ಕೋಲಾರ

ಪ್ರತ್ಯೇಕ ನಿಗಮ ಸ್ಥಾಪಿಸಲು ಮಹಾದೇವಿ ಒತ್ತಾಯ

Published On :

ಕ.ಪ್ರ.ವಾರ್ತೆ ,  ಬಾಗೇಪಲ್ಲಿ ,  ಸೆ. 29
ಆದಿವಾಸಿ ಬುಡಕಟ್ಟು ಹಕ್ಕಿ-ಪಿಕ್ಕಿ ಜನಾಂಗದವರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸುವಂತೆ ರಾಜ್ಯ ಆದಿವಾಸಿ ಬಡುಕಟ್ಟು ಹಕ್ಕಿಪಿಕ್ಕಿ ಪರಿವರ್ತನಾ ಸಂಘದ ರಾಜ್ಯಾಧ್ಯಕ್ಷೆ ಮಹಾದೇವಿ ಸರ್ಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡು ಬಿಟ್ಟು ನಾಡಿಗೆ ಬನ್ನಿ ನಿಮ್ಮ ಸಮುದಾಯಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ನಮ್ಮನ್ನಾಳಿದ ಸರ್ಕಾರಗಳು ಇದುವರೆಗೂ ಯಾವುದೇ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ. ಕೇವಲ ಸರ್ಕಾರ ನೀಡಿರುವ ಭರವಸೆ ಭರವಸೆಯಾಗಿಯೇ ಉಳಿದೆ. ಈ ನಿಟ್ಟಿನಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರ ಹಿಂದುಳಿದಿವೆ ಎಂದರು.
ಈ ಸಮುದಾಯಗಳಿಗೆ ಮೀಸಲಿರುವ ಸರ್ಕಾರದ ಅನುದಾನಗಳು ಸರಿಯಾಗಿ ಬಳಕೆಯಾಗುತ್ತಿಲ್ಲ, ಈ ಅನುದಾನವನ್ನು ಇತರೆ ಜನಾಂಗದ ರಾಜಕೀಯ ಮುಖಂಡರು ಬಳಕೆ ಮಾಡಿಕೊಳ್ಳುವ ಮೂಲಕ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ,  ಸರ್ಕಾರ ನೀಡುವಂತಹ ಸೌಲಭ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆಂದು ಆರೋಪಿಸಿದರು.
ಪ್ರತಿನಿತ್ಯ ಊರೂರು ಆಲೆದು ಸಣ್ಣ ಪುಟ್ಟ ವ್ಯಾಪಾರ, ಕೂಲಿ ನಾಲಿ  ಮಾಡಿ ಮಕ್ಕಳನ್ನ ಪೋಷಣೆ ಮಾಡುವ ಮೂಲಕ  ಜೀವನ ಮಾಡಲಾಗುತ್ತಿದೆ.ಸಮುದಾಯದವರ ಜೀವನೋಪಾಯಕ್ಕಾಗಿ ಸರ್ಕಾರ ಗೋಮಾಳ ಜಮೀನನ್ನು ಹಾಗೂ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿದರೆ ನಾವು ಊರೂರು ಅಲೆಯುವುದನ್ನು ಬಿಟ್ಟು ಸ್ಥಿರವಾಗಿ ನೆಲೆವೋರಿ ನಮ್ಮ ಮಕ್ಕಳ ಭವಿಷ್ಯತ್ ನಿರ್ಮಿಸಿಕೊಳ್ಳಲು ಹಾಗೂ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ಹಿಂದುಳಿದ ವರ್ಗಗಳ ಹಾಗೂ ಭೋವಿ ಜನಾಂಗದ ಮುಖಂಡ ಗಣೇಶ್ ಮಾತನಾಡಿ, ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸುಮಾರು 31 ಜಾತಿಗಳು ಸೇರಿದ್ದು, ಯಾರಿಗೂ  ಶಿಕ್ಷಣವಿಲ್ಲದೆ  ಅನಕ್ಷರತೆ ಹಾಗೂ ರಾಜಕೀಯ ಇಚ್ಚಾಶಕ್ತಿ ಇಲ್ಲದಿರುವುದೇ ಈ ಜನಾಂಗ ಮುಂದಕ್ಕೆ ಬರದಿರಲು ಕಾರಣ. ಮುಂದಿನ ತಿಂಗಳ ಕೊನೆಯ ವಾರದಲ್ಲಿ ತಾಲೂಕಿನಲ್ಲಿ ರಾಜ್ಯದ ಆದಿವಾಸಿ, ಬುಡಕಟ್ಟು ಪರಿವರ್ತನಾ ವೇಧಿಕೆಯ 2ನೇ ಬೃಹತ್ ರಾಜ್ಯ ಸಮಾವೇಶವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು. ರಾಜ್ಯ ಉಪಾಧ್ಯಕ್ಷ ಯವನ್ ರಾಜು, ಕಾರ್ಯದರ್ಶಿ ನಲ್ಲಿಕಾಯಿ, ಅನಿತ, ತಿಪ್ಪಣ್ಣ, ಅಯ್ಯಪ್ಪ, ಭಾನಾರಾಣಿ, ತಾಲೂಕು ಅಧ್ಯಕ್ಷ ರಾಚ್ಚಪ್ಪ, ಕಾರ್ಯದರ್ಶಿ ರಾಜಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.