ಸುದ್ದಿ ಸಂಕ್ಷೇಪ
ಅಕ್ರಮ ಮರಳು ದಂಧೆಗೆ ಬ್ರೇಕ್: ಡಿಸಿ
ಕೋಲಾರ: ಜಿಲ್ಲೆಯ ಕೆರೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಳು ದಂಧೆ ತಡೆಗಟ್ಟಲು ಜಿಲ್ಲಾಧಿಕಾರಿ ಡಿ.ಕೆ. ರವಿ ನಿರ್ಧರಿಸಿದ್ದಾರೆ. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ, ಕಂದಾಯ, ನೀರಾವರಿ, ಪರಿಸರ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇನ್ನು ಮುಂದೆ ಕೆರೆಗಳಲ್ಲಿ ದಂಧೆ ನಡೆಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ದಾಖಲಿಸುವಂತೆ ಸೂಚಿಸಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇರುವುದರಿಂದ ಮರಳು ದಂಧೆ ತಡೆಯಲು ಆಗುತ್ತಿಲ್ಲವೆಂಬ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಮಿತಿಯನ್ನು ರಚನೆ ಮಾಡಿದ್ದಾರೆ. ಎಸ್ಪಿ ಡಾ. ರಾಮ್ನಿವಾಸ್ ಸಪಟ್, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಉಪ ವಿಭಾಗಾಧಿಕಾರಿ ಮಂಜುನಾಥ್ ಇದ್ದರು.
ಬಾಲಕಿಗೆ ನೆರವು ನೀಡಲು ಮನವಿ
ಮಾಲೂರು: ಬಡತನ ನಡುವೆಯು ಪೋಷಕರ ಸಹಕಾರದಲ್ಲಿ ಓದಬೇಕೆಂಬ ಹಂಬಲ ಹೊಂದಿದ್ದ ಬಾಲಕಿಯೊಬ್ಬಳಿಗೆ ಕಾಣಿಸಿಕೊಂಡಿರುವ ಮೂಳೆ ಕ್ಯಾನ್ಸರ್ ದೇಹವನ್ನು ಹಿಂಡಿ ಕಳೆದ ಒಂದು ವರ್ಷದಿಂದ ಹಾಸಿಗೆ ಹಿಡಿಯುವಂತೆ ಮಾಡಿದ್ದು, ಪೋಷಕರು ದಾನಿಗಳಿಂದ ಸಹಾಯಧನ ಕೋರಿದ್ದಾರೆ. ತಾಲೂಕಿನ ಹುಂಗೇನಹಳ್ಳಿ ಹೋಬಳಿಯ ದೊಡ್ಡಕಡತೂರು ಗ್ರಾಮದ ನಾರಾಯಣಸ್ವಾಮಿ- ಶೋಭಾ ದಂಪತಿಯ ಹಿರಿಮಗಳು ಅಂಕಿತಳೇ ಚಿಕ್ಕ ವಯಸ್ಸಿನಲ್ಲೇ ಮೂಳೆ ಕ್ಯಾನ್ಸ್ರ್ಗೆ ಒಳಗಾಗಿದ್ದಾಳೆ. ದಾನಿಗಳ ಸಹಕಾರ ಕೋರಿರುವ ಬಡ ದಂಪತಿ ಮಾಲೂರಿನ ಎಸ್ಬಿಐ ಬ್ಯಾಂಕ್ನಲ್ಲಿನ ಉಳಿತಾಯ ಖಾತೆ ನಂ.33084023673 (ಐಎಫ್ಎಸ್ಸಿ ಕೋಡ್- ಎಸ್ಬಿಐಎನ್ 0011294) ಹಾಗೂ ಮೊ. 8183046058 ನ್ನು ಸಂಪರ್ಕಿಸಬಹುದು.
ಇಂದು ಕಾವ್ಯೋತ್ಸವ
ಕೋಲಾರ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಬೆಳಗ್ಗೆ 9.30ಕ್ಕೆ ರಾಜ್ಯ ಚುಟುಕು ಸೌರಭ ಕಾವ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಷತ್ತಿನ ಗೌರವಾಧ್ಯಕ್ಷ ಡಾ.ಕೆ.ಎಂ.ಜೆ. ಮೌನಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಬೆಳಗ್ಗೆ 10 ಗಂಟೆಗೆ ರಾಜ್ಯ ಸಂಚಾಲಕ ಡಾ.ಎಂ.ಜಿ.ಆರ್. ಅರಸ್ ಚುಟುಕು ಚಿತ್ತಾರ ಅನಾವರಣಗೊಳಿಸಲಿದ್ದಾರೆ. ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಕೊಡ್ಲಿ ಅಧ್ಯಕ್ಷತೆ ವಹಿಸುವರು. ಮೈಸೂರಿನ ರತ್ನ ಹಾಲಪ್ಪಗೌಡ ಚುಟುಕು ಸೌರಭ ಸಂಕಲನ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಗೋಷ್ಠಿ, ಚುಟುಕು ವಾಚನ ಮತ್ತು ಕಲಾವಿದ ಕೆ.ವಿ. ಕಾಳಿದಾಸರ ರೇಖಾ ಚಿತ್ತಾರ ಏಕವ್ಯಕ್ತಿ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಘಟಕ ಕಾರ್ಯಾಧ್ಯಕ್ಷ ಅರವಿಂದ ಭೀ.ಕಟ್ಟಿ ತಿಳಿಸಿದ್ದಾರೆ.
ಮಹಿಳಾ ಕಾಲೇಜಿಗೆಶಿವಯೋಗಿಸ್ವಾವು ಭೇಟಿ
ಕೋಲಾರ: ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾವು ಅವರು ಶನಿವಾರ ನಗರದ ಮಹಿಳಾ ಸಮಾಜ ಕಾಲೇಜಿಗೆ ಭೇಟಿ ನೀಡಿ ಪದವೀದರರ ಕುಂದುಕೊರತೆ ಅಲಿಸಿದರು. ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ಡಾ. ಶಿವಯೋಗಿಸ್ವಾವು ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಜಯಂತಿಲಾಲ್, ಗ್ರಾಮಾಂತರ ಘಟಕದ ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ, ನಗರ ಪ್ರಧಾನ ಕಾರ್ಯದರ್ಶಿ ಕೆ.ಎನ್. ಸುರೇಶ್, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ ರಾಜು ಸೇರಿದಂತೆ ಇತರರು ಇದ್ದರು.
ಕ್ರೀಡಾಕೂಟ: ರಾಯಲ್ ಶಾಲೆ ಉತ್ತಮ ಸಾಧನೆ
ಚಿಂತಾಮಣಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಪೈಕಾ ಹಾಗೂ ದಸರಾ ಕ್ರೀಡಾಕೂಟದ ಹಲವು ಕ್ರೀಡೆಗಳಲ್ಲಿ ರಾಯಲ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧನೆಗೆ ಕಾರಣರಾದ ಕ್ರೀಡಾಪಟುಗಳನ್ನು ಪ್ರಾಂಶುಪಾಲೆ ಕೆ.ಆರ್. ಪ್ರೇಮಲತಾ ಅಭಿನಂದಿಸಿದ್ದಾರೆ. ಸಾ.ಶಿ.ಇ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ 14 ಪ್ರಥಮ ಸ್ಥಾನ, 9 ದ್ವಿತೀಯ ಸ್ಥಾನ, 6 ತೃತೀಯ ಸ್ಥಾನದೊಂದಿಗೆ ಗುಂಪಾಟದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಬಾಲಕರ ವಾಲಿಬಾಲ್, ಹ್ಯಾಂಡ್ಬಾಲ್ನಲ್ಲಿ ಪ್ರಥಮ, ಬಾಲಕಿಯರ ಹ್ಯಾಂಡ್ಬಾಲ್ನಲ್ಲಿ ಪ್ರಥಮ ಹಾಗೂ ವಾಲಿಬಾಲ್ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಸೈಯದ್ ಅಫ್ರಿದಿ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನವೀನ್ ಕೆ.ಎಸ್ ಹಾಗೂ ಕಾವ್ಯ ಎಸ್.ವಿ ವೈಯಕ್ತಿಕ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದಿದ್ದಾರೆ. ತರಬೇತುದಾರಾದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್. ಎಂ.ವಿ ಹಾಗೂ ಕೃಷ್ಣೇಗೌಡ ಅವರನ್ನು ಸಂಸ್ಥೆಯ ಅಧ್ಯಕ್ಷರಾದ ರಾಮಕೃಷ್ಣರೆಡ್ಡಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

