ಕೆಜಿಎಫ್ನಲ್ಲಿ ...
ಕೆಜಿಎಫ್: ಅಪರಾಧ ರಹಿತ ಉತ್ತಮ ಸಮಾಜ ನಿರ್ಮಿಸಲು ನಿವೃತ್ತ ಪೊಲೀಸರ ಸಹಕಾರ ಅಗತ್ಯ ಎಂದು ನಿವೃತ್ತ ಪಿಎಸ್ಐ ಜಿ.ಮನೋಹರ್ ಅಭಿಪ್ರಾಯಪಟ್ಟರು.
ಕೆಜಿಎಫ್ನ ಡಿಎಆರ್ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಧ್ವಜ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, “@«ÚߺÚÉ ಹಾಗೂ ಉತ್ತಮ ಸೇವೆಗೈದ ನಿವೃತ್ತ ಪೊಲೀಸ್ ಅಧಿಕಾರಿಗಳ, ಸಿಬ್ಬಂದಿ ಸಲಹೆ, ಸೂಚನೆಗಳಿಂದ ಅಪರಾಧಗಳನ್ನು ತಡೆಗಟ್ಟಲು ÑÛ¨ÚÀ’ ಎಂದು ಹೇಳಿದರು.
ಉಪರಕ್ಷಣಾಧಿಕಾರಿ ಎ.ಕೆ.ವಿವೇಕಾನಂದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, “1965ÁÚ ಏಪ್ರಿಲ್ 2ರಂದು ಕರ್ನಾಟಕ ಪೊಲೀಸ್ ಕಾಯ್ದೆಯು ಜಾರಿಗೆ ಬಂದಿದ್ದು, ಅಂದಿನಿಂದಲೇ ಪೊಲೀಸ್ ಧ್ವಜ ದಿನಾಚಾರಣೆಯನ್ನು ಪೊಲೀಸ್ ಕಲ್ಯಾಣ ದಿನವನ್ನಾಗಿ ಆಚರಿಸುತ್ತಿದ್ದು, ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಂತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯಾವುದೇ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಿ ¶VæÔÚÂÒOÚæà×ÚÙ¶ÔÚ¥Úß’ ಎಂದರು,
ಇದೇ ಸಂದರ್ಭದಲ್ಲಿ ಆರಿಪಿಐ ಕೆ.ಆರ್.ರಘು ಅವರ ನೇತೃತ್ವದಲ್ಲಿ ಡಿಎಆರ್ ಹಾಗೂ ನಾಗರಿಕ ಪೊಲೀಸರಿಂದ ಆಕರ್ಷಕ ರೀತಿಯಲ್ಲಿ ಪಥಸಂಚಲನ ನಡೆಯಿತು. ಅತಿಥಿಗಳು ಪೊಲೀಸ್ ಧ್ವಜಗಳನ್ನು ಬಿಡುಗಡೆಗೊಳಿಸಿದರು. ವಿಕ್ರಂಶ್ರೀನಿವಾಸ್ ಅವರಿಂದ ನಿರೂಪಣೆ ಹಾಗೂ ಸಿಪಿಐ ಪವನ್ಕುಮಾರ್ ಅವರಿಂದ ವಂದನಾರ್ಪಣೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

