ಕೋಲಾರ

ಅಕ್ರಮ ಸಂಗ್ರಹ; 3 ಲಕ್ಷ ಮೌಲ್ಯದ ಮರಳು ವಶ

Published On :

ಗೌರಿಬಿದನೂರು: ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಒಂದು ಲಾರಿ ಹಾಗೂ ಸಕ್ಕರೆ ಕಾರ್ಖಾನೆ ಹಿಂಭಾಗದಲ್ಲಿರುವ ವೀರಗೊಲ್ಲಹಳ್ಳಿಯ ನದಿಯ ಬಳಿ ರು. 3ಲಕ್ಷ ಮೌಲ್ಯದ 25 ಲಾರಿ ಲೋಡ್‌ನಷ್ಟು ರಾಶಿ ಹಾಕಿದ್ದ 8 ಮರಳುಗುಡ್ಡೆಯನ್ನು ಗ್ರಾಮಾಂತರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ಮತ್ತು ತಂಡ ವಶ ಪಡಿಸಿಕೊಂಡು ಸೂಕ್ತ ಕ್ರಮಕ್ಕಾಗಿ ತಹಸೀಲ್ದಾರ್ ಅವರಿಗೆ ವಹಿಸಿದ್ದು ಅದನ್ನು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಮೌಲ್ಯವನ್ನು ನಿಗದಿ ಪಡಿಸಿ ಹರಾಜು ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸುಮಾರು ರು. 3ಲಕ್ಷ ಮೌಲ್ಯದ 25 ಲಾರಿ ಲೋಡ್‌ನಷ್ಟು ಮರಳನ್ನು ರಾಶಿ ಹಾಕಲಾಗಿತ್ತು. ಇತ್ತೀಚೆಗೆ ಮಳೆಯಾದ್ದರಿಂದ ಉತ್ತಮ ಮರಳು ಶೇಖರಣೆಯಾಗಿತ್ತು, ಅದನ್ನು ಕಳ್ಳತನದಲ್ಲಿ ರಾತ್ರಿ 10ಗಂಟೆಯ ನಂತರ ಟ್ರ್ಯಾಕ್ಟರ್ ಮೂಲಕ ನದಿಯಿಂದ ಜಮೀನುಗಳಲ್ಲಿ ರಾಶಿ ಹಾಕಿಕೊಂಡು ಲಾರಿಗಳಿಗೆ ತುಂಬಿ ಕಳುಹಿಸಲಾಗುತ್ತಿತ್ತು. ಮಾತ್ರವಲ್ಲ, ಪ್ರತಿದಿನ 60ಕ್ಕೂ ಹೆಚ್ಚಿ ಲಾರಿಗಳು ಕಳ್ಳತನದಲ್ಲಿ ಮರಳು ಸಾಗಿಸುತ್ತಿದ್ದವು ಎಂದು ಪಿಎಸ್‌ಐ ಶಿವಕುಮಾರ್ ತಿಳಿಸಿದ್ದಾರೆ.
ಈ  ನಿಟ್ಟಿನಲ್ಲಿ ಅಕ್ರಮವಾಗಿ ಮರಳು ಸಾಗಿಸುವ ಟ್ರ್ಯಾಕ್ಟರ್ ಮತ್ತು ಲಾರಿಗಳಿಗೆ ಹೆಚ್ಚು ದಂಡ ವಿಧಿಸಲಾಗುವುದು ಹಾಗೂ ಸಂಪೂರ್ಣ ಮರಳು ಸಾಗಾಣಿಕೆ ಸ್ಥಗಿತಗೊಳಿಸಲಾಗುವುದು ಎಂದರು.
ವೃತ್ತ ನಿರೀಕ್ಷಕ ಸಿಪಿಐ ಲಕ್ಷ್ಮಯ್ಯ, ಪೇದೆಗಳಾದ ಸುರೇಶ್, ವೇಣು, ಮಂಜುನಾಥ್, ಹನುಮಂತಪ್ಪ, ಆನಂದ್, ವೆಂಕಟೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.