ಕೋಲಾರ

ಶಿಂಗಸಂದ್ರದಲ್ಲಿ ಸಂಘರ್ಷ: ಹಲವರಿಗೆ ಗಾಯ

Published On :

ಚಿಂತಾಮಣಿ: ನೀರಿನ ವಿಷಯ ಹಾಗೂ ರಾಜಕೀಯ ವೈಷಮ್ಯದಿಂದಾಗಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಚಿಂತಾಮಣಿ ತಾಲೂಕಿನ ಶಿಂಗಸಂದ್ರ ಗ್ರಾಮದಲ್ಲಿ ನಡೆದಿದೆ.
ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಂಗಸಂದ್ರದಲ್ಲಿ ಯುಗಾದಿ ಹಬ್ಬದ ದಿನ ಸಾರ್ವಜನಿಕರ ನೀರಿನ ಟ್ಯಾಂಕ್ ಬಳಿ ನೀರು ಹಿಡಿಯುವ ವಿಷಯವಾಗಿ ದಲಿತ ಸಮುದಾಯಕ್ಕೆ ಸೇರಿದ ಮಂಜುನಾಥ ಹಾಗೂ ಮೇಲ್ವವರ್ಗಕ್ಕೆ ಸೇರಿದ ಪ್ರಭಾಕರ ಎಂಬವರ ನಡುವೆ ಮಾತಿನ ಚಕಮಕಿ ನಡೆಯಿತು. ಇದು ಇಷ್ಟಕ್ಕೆ ನಿಲ್ಲದೆ, ಮಾರನೇ ದಿನ ಅಂದರೆ, ಮಂಗಳವಾರ ಮಂಗಳವಾರ ಬೆಳಿಗ್ಗೆ ಗ್ರಾಮದಲ್ಲಿ ಮತ್ತೆ ನೀರಿನ ವಿಷಯವಾಗಿ 2 ಜಾತಿಗಳ ನಡುವೆ ಆರೋಪ-ಪ್ರತ್ಯಾರೋಪ ನಡೆದು ಮಾರಾ ಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಲು ತೂರಾಟ: ಇದೇ ವಿಚಾರವಾಗಿ ಉದ್ರಿಕ್ತರ ಗುಂಪೊಂದು ದಲಿತ ಕಾಲೋನಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ.
ಈ ಸುದ್ದಿ ತಿಳಿದ ತಕ್ಷಣ ಪೋಲೀಸರು ಮುನ್ನೆಚ್ಚರ ಕ್ರಮವಾಗಿ ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಕ್ಕಾಂ ಹೂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಎಂ.ಸಿ.ಸುಧಾಕರ್ ವಿರುದ್ಧ ಗ್ರಾಮದಲ್ಲಿ ಹಲವು ದಲಿತರು ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪರವಾಗಿ ಕೆಲಸ ಮಾಡಿದರೆಂದು ಮೇಲ್ವರ್ಗದವರು ಆರೋಪಿಸಿ, ಅವರ ವಿರುದ್ಧ ಆಗಾಗ ಗಲಾಟೆ ನಡೆಯುತ್ತಿದ್ದವು. ಇದರ ಪರಿಣಾಮವೇ ಮಂಗಳವಾರ ಮತ್ತೆ ಇಂಥ ಘಟನೆ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಘಟನೆ ಸಂಬಂಧ ಎರಡೂ ಕಡೆಯಿಂದ ದೂರು ದಾಖಲಾಗಿವೆ. ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.