ಕೋಲಾರ

ಯೋಜನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಲಿ: ಶಾಸಕ

Published On :

ಕ.ಪ್ರ. ವಾರ್ತೆ, ಮುಳಬಾಗಲು, ಸೆ.15
ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಅನುದಾನ ಸಾಲ, ಸಹಾಯಧನ ಮುಂತಾದ ಎಲ್ಲಾ ಮಾಹಿತಿಗಳನ್ನು ಪ್ರಜಾಪ್ರತಿನಿಧಿಗಳಾದ ತಾಪಂ, ಗ್ರಾಪಂ ಮತ್ತು ಜಿಪಂ ಸದಸ್ಯರಿಗೆ ನೀಡಲು ಶಾಸಕ ಕೊತ್ತೂರು ಮಂಜುನಾಥ್ ತಾಕೀತು ಮಾಡಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಶುಕ್ರವಾರ ನಡೆದ ತಾಲೂಕು ಅಭಿವೃದ್ಧಿಯ ಕುರಿತಾದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ತೋಟಗಾರಿಕೆ ಇಲಾಖೆಗೆ ಬರುವ ಹಲವಾರು ಯೋಜನೆಗಳ ಲಾಭ ಪಡೆಯಲು ಫಲಾನುಭವಿಗಳು ಮುಂದೆ ಬರುತ್ತಿಲ್ಲವೆಂದು ಇಲಾಖೆಯ ಅಧಿಕಾರಿಗಳು ಹೇಳಿದಾಗ ಸದಸ್ಯರು ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದರು.
ಸದಸ್ಯರಿಗೆ ಸರ್ಕಾರದ ಯೋಜನೆಗಳು ತಿಳಿದಿದ್ದಲ್ಲಿ ರೈತಾಪಿಗಳಿಗೆ ಎಲ್ಲಿ ಯೋಜನೆಗಳ ಕುರಿತು ಮಾಹಿತಿ ಇರುತ್ತದೆ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ ಆಗಸ್ಟ್ ತಿಂಗಳಲ್ಲಿ ವಾಡಿಕೆಯಂತೆ 356 ಮಿಮಿ ಮಳೆ ಆಗಬೇಕಾಗಿತ್ತು. 254 ಮಿಮೀ ಮಳೆ ಬಂದಿದೆ. ರಾಗಿ ಬೆಳೆಯನ್ನು ಏಳೂವರೆ ಹೆಕ್ಟೇರ್ ಪ್ರದೇಶದಲ್ಲಿ ಉಳುಮೆ ಮಾಡಲಾಗಿದೆ. ಮಳೆಯ ಕಾರಣ ಫಸಲು ಸುಧಾರಿಸಿದೆ. ಶೇ. 70 ರಷ್ಟು ಫಸಲು ಬರುವುದೆಂದು ಅಂದಾಜಿಸಲಾಗಿದೆ ಎಂದರು. ತಾಪಂ ಅಧ್ಯಕ್ಷೆ ಎಂ.ಸುಬ್ಬಮ್ಮ, ಉಪಾಧ್ಯಕ್ಷ ರಾಜಪ್ಪ. ಸದಸ್ಯರಾದ ಶ್ರೀನಿವಾಸರೆಡ್ಡಿ, ಪೆದ್ದೂರು ವೆಂಕಟರಾಮ್, ಲಕ್ಷ್ಮೀದೇವಮ್ಮ, ರಾಜುಗೌಡ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.