ಕಂಬದಹಳ್ಳಿ ದಲಿತರ ವಿನೂತನ ಪ್ರತಿಭಟನೆ!
ಶಿಡ್ಲಘಟ್ಟ: ದಲಿತ ಕಾಲೋನಿಗೆ 15 ವರ್ಷಗಳಿಂದ ಯಾವುದೇ ಸರ್ಕಾರಿ ಯೋಜನೆಗಳು ಬಂದಿರುವುದಿಲ್ಲ ಇಂತಿ, ದಲಿತ ಕಾಲೋನಿಯ ನೊಂದ ನಿವಾಸಿಗಳು ಎಂಬ ನಾಮಫಲಕವನ್ನು ತಾಲೂಕಿನ ಮೇಲೂರು ಪಂಚಾಯಿತಿಯ ಕಂಬದಹಳ್ಳಿ ಗ್ರಾಮದ ದಲಿತರು ಹಾಕುವುದರೊಂದಿಗೆ ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಈ ರಸ್ತೆಯಲ್ಲಿ ಹಾಕಿರುವ ಕಲ್ಲು ಚಪ್ಪಡಿಗಳು ಶಿಥಿಲವಾಗಿದ್ದು, ಈ ರಸ್ತೆಯ ಮೇಲೆ ಸರಕು ಲಾರಿ ಟ್ರ್ಯಾಕ್ಟರ್ ಹೋದರೆ ಕಲ್ಲುಚಪ್ಪಡಿಗಳು ಮುರಿದು ಗಾಡಿಗೆ ತೊಂದರೆಯಾಗುತ್ತದೆ ಎಂದು ಚಾಲಕರಿಗೆ ಎಚ್ಚರಿಕೆಯನ್ನೂ ಇದೇ ಫಲಕದಲ್ಲಿ ತಿಳಿಸಿದ್ದಾರೆ. ತಮ್ಮ ನೋವನ್ನು ಕೆಂಪು ಬಣ್ಣವನ್ನು ನಾಮಫಲಕದ ಮೇಲೆ ಬಳಿದು ಬಿಳಿಯ ಅಕ್ಷರಗಳ ಮೂಲಕ ತೋಡಿಕೊಂಡಿದ್ದಾರೆ. ಕಂಬದಹಳ್ಳಿ ಗ್ರಾಮದ ವಿಶೇಷವೆಂದರೆ ಇದು ಉತ್ತಮ ಗ್ರಾಪಂ ಎಂಬ ಪ್ರಶಸ್ತಿ ಪಡೆದಿರುವ ಮೇಲೂರು ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿರುವುದು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಜಿ.ಪಂ. ಸದಸ್ಯ ಸತೀಶ್ ಅವರ ಸ್ವಗ್ರಾಮವಿದು.
ಹದಗೆಟ್ಟ ರಸ್ತೆಗಳು, ಅಸಮರ್ಪಕ ನೀರಿನ ವ್ಯವಸ್ಥೆ, ಬೀದಿ ದೀಪಗಳಿಲ್ಲ. ಹಲವಾರು ಬಾರಿ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ಕನಿಷ್ಠ ಮೂಲ ಸೌಲಭ್ಯವನ್ನು ಈ ಸಣ್ಣ ಗ್ರಾಮದ ದಲಿತ ಕಾಲೋನಿಗೆ ನೀಡದಿರುವುದು ದುರದೃಷ್ಟಕರ ಎನ್ನುತ್ತಾರೆ ದಲಿತ ಕಾಲೋನಿಯ ನಿವಾಸಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

