ಎನ್ಡಿಎಗೆ 300ಕ್ಕೂ ಹೆಚ್ಚು ಸ್ಥಾನ
ಮಾಲೂರು: ದೇಶದಲ್ಲಿ ನರೇಂದ್ರ ಮೋದಿ ಹವಾ ಬೀಸುತ್ತಿದ್ದು,ಬಿಜೆಪಿ ನೇತೃತ್ವದ ಎನ್ಡಿಎ 300 ಕ್ಕೂ ಹೆಚ್ಚು ಸ್ಥಾನಗಳಿಸಿ ಕೇಂದ್ರ ಸರ್ಕಾರ ರಚಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ನಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಮಾಡಿರುವ ಹಗರಣಗಳಿಂದ ದೇಶದ ಜನತೆ ಭ್ರಮನಿರಸನಗೊಂಡಿದ್ದಾರೆ. ಅರ್ಥಿಕವಾಗಿ ದೇಶವನ್ನು ಬಲಿಷ್ಠಗೊಳಿಸಲು ವಿಫಲರಾಗಿರುವ ಯುಪಿಎ ಸರ್ಕಾರ ಚೈನಾ-ಪಾಕಿಸ್ಥಾನಗಳು ನಮ್ಮ ದೇಶದ ಭೂಮಿ ಅಕ್ರಮಿಸಿಕೊಂಡು ಸೈನಿಕರನ್ನು ಬಲಿ ತೆಗೆದುಕೊಂಡರೂ ನಮ್ಮ ಸೈನಿಕರ ಅತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದರು.
ಕೇಂದ್ರ ಸರ್ಕಾರದ ಹಗರಣಗಳು ಸಿಬಿಐ ತನಿಖೆ ನಡೆಯುತ್ತಿದೆ. ಎಲ್ಲ ರಂಗದಲ್ಲೂ ವಿಫಲರಾಗಿರುವ ಯುಪಿಎ ಸರ್ಕಾರವನ್ನು ಬದಲಿಸುವ ಕಾಲ ಬಂದಿದ್ದು,ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಸ್ಥಾಪನೆಯಾಗುವುದು ಖಚಿತವಾಗಿದೆ ಎಂದರು. ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪರವರ ಮೂವತ್ತು ವರ್ಷಗಳ ಸಾಧನೆ ಶೂನ್ಯವಾಗಿದ್ದು, ಚುನಾವಣೆ ಸಂಧರ್ಭದಲ್ಲಿ ಸುಳ್ಳಿನ ಭರವಸೆ ನೀಡಿ ಯಾಮಾರಿಸುತ್ತಿದ್ದಾರೆ. ಈ ಬಾರಿ ಜನತೆ ಯಾಮಾರದೆ ನರೇಂದ್ರ ಮೋದಿಗಾಗಿ ಬಿಜೆಪಿಗೆ ಮತ ನೀಡಿ ಎಂದರು.
ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಮಾತನಾಡಿ, ಜಿಲ್ಲಾದ್ಯಂತ ನರೇಂದ್ರ ಮೋದಿ ಹವಾ ಬೀಸುತ್ತಿದ್ದು, ನನ್ನ ಗೆಲವು ಶತಸಿದ್ಧ. ವೃಥಾ ಆರೋಪ ಮಾಡುತ್ತಿರುವ ಕೃಷ್ಣಯ್ಯ ಶೆಟ್ಟಿರವರು ಬಿಜೆಪಿಗೆ ಮಾಡಿರುವ ಮೋಸದ ಬಗ್ಗೆ ಜನತೆಗೆ ತಿಳಿಸಬೇಕು. ಬಿಜೆಪಿ ಮುಖಂಡರ ಬಗ್ಗೆ ಜನತೆಗೆ ಸುಳ್ಳು ಮಾಹಿತಿ ನೀಡುತ್ತಿರುವ ಕೃಷ್ಣಯ್ಯ ಶೆಟ್ಟಿ ರವರು ವಿಧಾನಸಭೆಯಲ್ಲಿ ಸ್ಪರ್ಧಿಸಲು ನೀಡಿದ್ದ ಬಿ ಫಾರಂ ನ್ನು ಹೇಗೆ ಉಪಯೋಗಿಸಿದರು ಎನ್ನುವುದು ಜನತೆಗೆ ತಿಳಿಸಬೇಕು ಎಂದರು. ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾ ಉಸ್ತುವಾರಿ ಶಿವು ಕುಮಾರ್, ರಾಮೇಗೌಡ, ಕೆಜಿಎಫ್ನ ಸಂಪಂಗಿ ಇದ್ದರು.
ಅದ್ದೂರಿ ರೋಡ್ ಶೋ: ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದ ಜಗದೀಶ್ ಶೆಟ್ಟರ್ರವರ ರೋಡ್ ಶೋ ಅದ್ಧೂರಿಯಾಗಿ ನಡೆಯಿತು. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪುರಸಭೆ ಅಧ್ಯಕ್ಷೆ ಭಾರತಮ್ಮ ಸೇರಿದಂತೆ ಎಲ್ಲ ಬಿಜೆಪಿ ಸದಸ್ಯರು, ತಾಪಂ ಅಧ್ಯಕ್ಷೆ ಅಶಾ ರಾಜಪ್ಪ, ಗೋಪಾಲ್ಗೌಡ, ಕುಡೇಯನೂರು ಕೃಷ್ಣಪ್ಪ, ಆನಂದ್, ರಾದಮ್ಮ, ಮಂಜುಳಮ್ಮ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

