ಮುನಿಯಪ್ಪಗೆ ಬೆಂಬಲ 'ಪ್ರಕಾಶ'
ಶತ್ರುವನ್ನೇ ಮಿತ್ರನನ್ನಾಗಿ ಮಾಡಿಕೊಂಡ ಕೆ.ಎಚ್.ಮುನಿಯಪ್ಪ
ಜೆಡಿಎಸ್ ಅಭ್ಯರ್ಥಿ ಕೇಶವರಂಥವರು ಸಂಸತ್ತಿಗೆ ಹೋಗಬಾರದು
ಕನ್ನಡಪ್ರಭ ವಾರ್ತೆ, ಕೋಲಾರ, ಏ.3
ಕಳೆದ ಆರು ವರ್ಷಗಳಿಂದ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದ ಕೇಂದ್ರ ಸಚಿವ, ಹಾಲಿ ಲೋಕಸಭಾ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಹಾಗೂ ಶಾಸಕ ವರ್ತೂರ್ ಪ್ರಕಾಶ್ ಮತ್ತೆ ಒಂದಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವರ್ತೂರ್ ಪ್ರಕಾಶ್ ಅವರನ್ನು ಗಂಟು ಮೂಟೆ ಸಹಿತ ಕೋಲಾರ ಕ್ಷೇತ್ರದಿಂದ ಓಡಿಸುವುದಾಗಿ ಹೇಳಿದ್ದರು ಮುನಿಯಪ್ಪ. ಆದರೆ ಇದೀಗ ಸ್ವಪಕ್ಷೀಯರೇ ಒಳೇಟು ನೀಡಬಹುದೆಂಬ ಅನುಮಾನದಿಂದ 'ಶತ್ರುವನ್ನು ಮಿತ್ರ'ನ್ನನ್ನಾಗಿ ಮಾಡಿಕೊಂಡು ಎದುರಾಳಿಗಳ ಸವಾಲು ಹಾಕಿದ್ದಾರೆ. ಇನ್ನು ಮುನಿಯಪ್ಪನ ಅವರನ್ನು ಸೋಲಿಸಿಯೇ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದ ಶಾಸಕ ವರ್ತೂರ್ ಪ್ರಕಾಶ್ ಸಹ ತಮ್ಮ ರಾಜಕೀಯ ಗುರುಗಳಾದ ಸಿಎಂ ಸಿದ್ದರಾಮಯ್ಯ ಅವರ ಆದೇಶಕ್ಕೆ ಮಣಿದು ಕಾಂಗ್ರೆಸ್ ಪರವಾಗಿ ಕೆಲಸ ಮಾಡಲು ಒಪ್ಪಿದ್ದಾರೆ.
ಕೋಲಾರದ ಶಾಂತಿ ಸಾಗರದಲ್ಲಿ ಆಯೋಜಿಸಲಾಗಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಪ್ರಕಾಶ್, 'ಇತ್ತೀಚೆಗಷ್ಟೆ ತಾವು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲವೇ ಬಿಜೆಪಿ ಪರವಾಗಿ ಕೆಲಸ ಮಾಡಲಿದ್ದು, ಶೀಘ್ರವೇ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು ಪ್ರಕಾಶ್. ನಾನೇನೂ ಸುಲಭವಾಗಿ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿಲ್ಲ. ಕೋಲಾರ ಕ್ಷೇತ್ರದ ಅಭಿವೃದ್ಧಿ ಹಾಗೂ ಬೆಂಬಲಿಗರ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಪ್ರಕಟಿಸಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಹಾಗಾಗಿ, ವಾದ್ದರಿಂದ ಮುನಿಯಪ್ಪನರನ್ನು ಬೆಂಬಲಿಸುತ್ತಿದ್ದೇನೆ' ಎಂದು ಸಮರ್ಥನೆ ನೀಡಿದರು.
ಜೆಡಿಎಸ್ ಮುಖಂಡ ಕೆ.ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಕಾಶ್, ಸಂಸತ್ತಿಗೆ ಶುದ್ಧ ಹಸ್ತದ, ಅನುಭವಿ ವ್ಯಕ್ತಿ ಆಯ್ಕೆ ಆಗಿ ಹೋಗಬೇಕೇ ಹೊರತು ಕೇಶವರಂಥ ಭೂ ವ್ಯಪಾರಿಯಲ್ಲ. ಕೇಶವ ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ದೂರಿದರು. ಬಿಜೆಪಿ ಅಭ್ಯರ್ಥಿ ಗೆದ್ದರೆ ಅದು ಶ್ರೀನಿವಾಸಗೌಡ ಗೆದ್ದಂತಾಗುತ್ತದೆ. ಕೇಶವ ಬಳಿ ಹಣ ಪಡೆದು ಬಿಜೆಪಿಗೆ ಓಟು ಹಾಕಿಸುತ್ತಾರೆ ಎಂದು ಟೀಕಿಸಿದರು.
ಸಭೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಗ್ರಾಮ ಪಂಚಾಯಿತಿ ಹಾಗೂ ತಾಪಂಗಳಲ್ಲಿ ಅಧಿಕಾರ ಹೊಂದಿರುವ ವರ್ತೂರ್ ಬಣದ ಅಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಒಕ್ಕೂರಲಿನಿಂದ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

