ದೇಗುಲ ಆಸ್ತಿ ಒತ್ತುವರಿ ಹುನ್ನಾರ: ಆರೋಪ
ಕ.ಪ್ರ.ವಾರ್ತೆ ಕೋಲಾರ ಸೆ. 17
ಜಿಲ್ಲೆಯ ಮುಳಬಾಗಲು ಪಟ್ಟಣದ ಜ್ಯೋತಿನಗರ ಪಾಳ್ಯದ ವಿಘ್ನೇಶ್ವರಸ್ವಾಮಿ ದೇವಾಲಯದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದು ದೇವಾಲಯದ ಭಕ್ತವೃಂದ ಹಾಗೂ ಸೇವಾ ಮಂಡಳಿಯ ಅಧ್ಯಕ್ಷ ಪಿ.ಎಂ.ರಘುನಾಥ ದೂರಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆಯ ಕ್ರಮ ಸಂಖ್ಯೆ 1317, ನಂ.1048, 1300ರ 24- 49 ಪ್ರದೇಶದಲ್ಲಿ ಕಲ್ಲು ಮಂಟಪ ಸೇರಿ ಸದರಿ ಜಾಗದಲ್ಲಿ ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಹಳೆ ಮತ್ತು ಶಿಥಿಲಗೊಂಡಿರುವ ವಿಘ್ನೇಶ್ವರಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆದರೆ, ಬಿ.ಆರ್. ರವೀಂದ್ರನಾಥ ಎಂಬವರು ಹಣ ಮತ್ತು ರಾಜಕೀಯ ಬಲದಿಂದ ಈ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕಳೆದ ಸೆ. 6ರಂದು ಜೀರ್ಣೋದ್ಧಾರ ಮಾಡುತ್ತಿರುವ ಜಾಗಕ್ಕೆ ರವೀಂದ್ರನಾಥ ಪೊಲೀಸರನ್ನು ಕರೆತಂದು ತಮ್ಮ ಹಲ್ಲೆ ನಡೆಸಿದ್ದು, ಇದರಿಂದ ತಾವು ಮಾನಸಿಕ, ದೈಹಿಕವಾಗಿ ಹಿಂಸೆ ಅನುಭವಿಸಿದ್ದಲ್ಲದೆ ಪೊಲೀಸರ ದೌರ್ಜನ್ಯದಿಂದ ತಾವು ಒಂದು ವಾರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯಬೇಕಾಯಿತು ಎಂದು ತಿಳಿಸಿದರು.
ಸದರಿ ಜಾಗ ದೇವಾಲಯಕ್ಕೆ ಸೇರಿದ್ದರೂ, ರವೀಂದ್ರನಾಥ ಎಸ್ಐ ಮೆಲ್ಪಿನ್ ಪ್ರಾನ್ಸ್ಸ್ ಮತ್ತು ಪೌರಾಯುಕ್ತರೊಂದಿಗೆ ಶಾಮೀಲಾಗಿ ಅತಿಕ್ರಮವಾಗಿ ಪ್ರವೇಶ ಮಾಡಿ ಒತ್ತುವರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ದೇವಸ್ಥಾನ ಅತಿಕ್ರಮಣ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇದಕ್ಕೆ ಮಧ್ಯಂತರ ತಡೆಯಾಜ್ಞೆ ಸಿಕ್ಕಿದ್ದರೂ, ಪೊಲೀಸರು ಮತ್ತು ರಾಜಕೀಯ ಬಲದಿಂದ ತಮ್ಮ ಮೇಲೆ ದೌರ್ಜನ್ಯ ನಡೆಸಿ ದೇವಾಲಯ ಜಾಗ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಮತ್ತು ನನ್ನ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಬಾಲಕೃಷ್ಣಗೌಡ, ಪ್ರಜಾ ಐಕ್ಯ ವೇದಿಕೆಯ ನಾರಾಯಣಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

