ಕೋಲಾರ

ರಾಹುಲ್ ಸೇನೆಗೆಪದಾಧಿಕಾರಿಗಳ ಆಯ್ಕೆ

Published On :

ಗುಡಿಬಂಡೆ: ರಾಹುಲ್ ಸೇನೆ ತಾಲೂಕು ಘಟಕಕ್ಕೆ ಅಧ್ಯಕ್ಷರಾಗಿ ಪೋಲಂಪಲ್ಲಿ ಅಂಜಿನಪ್ಪ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಲ್ಲಗೊಂಡಯ್ಯಗಾರಹಳ್ಳಿ ವೆಂಕಟೇಶ್, ಉಲ್ಲೋಡು ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಗವಿಕುಂಟಹಳ್ಳಿ ನವೀನ್, ಕಾರ್ಯದರ್ಶಿಯಾಗಿ ದಪ್ಪರ್ತಿ ನಂಜುಂಡ, ಸಹಕಾರ್ಯದರ್ಶಿಯಾಗಿ ಸೋಮೇನಹಳ್ಳಿ ನಾಗೇಂದ್ರ, ಎಲ್ಲೋಡು ನಂಜಿರೆಡ್ಡಿ, ಖಜಾಂಚಿಯಾಗಿ ಸುಬಾನ್, ಸಂಘಟನಾ ಕಾರ್ಯದರ್ಶಿಗಳಾಗಿ ಚಿನ್ನೆನಹಳ್ಳಿ ಲಕ್ಷ್ಮೀನಾರಾಯಣ, ಗುಡಿಬಂಡೆ ಶಿವಕುಮಾರ್, ಚಿನ್ನಹಳ್ಳಿ ಅಶ್ವತ್ಥಪ್ಪ, ಬೋಗೇನಹಳ್ಳಿ ವೆಂಕಟೇಶ, ದಪ್ಪರ್ತಿ ಶ್ರೀನಿವಾಸ, ಪುಲುವಮಾಕಲಹಳ್ಳಿ ಜಾಕೀರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಳೇಗುಡಿಬಂಡೆ ಹನೀಫ್, ಉಲ್ಲೋಡು ನರಸಿಂಹಪ್ಪ, ಎಲ್ಲೋಡು ರಾಮಲಿಂಗಪ್ಪ, ಸೋಮೇನಹಳ್ಳಿ ರಾಮಚಂದ್ರ, ಗುಡಿಬಂಡೆ ಶ್ರೀನಿವಾಸ್ ಆಯ್ಕೆಯಾಗಿರುತ್ತಾರೆ.
ಅದ್ಧೂರಿ ಎಲ್ಲಮ್ಮ ದೇವಿಯ ಕರಗ
ಶಿಡ್ಲಘಟ್ಟ: ಪಟ್ಟಣದ ಬಸ್ ನಿಲ್ದಾಣ ರಸ್ತೆಯ ಎಲ್ಲಮ್ಮ ದೇವಿಯ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಕುಕ್ಕಲಚಿನ್ನಪೇಟೆಯಲ್ಲಿ ನೆಲೆಸಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಕರಗ ಹೊತ್ತ ಸೇವಾಕರ್ತ ಪಟ್ಟಣದ ಪ್ರಮುಖ ಬೀದಿಗಳನ್ನು ಸುತ್ತಿ ಪೂಜೆ ಸ್ವೀಕರಿಸಿದರು. ಕರಗದ ಪ್ರಯುಕ್ತ ಪಟ್ಟಣದ ಕೋಟೆ ಸರ್ಕಲ್ನಲ್ಲಿ ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾತ್ರಿ 11 ಗಂಟೆಯವರೆಗೆ ಅನುಮತಿ ನೀಡಲಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗದ ಪ್ರಯುಕ್ತ ವಿಶೇಷ ಪೂಜೆ, ಮುತ್ತಿನ ಪಲ್ಲಕಿ, ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಾಡಹಗಲೇ ಮನೆ ದರೋಡೆ
ಚಿಂತಾಮಣಿ: ಹಾಡಹಗಲೇ ಮನೆ ಬೀಗ ಒಡೆದು ಕಳ್ಳರು, ಲಕ್ಷಾಂತರ ರುಪಾಯಿ ಬೆಲೆಯ ಬಂಗಾರದ ಒಡವೆಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬಟ್ಲಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ಪೆದ್ದೂರು ಗ್ರಾಮದಲ್ಲಿ ನಡೆದಿದೆ. ದರೋಡೆಯಾಗಿದ್ದು ತಾಲೂಕಿನ ಪೆದ್ದೂರು ಗ್ರಾಮ ಪಂಚಾಯ್ತಿ ಸದಸ್ಯೆ ಶಿವಮ್ಮ ಎಂಬವರ ಮನೆ. ಈ ಬಗ್ಗೆ ಅವರು ಬಟ್ಲಹಳ್ಳಿ ಠಾಣೆಯ ಪೋಲೀಸರಿಗೆ ದೂರು ನೀಡಿದ್ದಾರೆ. ಸುದ್ದಿ ತಿಳಿದ ಘಟನ ಸ್ಥಳಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರದಿಂದ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿತ್ತು. ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಸರ್ಜಾಪುರ ಯಲ್ಲಮ್ಮ ದೇವಿ ಜಾತ್ರೆ
ಆನೇಕಲ್ಲು: ತಾಲೂಕಿನ ಗಡಿ ಹೋಬಳಿ ಸರ್ಜಾಪುರದಲ್ಲಿ ನೆಲೆಸಿರುವ ಪುರಾತನ ದೇಗುಲ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಬುಧವಾರ ಮದ್ಯಾಹ್ನ 12 ಗಂಟೆಗೆ ಪ್ರಾರಂಭವಾದ ರಥೋತ್ಸವಕ್ಕೆ ಉತ್ಸವ ಮೂರ್ತಿಯನ್ನು ತಂದಾಗ ನೆರೆದಿದ್ದ ಭಕ್ತ ಸಮೂಹ ಯಲ್ಲಮ್ಮ ದೇವಿಗೆ ಉಘೇ ಉಘೇ ಎಂದು ಜಯಕಾರ ಹಾಕಿ ಭಕ್ತಿ ಸಮರ್ಪಣೆ ಮಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಜಾನಪದ ತಂಡಗಳು, ನಾಯಂಡಿ ನೃತ್ಯ ಜನರಿಗೆ ರಂಜನೆ ನೀಡಿದವು. ಯಲ್ಲಮ್ಮ ದೇವಿ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ಕರಗ ಮಹೋತ್ಸವ, ಬೆಂಕಿಯ ಕೆಂಡಗಳ ಮೇಲೆ ನಡೆಯುವ ಸೇವೆ, ಅಲಗು ಸೇವೆ ನಡೆಯಲಿದೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.