ಪುರಸಭೆ ನಿರ್ಲಕ್ಷ್ಯ: ಜನರಿಗೆ ಕೊಳಚೆ ನೀರು
ಬಾಗೇಪಲ್ಲಿ: ಕುಡಿಯುವ ನೀರಿಗಾಗಿ ಸರ್ಕಾರ ಲಕ್ಷಾಂತರ ರು.ಗಳನ್ನು ಬಿಡುಗಡೆಗೊಳಿಸಿದರೂ ಪುರಸಭೆ ಮುಖ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಜನತೆಗೆ ಕೊಳಚೆ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿತ್ರಾವತಿ ಬ್ಯಾರೇಜ್ನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಗುಣಿಗಳಲ್ಲಿ ಅಲ್ಪ ಸ್ವಲ್ಪ ನೀರು ಶೇಖರಣೆಯಾಗಿದ್ದು ಈ ನೀರನ್ನು ಸಮರ್ಪಕವಾಗಿ ಪಟ್ಟಣದ ನಾಗರಿಕರಿಗೆ ಸರಬರಾಜು ಮಾಡಿದರೆ ಕೇವಲ ಒಂದು ತಿಂಗಳ ಅವಧಿಗೆ ಖಾಲಿಯಾಗುತ್ತದೆ. ಇಂತಹ ಸಮಯದಲ್ಲಿ ಬ್ಯಾರೇಜ್ನಲ್ಲಿ ಶೇಖರಣೆಯಾಗಿರುವ ಮಳೆಯ ನೀರನ್ನು ಪಟ್ಟಣದಲ್ಲಿರುವ ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡಿ ಶುದ್ದೀಕರಿಸಿದ ನಂತರ ಸರಬರಾಜು ಮಾಡಬೇಕಾಗುತ್ತದೆ.
ಆದರೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚಿತ್ರಾವತಿ ಬ್ಯಾರೇಜ್ನಲ್ಲಿ ಶೇಖರಣೆಯಾಗಿರುವ ಕೆಸರಿನ ನೀರನ್ನು ಯಾವುದೇ ರೀತಿಯಲ್ಲಿ ಶುದ್ಧೀಕರಿಸದೇ ನೇರವಾಗಿ ಸರಬರಾಜು ಮಾಡುತ್ತಿರುವುದರಿಂದ ಜನತೆ ಕೆಸರಿನ ನೀರನ್ನು ರಸ್ತೆ ಮತ್ತು ಚರಂಡಿಗಳಿಗೆ ಹಾಕುವ ಮೂಲಕ ವ್ಯರ್ಥ ಮಾಡುತ್ತಿದ್ದಾರೆ ಎಂದು ಜನರು ದೂರಿದ್ದಾರೆ.
ನೂತನ ಜನಪ್ರತಿನಿಧಿಗಳಲ್ಲಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಬಹುತೇಕ ಸದಸ್ಯೆರೇ ಕೈಗೆ ಸಿಗುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲವಂತಾಗಿದೆ. ಪುರಸಭೆಗೆ ಚುನಾವಣೆ ನಡೆದು 6 ತಿಂಗಳು ಕಳೆದರೂ ಸಹ ಇದುವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನ ಭರ್ತಿಯಾಗಿಲ್ಲವಾದರಿಂದ ಪುರಸಭೆಯಲ್ಲಿ ಅಧಿಕಾರಿಗಳದೇ ದರ್ಬಾರ್ ಅವರು ಹೇಳಿದ್ದೇ ಕಾನೂನು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತೀವ್ರ ಬರಗಾಲಕ್ಕೆ ತುತ್ತಾಗಿರುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಪುರಸಭೆಯ ವ್ಯಾಪ್ತಿಯಲ್ಲಿನ ಜನತೆಗೆ ಶುದ್ಧ ಕುಡಿಯುವ ನೀರನ್ನು ಸಮರ್ರ್ಪಕವಾಗಿ ಸರಬರಾಜು ಮಾಡುವ ಉದ್ದೇಶದಿಂದ ಸರ್ಕಾರ ಲಕ್ಷಾಂತರ ರು.ಗಳನ್ನು ಬಿಡುಗಡೆಗೊಳಿಸಿದೆ. ಆದರೆ ಪುರಸಭೆಯವರು ಸಮರ್ಪಕವಾಗಿ ಶುದ್ಧವಾದ ಕುಡಿಯುವ ನೀರನ್ನು ಪಟ್ಟಣದ ನಾಗರೀಕರಿಗೆ ಸರಬರಾಜು ಮಾಡುವಲ್ಲಿ ಸಂಪೂರ್ಣವಾಗಿ ವಿಫಲಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

