ಕೋಲಾರ

ಎನ್. ದೊಡ್ಡಿಯಲ್ಲಿ ಶಾಸಕರಿಂದ ಕೆರೆ ಪರಿಶೀಲನೆ

Published On :

ಮಾಲೂರು: ತಾಲೂಕಿನ ಡಿ.ಎನ್. ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನ್ನಘಟ್ಟ, ಅಹನ್ಯ, ಬಂಟಹಳ್ಳಿ, ವಪ್ಪಚ್ಚಹಳ್ಳಿ ಸೇರಿದಂತೆ ಹೋಬಳಿಯ 14 ಕೆರೆಗಳಲ್ಲಿ ಹತ್ತು ಕೆರೆಗಳು ಭರ್ತಿಯಾಗಿದ್ದು, ಸ್ಥಳಕ್ಕೆ ಶಾಸಕ ಮಂಜುನಾಥ್ ಗೌಡ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿ, ಹದಿನೈದು ವರ್ಷಗಳಿಂದ ಇದೇ ಪ್ರಥಮ ಬಾರಿಗೆ ಈ ಭಾಗದ ಕೆರೆಗಳು ತುಂಬಿರುವುದು ಎಂಬ ಇಲ್ಲಿನ ಗ್ರಾಮಸ್ಥರ ಮಾತಿನಿಂದ ಸಂತೋಷವಾಗಿದೆ. ಅಂರ್ತಜಲ ಹೆಚ್ಚಿ ಕುಡಿಯುವ ನೀರಿನ ಬವಣೆ ಸ್ವಲ್ಪ ಮಟ್ಟಿಗೆ ಸುಧಾರಿಸಬಹುದೆಂಬ ಭರವಸೆ ಮೂಡಿದೆ ಎಂದರು.
ಹೋಬಳಿಯ ಬಂಟಹಳ್ಳಿ ಕೆರೆಗೆ ಸರಿಯಾದ ನಿರ್ವಹಣೆ ಇಲ್ಲದೆ ತೂಬುಗಳ ಮೂಲಕ ನೀರು ವ್ಯರ್ಥವಾಗಿ ಹರಿದುಹೋಗುತ್ತಿದ್ದು, ತೂಬುಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚಿನೆ ನೀಡಲಾಗಿದೆ ಎಂದರು.
ಕೆರೆಗಳ ನಿರ್ವಹಣೆಯಲ್ಲಿ ಗ್ರಾಮಸ್ಥರು ಭಾಗಿಯಾಗಬೇಕು ಎಂದು ಮನವಿ ಮಾಡಿದ ಶಾಸಕರು, ತಾಲೂಕಿನಲ್ಲಿ ಶಿಥಿಲಗೊಂಡಿರುವ ಕೆರೆ- ಕಟ್ಟೆಗಳನ್ನು ಶೀಘ್ರವಾಗಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವ್ಯರ್ಥವಾಗಿ ಹರಿದುಹೋಗುವ ನೀರನ್ನು ತಡೆಯಲು ಚೆಕ್ ಡ್ಯಾಂಅನ್ನು ನಿರ್ಮಿಸುವಂತೆ ಇಲಾಖೆ ಅಭಿಯಂತರ ಸುಬ್ರಮಣಿಗೆ ಆದೇಶಿಸಿದರು.
ತಾಪಂ ಮಾಜಿ ಅಧ್ಯಕ್ಷ ನಂಜೇಗೌಡ, ಚಿನ್ನಸ್ವಾಮಿಗೌಡ, ದೊಡ್ಡಿ ವೆಂಕಟಗಿರಿಯಪ್ಪ, ಆಂಜನೇಯರೆಡ್ಡಿ, ಪಾಲಕ್ಷಬಾಬು, ಡಿ.ಎಂ. ವೆಂಕಟೇಶ್,ನಾರಾಯಣಪ್ಪ, ಅಭಿಯಂತರ ಸುಬ್ರಮಣಿ, ಕೃಷ್ಣಪ್ಪ, ನೂಸಗೆರೆ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನಪ್ಪ, ಪಿಡಿಒ ವೇಣು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.