ಕೋಲಾರ

ಜಮೀನು ವಿವಾದ: ಮಾರಾಮಾರಿ

Published On :

ಚಿಂತಾಮಣಿ: ಜಮೀನು ವಿವಾದ ಹಿನ್ನೆಲೆಯಲ್ಲಿ ದಾಯಾದಿಗಳ ಕಲಹದಿಂದ 2 ಗುಂಪುಗಳ ನಡುವೆ ವಾಗ್ವಾದ ನಡೆದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆಯಾದ ಘಟನೆ ಬಟ್ಲಹಳ್ಳಿ ಪೊ ಲೀಸ್ ಠಾಣೆ ವ್ಯಾಪ್ತಿಯ ಗುಟ್ಟಪಾಳ್ಯ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಎಂ. ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿಯ ಗುಟ್ಟಪಾಳ್ಯ ಗ್ರಾಮದ ಕೃಷ್ಣಾರೆಡ್ಡಿ ಹಾಗೂ ಶಿವಣ್ಣ ಎಂಬ ದಾಯಾದಿಗಳಿಗೆ ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಜಮೀನು ವಿಷಯಕ್ಕೆ ಸಂಬಂಧಿಸಿ ತಗಾದೆ ಇತ್ತು.
ಬೆಳಗ್ಗೆ ಕೃಷ್ಣಾರೆಡ್ಡಿ ಮಗ ವಿಶ್ವನಾಥ ಎಂಬವರಿಗೂ ಶಿವಣ್ಣನಿಗೂ ಜಮೀನು ವಿಷಯವಾಗಿ ಮಾತು ಮಾತು ಬೆಳೆದು ಕೈ ಕೈ ಮಿಲಾಸಿದಾಗ ಶಿವಣ್ಣ ಹಾಗೂ ನಾರಾಯಣಸ್ವಾಮಿ, ಅಶೋಕ್, ನಾರಾಯಣಮ್ಮ, ಬೈರೆಡ್ಡಿ, ಲಕ್ಷ್ಮಿದೇವಮ್ಮ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ ಕೃಷ್ಣಾರೆಡ್ಡಿ ಮತ್ತು ವಿಶ್ವನಾಥನಿಗೆ ತಲೆ ಹಾಗೂ ಇತರೆ ಭಾಗಗಳಲ್ಲಿ ರಕ್ತ ಗಾಯಗಳಾಗಿ ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಎದುರೇ ಮಾರಾಮಾರಿ: ಕೃಷ್ಣಾರೆಡ್ಡಿ ಬಟ್ಲಹಳ್ಳಿ ಪೊಲೀಸರಿಗೆ ದೂರು ನೀಡಿ ಗ್ರಾಮಕ್ಕೆ ಹಿಂತಿರುಗಿ ಬಂದ ಮೇಲೆ ಶಿವಣ್ಣ ಹಾಗೂ ಇತರರು ಗುಂಪು ಕಟ್ಟಿಕೊಂಡು ಮಚ್ಚು ಹಾಗೂ ದೊಣ್ಣೆಗಳ ಸಮೇತ ಹಲ್ಲೆ ಮಾಡಲು ಮುಂದಾದರು.
ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೇದೆ ಬಂದೋಬಸ್ತ್ ಕಲ್ಪಿಸಲು ಗ್ರಾಮಕ್ಕೆ ಬಂದ ಕೂಡಲೇ ಗುಂಪು ಪೊಲೀಸರ ಸಮಕ್ಷದಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆದರೂ ಪೊಲೀಸರು ನಮಗೆ ರಕ್ಷಣೆ ಕಲ್ಪಿಸಲಿಲ್ಲವೆಂದು ಗಾಯಾಳುಗಳಾದ ಕೃಷ್ಣಾರೆಡ್ಡಿ ಮತ್ತು ವಿಶ್ವನಾಥ್ ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ತಮಗಾದ ಅನ್ಯಾಯವನ್ನು ಹೇಳಿದರು.  ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.