ವಿಶ್ವೇಶ್ವರಯ್ಯನವರ ಹೆಸರಿಡುತ್ತಾರಾ?
ಚಿಕ್ಕಬಳ್ಳಾಪುರ: ನಗರದ ಅಣಕನೂರು ಬಳಿ ನೂತನವಾಗಿ ಸುಮಾರು 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾಡಳಿತ ಭವನದ ಉದ್ಘಾಟನೆಯನ್ನು ಸೆ. 20 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.
ಈ ನಡುವೆ ಜಿಲ್ಲಾಡಳಿತ ಭವನಕ್ಕೆ ಭಾರತ ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರನ್ನಿಡಲಾಗುತ್ತದೆಯೇ ಎಂಬ ಕುತೂಹಲ ಜನರನ್ನು ಕಾಡುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾದ ನಂತರ ತಾಲೂಕಿನ ನಂದಿ ಕ್ರಾಸ್ ಬಳಿ ಇರುವ ರೇಷ್ಮೆ ಬಿತ್ತನೆ ಕೋಠಿ ಕಟ್ಟಡದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ಕಚೇರಿ ಕಾರ್ಯಾರಂಭಿಸಿದ್ದು, ಈ ನಡುವೆ ಅಗತ್ಯವಿರುವ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಪ್ರಸ್ತಾವನೆ, ಯೋಜನೆ ವಿವರ ಸಲ್ಲಿಸುವಾಗ ಸರ್ ಎಂವಿ ಭವನ ಎಂದೇಳಲಾಗುತ್ತಿದ್ದು, ಆದರೆ, ಕಟ್ಟಡದ ಮೇಲೆ ಜಿಲ್ಲಾಡಳಿತ ಭವನ ಎಂಬ ನಾಮಫಲಕ ಹಾಕಲಾಗಿದೆ.
ಇದರಿಂದ ಭವನಕ್ಕೆ ಸರ್ ಎಂವಿ ಅವರ ಹೆಸರಿಡಲಾಗುತ್ತದೆಯೇ ಎಂಬ ಪ್ರಶ್ನೆ ಕೇಳಿ ಬಂದಿದೆ. ಸರ್ ಎಂವಿ ಜನ್ಮಸ್ಥಳ ಹೊಂದಿರುವ ಜಿಲ್ಲೆಯಾಗಿರುವುದರಿಂದ ಅವರಿಗೆ ಗೌರವ ಸೂಚಿಸುವ ಸಲುವಾಗಿ ಜಿಲ್ಲಾಡಳಿತ ಭವನಕ್ಕೆ ಸರ್ ಎಂವಿ ಭವನ ಎಂದು ಹೆಸರಿಡಬೇಕೆಂಬ ಒತ್ತಾಯ ಸಾರ್ವತ್ರಿಕವಾಗಿ ಕೇಳಿ ಬಂದಿದೆ. ಈ ನಡುವೆ ಜಿಲ್ಲಾಡಳಿತ ಮಾತ್ರ ಗೊಂದಲಿದ್ದು, ಗೊಂದಲಕ್ಕೆ ತೆರೆ ಎಳೆಯಲು ತಡಬಡಾಯಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

