ಮಾತಿಗಿಂತ ಕೆಲಸಕ್ಕೆ ಮೊದಲ ಆದ್ಯತೆ: ಸಂಸದೆ ರಮ್ಯಾ
ಸಾಲಿಗ್ರಾಮ: ಮಾತನಾಡುವುದರ ಬದಲು ಕೆಲಸ ಮಾಡುವುದಕ್ಕೆ ನನ್ನ ಮೊದಲ ಆದ್ಯತೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದೆ ರಮ್ಯಾ ಹೇಳಿದರು. ಪಟ್ಟಣದಲ್ಲಿ ಬುಧವಾರ ನಡೆದ ರೋಡ್ ಶೋನಲ್ಲಿ ಮತಯಾಚಿಸಿ ಮಾತನಾಡಿದ ಅವರು, ಕಳೆದ ಉಪ ಚುನಾವಣೆಯಲ್ಲಿ ತಾಲೂಕಿನಿಂದ ಅತಿ ಹೆಚ್ಚು ಮತಗಳನ್ನು ನೀಡಿ ನಾನು ಆಯ್ಕೆಯಾಗಲು ಕ್ಷೇತ್ರದ ಜನರು ಕಾರಣರಾಗಿದ್ದು, ನನಗೆ ಸಿಕ್ಕಿದ ಕಡಿಮೆ ಅವಧಿಯಲ್ಲಿ ನನ್ನ ಶಕ್ತಿಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.
ಸೆಂಟ್ರಿಂಗ್ ಕುಸಿದು ಕೂಲಿಕಾರ್ಮಿಕ ಸಾವು
ಕೆಜಿಎಫ್: ಮನೆ ನಿರ್ಮಾಣದ ವೇಳೆ ಸೆಂಟ್ರಿಂಗ್ ಕುಸಿದು ಕೂಲಿಕಾರ್ಮಿಕರೊಬ್ಬರು ಮೃತಪಟ್ಟಿದ್ದು ಮತ್ತೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಗರದ ಉರಿಗಾಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಂಪಿಯನ್ರೀಫ್ನ ನಿವಾಸಿ ಮುರುಗೇಶ್(42) ಮೃತಪಟ್ಟ ವ್ಯಕ್ತಿ. ಉರಿಗಾಂ ವ್ಯಾಪ್ತಿಯ ಓರಿಯಂಟಲ್ ಲೈನ್ನಲ್ಲಿ ಸೆಲ್ವಂ ಎಂಬುವರಿಗೆ ಸೇರಿದ ಮನೆಯ ಕಟ್ಟಡ ನಿರ್ಮಾಣದ ವೇಳೆ ಮೇಲ್ಛಾವಣಿ ಕುಸಿದು ಕೂಲಿಕಾರ್ಮಿಕ ಮುರಗೇಶನ್ ಹಾಗೂ ದಿನೇಶ್ ಎಂಬುವರು ಗಂಭೀರ ಗಾಯಗೊಂಡಿದ್ದು, ಇವರನ್ನು ಕೂಡಲೇ ಸ್ಥಳಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮುರಗೇಶನ್ ಮೃತಪಟ್ಟಿದ್ದು ಮತ್ತೊಬ್ಬ ಕೂಲಿ ಕಾರ್ಮಿಕ ದಿನೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಮುರುಗೇಶ್ನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಗುತ್ತಿಗೆದಾರ ಪುಣ್ಯಮೂರ್ತಿ ಹಾಗೂ ಮನೆ ಮಾಲೀಕ ಸೆಲ್ವಂ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಉರಿಗಾಂ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ
ಶಿಡ್ಲಘಟ್ಟ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ ಹಂಡಿಗನಾಳ ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಜನರು ಬೀಗ ಜಡಿದು, ಖಾಲಿ ಬಿಂದಿಗೆಗಳನ್ನಿಟ್ಟು ಪ್ರತಿಭಟನೆ ನಡೆಸಿದರು. 9 ವರ್ಷಗಳಿಂದ ಸತತವಾಗಿ ಕೇಳುತ್ತಿದ್ದರೂ ಕೂಡಾ ನಮ್ಮ ಮನೆಗಳ ಕಡೆಗೆ ಒಂದು ಪೈಪನ್ನು ಹಾಕಿಲ್ಲ. ಎತೆಚ್ಚವಾಗಿ ನೀರಿದ್ದರೂ ಕೂಡಾ ನೀರಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ನಾವು ದೂರದ ತೋಟಗಳಿಂದ ನೀರನ್ನು ಹೊತ್ತುಕೊಂಡು ಬರುತ್ತೇವೆ. ನಮಗೆ ಬೇರೆ ದಾರಿಯಿಲ್ಲ. ಆದ್ದರಿಂದ ಕೂಡಲೇ ನಮಗೆ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಪಂ ಅಧ್ಯಕ್ಷೆ ಪಂಚಾಯ್ತಿ ಮುಖಂಡರು ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಸುಗ್ಗಲಮ್ಮ ದೇವಿ ಜಾತ್ರಾ ಮಹೋತ್ಸವ
ಕೆಜಿಎಫ್: ಕ್ಷೇತ್ರದ ಬೇತಮಂಗಲ ಹೋಬಳಿಯ ಹುಲ್ಕೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಸುಗ್ಗಲಮ್ಮ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಯುಗಾದಿ ಹಬ್ಬದ ಹೊಸತೊಡಕು ದಿನದಂದು ಮಾಂಸಹಾರ ಸೇವಿಸಿ ಸುತ್ತಮುತ್ತಲ ಗ್ರಾಮಸ್ಥರು ಶ್ರೀ ಸುಗ್ಗಲಮ್ಮ ದೇವಿಯ ರಥ ಎಳೆಯುವುದರ ಮೂಲಕ ಹಬ್ಬ ಆಚರಿಸುತ್ತಾರೆ. ಬಂಗಾರು ತಿರುಪತಿ ಗುಟ್ಟಹಳ್ಳಿ ದೇವಸ್ಥಾನ ಪಕ್ಕದ ಹುಲ್ಕೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಸುಗ್ಗಲಮ್ಮ ದೇವಿ ಸುತ್ತಮುತ್ತಲಿನ ಸುಮಾರು 40 ಗ್ರಾಮಗಳ ದೇವತೆಯಾಗಿದ್ದು ಭಕ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುತ್ತಿರುವುದು ಈ ಭಾಗದ ಜನರ ನಂಬಿಕೆಯಾಗಿದೆ. ಜಾತ್ರೆ ಪ್ರಯುಕ್ತ ಕುರಿ ಮತ್ತು ಕೋಳಿಗಳನ್ನು ಬಲಿ ನೀಡಲಾಗುತ್ತದೆ. ಜಾತ್ರೆ ಪ್ರಯುಕ್ತ ಶ್ರೀ ಸುಗ್ಗಲಮ್ಮ ದೇವಸ್ಥಾನದಲ್ಲಿ ಬೆಳಗಿನಿಂದಲೇ ವಿವಿಧ ಕಾರ್ಯಕ್ರಮಗಳು, ವಿಶೇಷ ಪೂಜೆಗಳು, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ದೇವಿಯ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

