ಕೋಲಾರ

ಕ್ಷುಲ್ಲಕ ಕಾರಣಕ್ಕೆ ಶಿಕ್ಷಕನಿಂದ ವಿದ್ಯಾರ್ಥಿಗೆ ಥಳಿತ; ಆರೋಪ

Published On :

ಮಾಲೂರು: ಪಾಠ ಮಾಡುವಾಗ ಇತರ ವಿದ್ಯಾರ್ಥಿಗಳೂಂದಿಗೆ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಹತ್ತನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕನೂಬ್ಬ ಹಿಗ್ಗಾಮುಗ್ಗ ಥಳಿಸಿ ಗಾಯಗೊಳಿಸಿದ ಘಟನೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
 ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ಎ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಎಂಬ ವಿದ್ಯಾರ್ಥಿಯನ್ನು ಗಣಿತ ಶಿಕ್ಷಕ ಜಿ.ಕೆ. ರಮೇಶ್ ಬೆತ್ತದಲ್ಲಿ ಬಾಸುಂಡೆ ಬಾರುವ ಹಾಗೆ ಬಾರಿಸಿದ್ದು, ಗಾಯಗೊಂಡಿರುವ ವಿದ್ಯಾರ್ಥಿ ಮಂಜುನಾಥ್ ಇಲ್ಲಿನ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಾಲೆಯಲ್ಲಿ ಮೀಡ್ ಟ್ರಮ್ ಎಕ್ಸಾಮ್ ನಡೆಯುತ್ತಿದ್ದು,ನಾಳೆ ನಡೆಯಲಿರುವ ಗಣಿತ ಪರೀಕ್ಷೆಗಾಗಿ ಗಣಿತ ಮಾಸ್ತರ್ ರಮೇಶ್ ವಿದ್ಯಾರ್ಥಿಗಳಿಗೆ ಗಣಿತದ ಸಮಸ್ಯೆ ನೀಡಿ ಲೆಕ್ಕವನ್ನು ಬಿಡಿಸಲು ತಿಳಿಸಿದ್ದರು.
 ಈ ವೇಳೆಯಲ್ಲಿ ಅನ್ಯ ವಿದ್ಯಾರ್ಥಿಯೂಂದಿಗೆ ಮಾತನಾಡುತ್ತಿದ್ದ ಎಂದು ಅಪಾದಿಸಿ ವಿದ್ಯಾರ್ಥಿ ಮಂಜುನಾಥ್‌ನಿಗೆ ಗಣಿತ ಮಾಸ್ತರ್ ಹೊಡೆದ ಪರಿಣಾಮ ವಿದ್ಯಾರ್ಥಿಯ ಕಿರು ಬೆರಳು ಊನಗೊಂಡಿದಲ್ಲದೇ, ಬೆನ್ನು ತೊಡೆ ಹಾಗೂ ಕೈಗಳಲ್ಲಿ ಬಾಸುಂಡೆ ಬಂದಿದೆ. ಸಿಟ್ಟಿನ ಭರದಲ್ಲಿ ಹೂಡೆದ ಶಿಕ್ಷಕ ರಮೇಶ್ ನಂತರ ವಿದ್ಯಾರ್ಥಿಯ ಪರಿಸ್ಥಿತಿ ಮನಗಂಡು ವಿದ್ಯಾರ್ಥಿಯನ್ನು ಬೆದರಿಸಿ ಮನೆಯವರಿಗೆ ಸೈಕಲ್ ನಿಂದ ಬಿದ್ದೆ ಎಂದು ಹೇಳಬೇಕು ಇಲ್ಲದಿದ್ದಲಿ ನಾಳೇ ಮತ್ತೆ ಅಗಣಿತ ಪಾಠ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು ಎಂದು ಗಾಯಾಳು ಆಗಿ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಮಂಜುನಾಥ್ ತಿಳಿಸಿದ್ದಾನೆ. ಮನೆಗೆ ಬಂದ ಮಗನ ಪರಿಸ್ಥಿತಿ ಕಂಡು ವಿಚಾರಿಸಿದಾಗ ಶಾಲೆಯಲ್ಲಿ ನಡೆದ ಘಟನೆಯನ್ನು ಮಂಜುನಾಥ್ ತಿಳಿಸಿದ್ದಾನೆ. ಮಗನನ್ನು ತಕ್ಷಣ ಆಸ್ವತ್ರೆಗೆ ಸೇರಿಸಿದ ತಂದೆ ರಾಜಪ್ಪ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರಲ್ಲದೇ ಈ ಬಗ್ಗೆ ಬಿಇಓ ಹಾಗೂ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಕ್ರಮದ ಭರವಸೆ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಣಿತ ಶಿಕ್ಷಕನ ವಿದ್ಯಾರ್ಥಿ ಮೇಲಿನ ಪೌರುಷದ ಬಗ್ಗೆ ಕನ್ನಡ ಪ್ರಭ ದೂರವಾಣಿ ಮೂಲಕ ಕ್ಷೇತ್ರ ಶಿಕ್ಷಾಣಾಧಿಕಾರಿ ಸುಬ್ರಮಣ್ಯಿರನ್ನು ಸಂಪರ್ಕಿಸಿದಾಗ ಘಟನೆ ಬಗ್ಗೆ ಯಾವುದೇ ದೂರು ಅಥವಾ ಮಾಹಿತಿ ಬಂದಿಲ್ಲ. ಬುಧವಾರ ಬೆಳಿಗ್ಗೆ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿ ತಪಿತಸ್ಥ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.