ಕೋಲಾರ

'ಅಭಿವೃದ್ಧಿಗೆ ನ್ಯಾಯಸಮ್ಮತ ತೀರ್ಪುಗಳೇ ಕಾರಣ'

Published On :

ಚಿಂತಾಮಣಿ: ಸಾಮಾಜಿಕ ನ್ಯಾಯಕ್ಕಾಗಿ ನ್ಯಾಯಸಮ್ಮತವಾದ ತೀರ್ಪುಗಳೇ ಗ್ರಾಮೀಣ ಮಟ್ಟದಿಂದ ಹಂತ ಹಂತವಾಗಿ ಬೆಳೆಯಲು ಸಾಧ್ಯವಾಯಿತು ಎಂದು ಸುಪ್ರಿಂಕೋರ್ಟ್‌ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.
ಪಟ್ಟಣದ ಮಾಳಪ್ಪಲ್ಲಿಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ನಾಗರಿಕರ ಹಾಗೂ ವಿವಿಧ ಪ್ರಗತಿಪರ ಸಂಘಗಳಿಂದ ಸನ್ಮಾನ ಕಾರ್ಯಕ್ರಮದಲ್ಲಿ ಆತ್ಮೀಯರು, ಹಳೇ ಸ್ನೇಹಿತರು, ಹಿತೈಶಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದ ಬಡವ ಶ್ರೀಮಂತ ಎಂಬ ಬೇದಭಾವವಿಲ್ಲದೆ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದ್ದು, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ನೊಂದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ದೊರೆಕಿಸಿಕೊಡುವ ಜವಾಬ್ದಾರಿ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯವಾದ ತೀರ್ಪುಗಳು ನೀಡುವಲ್ಲಿ ಬದ್ದರಾಗಿದ್ದೇವೆ ಎಂದು ಹೇಳಿದರು. ಸಮಾಜದ ಸುಧಾರಣೆಗಾಗಿ ಪ್ರತಿಯೊಬ್ಬರೂ ಅಭಿವೃದ್ಧಿಯತ್ತ ಯೋಚಿಸಿ ಮುನ್ನಡೆದಾಗ ಸಮಾಜ ಸುಧಾರಣೆಯಾಗಲು ಸಹಕಾರವಾಗಲಿದೆ ಎಂದು ಹೇಳಿದರು.
ಬಡಜನರ ಪರ: ಗ್ರಾಮೀಣ ಪ್ರದೇಶದ ಕುಗ್ರಾಮದಲ್ಲಿ ಜನಿಸಿ ಕಷ್ಟಬಿದ್ದು ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆದು ಬಂದ ದಾರಿ ಮರೆತಿಲ್ಲವೆಂದು ಹಾಗೂ ಕಷ್ಟದಿಂದ ಮೇಲೆ ಬಂದ ನಾನು ಇಂದಿಗೂ ದೌರ್ಜನ್ಯಕ್ಕೊಳಗಾದ ಬಡಜನರ ಪರವಾಗಿ ನ್ಯಾಯ ಒದಗಿಸುವಲ್ಲಿ ಜನಪರ ತೀರ್ಪುಗಳನ್ನೇ ನೀಡಿದ್ದೇನೆಂದು ಹೇಳಿದರು.
ಹಳೇ ಸ್ನೇಹಿತರ ನೆನಪು: ಕಾಲೇಜು, ವಕೀಲ ವೃತ್ತಿಯಿಂದ ಹಿಡಿದು ನ್ಯಾಯಾಧೀಶರಾಗಿ, ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಯಾಗಲು ತನ್ನ ಆತ್ಮೀಯ ಸ್ನೇಹಿತರು ಹಾಗೂ ಹಿತೈಶಿಗಳು ಕಾರಣವೆಂದು ತಮ್ಮ ಅಭಿವೃದ್ಧಿಯ ಸಾಧನೆ ಬಗ್ಗೆ ಮೆಲಕು ಹಾಕಿದರು. ಸಮಾಜದಲ್ಲಿ ಕಡೆಗಣಿಸಿದ, ತುಳಿತಕ್ಕೊಳಗಾದವರ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಪ್ರಕರಣಗಳಲ್ಲಿ ತಾವು ನೀಡುವ ಪ್ರತಿ ತೀರ್ಪು ಜನಪರವಾಗಿದೆ ಎಂದು  ಪ್ರತಿಪಾದಿಸಿದರು. ಕಾರ್ಯಕ್ರಮಕ್ಕೂ ಮುನ್ನ ನ್ಯಾ.ಗೋಪಾಲಗೌಡರವರನ್ನು ನಾಗರಿಕರು ಸನ್ಮಾನಿಸಿದರು. ಮಾಜಿ ಸಚಿವವಿ. ಮುನಿಯಪ್ಪ, ನಿಸಾರ್ ಅಹಮದ್, ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಪುರಸಭಾ ಮಾಜಿ ಅಧ್ಯಕ್ಷ ಕಮಾಜಿ ಷ್ಣಸ್ವಾಮಿ, ಮಾಳಪ್ಪಲ್ಲಿ ಶಿವಾರೆಡ್ಡಿ, ಡಾ. ಜಯಂತಿ ಸೇರಿದಂತೆ ಹಲವಾರು ವಕೀಲರು, ಜನಪ್ರತಿನಿಧಿಗಳು, ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.