ನಗರೋತ್ಥಾನ ಕಾಮಗಾರಿಯಲ್ಲಿಅವ್ಯವಹಾರ: ಮುರಳಿ ಆರೋಪ
ಕೋಲಾರ: ನಗರರೋತ್ಥಾನ-2ರಡಿ ಜಿಲ್ಲೆಯಲ್ಲಿ ನಡೆದಿರುವ 65 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದ್ದು ಈ ಸಂಬಂಧ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಬೆಂಗಳೂರಿನ ಬಿ.ಎಸ್.ಆರ್ ಇಂಪೋಟೆಕ್ ಇಂಡಿಯಾ ಲಿ. ಕಂಪನಿಯ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದು ನಗರಸಭಾ ಸದಸ್ಯ ಎಸ್.ಆರ್. ಮುರಳಿಗೌಡ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸದರಿ ಯೋಜನೆಯಡಿ ಕೋಲಾರದಲ್ಲಿ 30 ಕೋಟಿ, ಕೆಜಿಎಫ್ನಲ್ಲಿ 15ಕೋಟಿ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ ಹಾಗೂ ಮಾಲೂರು ಪಟ್ಟಣಗಳಲ್ಲಿ ತಲಾ ಐದು ಕೋಟಿ ರು.ಗಳ ಕಾಮಗಾರಿಯ ಟೆಂಡರ್ಅನ್ನು ಈ ಸಂಸ್ಥೆ ಪಡೆದುಕೊಂಡಿದ್ದು ಜಿಲ್ಲೆಯ ಗುತ್ತಿಗೆದಾರರು ಟೆಂಡರ್ನಲ್ಲಿ ಭಾಗವಹಿಸದಂತೆ ಮಾಡಲು ಸಾಕಷ್ಟು ಅವ್ಯವಹಾರ ನಡೆಸಿರುವುದಾಗಿ ತಿಳಿಸಿದ್ದಾರೆ.
ಸದರಿ ಅವ್ಯವಹಾರದಲ್ಲಿ ಅಧಿಕಾರಿಗಳು ಭಾಗಿಗಳಾಗಿದ್ದು, ಖಾಸಗಿ ಸಂಸ್ಥೆಯವರು ತಯಾರಿಸಿದ ದುಪ್ಪಟ್ಟು ಅಂದಾಜು ಪಟ್ಟಿಗೆ ತಾಂತ್ರಿಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿರುವ ಮುರಳಿಗೌಡರು,ಈ ಟೆಂಡರ್ನಲ್ಲಿ ಜಿಲ್ಲೆಯ ಗುತ್ತಿಗೆದಾರರು ಪಾಲ್ಗೊಳ್ಳದಂತೆ ಮಾಡಲು ಈ ಎಲ್ಲಾ ಕಾಮಗಾರಿಗಳ 65 ಕೋಟಿ.ರು ಗಳನ್ನು ಒಂದೇ ಪಾಕೇಜ್ನಡಿ ಟೆಂಡರ್ ಕರೆದಿತ್ತು. ಆದರೆ ಈ ಸಂಸ್ಥೆ ಶೇ.15 ರಷ್ಟು ಹೆಚ್ಚಿನ ಎಸ್.ಆರ್. ದರದಡಿ ಟೆಂಡರ್ ಮೊತ್ತ ನಮೂದಿಸಿ ಕಳೆದ ಮಾ.16 ರಂದು ಕಾರ್ಯೋದ್ಧೇಶ ಪತ್ರವನ್ನು ಪಡೆದುಕೊಂಡು ಆರು ತಿಂಗಳಾದರೂ ಕಾಮಗಾರಿ ಆರಂಭಿಸಿಲ್ಲ ಎಂದು ಟೀಕಿಸಿದ್ದಾರೆ.
ಸದರಿ ಅವ್ಯವಹಾರದಲ್ಲಿ ಅಧಿಕಾರಿಗಳು ಭಾಗಿಗಳಾಗಿದ್ದು, ಖಾಸಗಿ ಸಂಸ್ಥೆಯವರು ತಯಾರಿಸಿದ ದುಪ್ಪಟ್ಟು ಅಂದಾಜು ಪಟ್ಟಿಗೆ ತಾಂತ್ರಿಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿರುವ ಮುರಳಿಗೌಡರು, ಈ ಅವ್ಯವಹಾರದಲ್ಲಿ ಖಾಸಗಿ ಸಂಸ್ಥೆಯೊಂದಿಗೆ ಅಧಿಕಾರಿಗಳು, ಗುತ್ತಿಗೆದಾರರೂ ಶಾಮೀಲಾಗಿದೆ.
ಮಾತ್ರವಲ್ಲ, ಕಾಂಕ್ರಿಟ್ ರಸ್ತೆಗೆ 16 ಇಂಚು ದಪ್ಪ, ಡಾಂಬರು ರಸ್ತೆಗೆ ಕೆಲವು ರಸ್ತೆಗಳಿಗೆ 16 ಹಾಗೂ ಮತ್ತೆ ಕೆಲವು ರಸ್ತೆಗಳಿಗೆ 18 ಇಂಚು ಎಂದು ದುಪ್ಪಟ್ಟು ಬೆಲೆಯಲ್ಲಿ ಅಂದಾಜು ಪಟ್ಟಿ ತಯಾರಿಸುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆಂದು ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

