಾರೆಂದು ದೂರಿದ್ದಾರೆ.  
ನಾಗನಾಳ, ಉರಿಗಿಲಿ, ಬುಸ್ಸನಹಳ್ಳಿ ಗ್ರಾಮಗಳಿಂದ ಪ್ರತಿನಿತ್ಯ ರೈತಾಪಿ ಜನ ತಮ್ಮ ಜಾನುವಾರುಗಳನ್ನು ಮೇಯಿಸಲು ಈ ಬೆಟ್ಟ ಬಿಟ್ಟರೆ  ಯಾವುದೇ ಪ್ರತ್ಯೇಕವಾದ ಜಾಗವಿರುವುದಿಲ್ಲ. ಜೊತೆಗೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಮತ್ತು ಮನೆಗಳು ಬಿರುಕು ಬೀಳುತ್ತವೆ ಆದ್ದರಿಂದ ಹಿರಿಯ ಭೂ ವಿಜ್ಞಾನ  ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಈ ವಿಚಾರದಲ್ಲಿ ಆತುರ ಪಡದೆ ದಲಿತರ ಹಿತದೃಷ್ಟಿಯಿಂದ ಜಲ್ಲಿ ಕ್ರಷರ್ ಮತ್ತು ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಘಟನಾ ಸಂಚಾಲಕ ನಾಗನಾಳ ಮುನಿಯಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಚವ್ವೇನಹಳ್ಳಿ ವಿಜಿ, ಜಿಲ್ಲಾ ಸಮಿತಿ ಸದಸ್ಯರಾದ ಹುಣಸನಹಳ್ಳಿ ವೆಂಕಟೇಶ್, ಮುದುವತ್ತಿ ಕೇಶವಮೂರ್ತಿ, ಕೋಲಾರ ತಾಲೂಕು ಸಂಚಾಲರಾದ ತೊಂಡಾಲ ನಾರಾಯಣಸ್ವಾಮಿ, ಮಾಲೂರು ಸಂಚಾಲಕ ಎಸ್.ಎಂ. ವೆಂಕಟೇಶ್, ಬಂಗಾರಪೇಟೆಯ ಸಂಚಾಲಕ ಸಂಪಂಗಿಪುರದ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.