ಕೋಲಾರ

ಕೆಜಿಎಫ್‌ನಲ್ಲಿ ಹಲವೆಡೆ ಮನೆ ಗೋಡೆ ಕುಸಿತ

Published On :

ಕೆಜಿಎಫ್: ಪಟ್ಟಣದಲ್ಲಿ ಶನಿವಾರ ಸಂಜೆ ಸುಮಾರು 2 ಗಂಟೆ ಕಾಲ ಬಿದ್ದ ಬಾರಿ  ಮಳೆಯಿಂದಾಗಿ ನಗರದ ಕೆಲ ರಸ್ತೆ ಮೇಲೆ 2 ಅಡಿಯಷ್ಟು ನೀರು ಹರಿದು ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ಬಿಜಿಎಂಎಲ್ ಚಿನ್ನದ ಗಣಿ ಪ್ರದೇಶ, ನಾಲ್ಕನೇ ಬ್ಲಾಕ್, ಸೋಮೇಶ್ವರ ಬ್ಲಾಕ್, ಗಾಂಧಿನಗರ್, ಮಸ್ಕಂ, ಸ್ವಾಮಿನಾಥಪುರಂ, ಸಂಜಯಗಾಂಧಿ ನಗರ  ಸೇರಿದಂತೆ ಇತರೆ ಕೊಳಚೆ ಪ್ರದೇಶಗಳ ಬಡಾವಣೆಗಳಲ್ಲಿ ನೀರು ಹರಿದು ಮನೆಗಳಲ್ಲಿ ತುಂಬಿಕೊಂಡಿದ್ದು, ಕುಟುಂಬ ಸದಸ್ಯರು ನೀರನ್ನು ಹೊರಗೆ ಚೆಲ್ಲುವ ಕೆಲಸದಲ್ಲಿ ನಿರತರಾಗಿದ್ದರು.
ಮಸ್ಕಂ, ಆಂಡ್ರಸನ್‌ಪೇಟೆ, ಮಾರಿಕುಪ್ಪಂ ಪ್ರದೇಶದ ಬಡಾವಣೆಗಳ ಕೆಲ ಮನೆಗಳು ಭಾರಿ ಮಳೆಯಿಂದ ಗೋಡೆಗಳು ಹಾಗೂ ಚಾವಣಿ ಕುಸಿದು ಬಿದ್ದ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣಪಾಯಗೊಂಡ ಬಗ್ಗೆ ವರದಿಯಾಗಿಲ್ಲ. ಮತ್ತು ಚರಂಡಿಗಳಲ್ಲಿ ನೀರು ತುಂಬಿಕೊಂಡು ನೀರು ಹೋಗಲು ದಾರಿಯಿಲ್ಲದೆ ಆಂಡ್ರಸನ್‌ಪೇಟೆ ವ್ಯಾಪ್ತಿಯ ಲೂರ್ದ್‌ನಗರ ಹಾಗೂ ಸುಸೈಪಾಳ್ಯಂ ಕೊಳಚೆ ಪ್ರದೇಶದ ಮನೆಯೊಳಗೆ ಚರಂಡಿ ನೀರು ತುಂಬಿಕೊಂಡಿದ್ದು, ಬಾರಿ ಮಳೆಯಿಂದಾಗಿ ರಸ್ತೆಯಲ್ಲಿ ಸುಮಾರು 2 ಅಡಿಗಳಷ್ಟು ನೀರು ತುಂಬಿಕೊಂಡು ಹರಿಯುತ್ತಿದ್ದರಿಂದ ಆಟೋ, ದ್ವಿಚಕ್ರ ವಾಹನ, ಸೈಕಲ್, ಎತ್ತಿನಗಾಡಿ, ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ಭಾರಿ ತೊಂದರೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.