ಕೋಲಾರ

ಶಿಡ್ಲಘಟ್ಟ ಸಂತೆ ಮೈದಾನದಲ್ಲಿ ಮಳೆ ನೀರು ನಿಂತು ವಾಸನೆ

Published On :

ಶಿಡ್ಲಘಟ್ಟ: ಪಟ್ಟಣದ ಸಂತೆಯ ದಿನವಾದ ಸೋಮವಾರ ಮಳೆ ನೀರು ನಿಂತು ವಾಸನೆ ಬರುತ್ತಿದ್ದು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪುರಸಭೆಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ ಘಟನೆ ನಡೆಯಿತು.
ಪಟ್ಟಣದ ಸೋಮವಾರ ಸಂತೆ ನಡೆಯುವ ಜಾಗದಲ್ಲಿ ಮಳೆ ನೀರು ನಿಂತ ಪರಿಣಾಮ ಕೊಳಚೆ ನೀರು ನಿಂತು ವಾಸನೆ ಬರುತ್ತಿದ್ದು, ಸಂತೆ ಮೈದಾನದಲ್ಲಿ ಅಂಗಡಿಗಳನ್ನು ಹಾಕಲು ಹಾಕದೆ ವ್ಯಾಪಾರಸ್ಥರು ಪಾಡು ಪಡಬೇಕಾಯಿತು. ವ್ಯಾಪಾರಕ್ಕೆ ಬಂದ ಜನ ಸಾಮಾನ್ಯರು ಸಂತೆ ಮೈದಾನದ ಸ್ಥಿತಿಯನ್ನು ನೋಡಿ ಪಟ್ಟಣದ ಪುರಸಭೆಯ ಅದಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಲ್ಲದೆ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆರೋಗ್ಯಾಧಿಕಾರಿ ಬಂದಾಗ ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರು ತಮ್ಮ ಕಷ್ಟಗಳನ್ನು ಹೇಳಿಕೊಂಡರಲ್ಲದೆ ಅಸಮಾಧಾನ ವ್ಯಕ್ತಪಡಿಸಿದರು. ಸಂತೆಯ ಜಾಗದಲ್ಲಿ ಕೊಳಕು ಹೆಚ್ಚಾಗಿದ್ದು ಅಲ್ಲಿ ವಾಸಿಸುವ ಮನೆಗಳಿಗೆ ಸಹ ನುಗ್ಗುತ್ತಿದೆಯೆಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.