ಸುದ್ದಿ ಸಂಕ್ಷೇಪ
ಸಿಮೆಂಟ್ ಕಾರ್ಖಾನೆಯಿಂದ ಸಸಿ ವಿತರಣೆ
ಗೌರಿಬಿದನೂರು: ತೊಂಡೇಬಾವಿಯ ಎಸಿಸಿ ಸಿಮೆಂಟ್ ಕಾರ್ಖಾನೆ ವತಿಯಿಂದ ರೈತರಿಗೆ ಆಹಾರ ಭದ್ರತೆ ಕಾರ್ಯಕ್ರಮದಡಿ ಸಸಿಗಳನ್ನು ರೈತರಿಗೆ ವಿತರಿಸಲಾಯಿತು. ಫ್ಯಾಕ್ಟರಿ ವ್ಯಾಪ್ತಿಯ ಇಂದಿರಾ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರಪ್ಪ ಸಸಿಗಳನ್ನು ವಿತರಿಸಿದರು. ಬಳಿಕ ಮಾತನಾಡಿ, ಈಗ ಮಳೆಗಾಲವಾಗಿರುವುದರಿಂದ ಸಸಿಗಳನ್ನು ನೆಟ್ಟು ಉತ್ತಮವಾಗಿ ಪೋಷಣೆ ಮಾಡಬೇಕೆಂದು ರೈತರಿಗೆ ಹೇಳಿದರು. ಇಂದಿನ ಸಸಿ ಗಿಡವಾಗಿ ಮರವಾದರೆ ಇದರಿಂದ ರೈತರು ಉತ್ತಮ ಆದಾಯ ನಿರೀಕ್ಷಿಸಬಹುದೆಂದು ಹೇಳಿದರು. ರಷೀದ್ ಮಾತನಾಡಿ, ಈ ಭಾಗದ ರೈತರಿಗೆ ಸುಮಾರು 6000 ಸಸಿ ವಿತರಿಸಲಾಗಿದೆ ಎಂದರು. ನಾಸಿರ್, ಮೂರ್ತಿ, ನಂಜುಂಡಪ್ಪ, ಹುಸೇನ್, ರಾಜಗೋಪಾಲ್ ಭಾಗವಹಿಸಿದ್ದರು.
ವಿಷ ಸೇವಿಸಿ ಆತ್ಮಹತ್ಯೆ
ಟೇಕಲ್: ಸಾಂಸಾರಿಕ ವಿಚಾರವಾಗಿ ಮನನೊಂದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಹಾರಮಾಕನಹಳ್ಳಿಯ ಕಾಡು ಬಂಡೆ ಬಳಿ ನಡೆದಿದೆ. ಬೆಡಶೆಟ್ಟಹಳ್ಳಿ ನಿವಾಸಿ ಮುನಿರಾಜು (34) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು ಈ ಹಿಂದೆ ಈತ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು ಒಂದು ತಿಂಗಳ ಈಚೆಗೆ ಗಾರ್ಮೆಂಟ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದನೆಂದು ಹೇಳಿ ಹೋದವನು ವಾಪಸಾಗಿರಲಿಲ್ಲ. ಈ ಬಗ್ಗೆ ಮಾಸ್ತಿ ಪೋಲಿಸರು ಆತನ ಭಾವಮೈದ ಶ್ರೀನಿವಾಸ್ ಕೊಟ್ಟ ದೂರಿನ ಮೇರೆಗೆ ದೂರು ದಾಖಲಿಸಿಕೊಂಡಿದ್ದು ಸ್ಥಳಕ್ಕೆ ಮಾಸ್ತಿ ಪಿಎಸ್‌ಐ ಸಿದ್ದಪ್ಪ ಭೇಟಿ ನೀಡಿದ್ದರು.
ಬಾಲಕಿ ಮೇಲೆ ಅತ್ಯಾಚಾರ
ಕೋಲಾರ: ತಾಲೂಕಿನ ಆನೇಹಳ್ಳಿಯಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಾಡುಗೋಡಿಯ ಸಮೀಪದ ಇಟ್ಟಿಗೆ ಕಾರ್ಖಾನೆಯಲ್ಲಿ ತನ್ನ ಅಕ್ಕನೊಂದಿಗೆ ಕೋಲಾರದ ಬಾಲಕಿಯೊಬ್ಬಳು ಕೆಲಸ ಮಾಡುತ್ತಿದ್ದಳು. ಆಕೆಯನ್ನು ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶದ ಹಿಂದೂಪುರ ತಾಲೂಕಿನ ಕೋಡಿಪಲ್ಲಿ ಗ್ರಾಮದ ವಾಸಿ ಹನುಮಂತು ಪರಿಚಯ ಮಾಡಿಕೊಂಡಿದ್ದಾನೆ. ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ ಸೂಲಿಬೆಲೆ ಬಳಿಯ ಕೋಳಿ ಫಾರಂ ಬಳಿ ರೂಂನಲ್ಲಿಟ್ಟುಕೊಂಡು ಇತ್ತೀಚೆಗೆ ಅತ್ಯಾಚಾರವೆಸಗಿದ್ದಾನೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

