ಕೋಲಾರ

ಕಾಂಗ್ರೆಸ್ನಿಂದ ಅಭಿವೃದ್ಧಿ: ಮುನಿಯಪ್ಪ

Published On :

150 ಕೋಟಿ ವೆಚ್ಚದಲ್ಲಿ ಟೂಲ್ಸ್ ರೂಂ ಟ್ರೇನಿಂಗ್ ಸೆಂಟರ್ ಆರಂಭ
ಕನ್ನಡಪ್ರಭ ವಾರ್ತೆ, ಮಾಲೂರು, ಏ.3
ದೇಶದಲ್ಲಿರುವರೆಲ್ಲ ಭಾರತೀಯರೇ ಎಂದು ಗೌರವಿಸುವ ಏಕೈಕ ಪಕ್ಷ ಕಾಂಗ್ರೆಸ್. ಕಳೆದ ಹತ್ತು ವರ್ಷದಿಂದ ಅಭಿವೃದ್ಧಿ ಪರ ಆಡಳಿತ ನೀಡುತ್ತಿರುವ ಯುಪಿಎ ನೇತೃತ್ವವಹಿಸಿರುವ ಕಾಂಗ್ರೆಸ್ನ್ನು ಬೆಂಬಲಿಸಿ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ವೈಟ್ಗಾರ್ಡನ್ನಲ್ಲಿ ಸ್ಥಳೀಯ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, 'ಗಾಂಧಿ ಸಿದ್ಧಾಂತವನ್ನು ನಂಬಿರುವ ಕಾಂಗ್ರೆಸ್ ಯಾವಾಗಲೂ ದೇಶದ ಅಭಿವೃದ್ಧಿ ಕಡೆ ಚಿಂತಿಸುತ್ತದೆ' ಎಂದರು.
ಮುಳಬಾಗಿಲಿನಲ್ಲಿ ರಾಷ್ಟ್ರೀಯ ವಿಶೇಷ ಉತ್ಪಾದನಾ ವಲಯ ನಿರ್ಮಿಸಲು 12,500 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿ 150 ಕೋಟಿ ವೆಚ್ಚದಲ್ಲಿ ಟೂಲ್ಸ್ ರೂಂ ಟ್ರೈನಿಂಗ್ ಸೆಂಟರ್ ಪ್ರಾರಂಭಿಸಲಾಗುತ್ತಿದೆ. ಪ್ರತಿ ವರ್ಷ ಹತ್ತು ಸಾವಿರ ಯುವಕರಿಗೆ ತರಬೇತಿ ನೀಡಲಾಗುತ್ತದೆ. ಅದೇ ರೀತಿ ಮುಂದೆ ಸಹ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಮಾತನಾಡಿ, 'ಲಂಚ ಕೊಟ್ಟೆ ಎನ್ನುವುದಾಕ್ಕಾಗಿ ಜೈಲಿಗೆ ಹೋದ ನನಗಿಂತ ಲಂಚ ಪಡೆದು ಭ್ರಷ್ಟಾಚಾರ ನಡೆಸಿದವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇಂಥ ಕಷ್ಟದ ಸಮಯದಲ್ಲಿ ನನ್ನ ಕೈ ಹಿಡಿದ ಮುನಿಯಪ್ಪ ಅವರನ್ನು ಗೆಲ್ಲಿಸಬೇಕಾದ ಜವಾಬ್ದಾರಿ ಇದೆ' ಎಂದರು.
ಮಾಜಿ ಕೇಂದ್ರ ಸಚಿವ ರಾಜಶೇಖರ್ ಮೂರ್ತಿ, ಮುಖಂಡ ಚೆನ್ನಕೇಶವ, ಇಕ್ಬಾಲ್, ರಾಜಣ್ಣ, ನಾಗರಾಜ್ ಮಾತನಾಡಿದರು. ಚೆನ್ನರಾಯಪ್ಪ, ಮುನಿರಾಜು, ಟಿ.ಎಂ.ಆಶೋಕ್ ಕುಮಾರ್, ಅಂಜನಿ ಸೋಮಣ್ಣ, ವೈ.ನಾರಾಯಣ್, ಗೋವಿಂದಪ್ಪ, ರಘುನಾಥ್, ಸಿ.ಲಕ್ಷ್ಮಿನಾರಾಯಣ್, ಸಿ.ಪಿ. ವೆಂಕಟೇಶ್, ರಾಮರೆಡ್ಡಿ, ವೆಂಕಟರಾಮ್, ಅನಿಲ್ಕುಮಾರ್, ಜಗದೀಶ್, ಚಿಂತಾಮಣಿ ಶ್ರೀರಾಮ್, ಟಿ,ಬಿ.ಕೃಷ್ಣಪ್ಪ, ಅಪ್ಪಾಜಿಗೌಡ, ಯಲ್ಲಮ್ಮ, ಲೋಕೇಶ್, ಪುಟ್ಟಸ್ವಾಮಿ ಸೇರಿದಂತೆ ನೂರಾರು ಮುಖಂಡರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.