ಕಾಂಗ್ರೆಸ್ ಸೇರಿದ ಜಿಪಂ ಸದಸ್ಯರು
ಚಿಂತಾಮಣಿ: ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಎಂ.ಸಿ.ಸುಧಾಕರ್ ಸರ್ವಾಧಿಕಾರಿ ಧೊರಣೆಯಿಂದ ಬೇಸತ್ತು ಕಾಂಗ್ರೇಸ್ ಸೇರಿ, ಮುನಿಯಪ್ಪ ಕೈ ಬಲಪಡಿಸುತ್ತಿರುವುದಾಗಿ ಜಿಪಂ ಸದಸ್ಯರಾದ ಶೇಖ್ ಮೌಲಾ ಮತ್ತು ಮಂಜುಳಮ್ಮ ಹೇಳಿದರು. ನಗರದ ಟ್ಯಾಂಕ್ ಬಂಡ್ ರಸ್ತೆ ಬಳಿ ಇರುವ ಕುರ್ಲಕೃಪ ನಿವಾಸದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಸಮ್ಮುಖದಲ್ಲಿ ಜಿಪಂ ಸದಸ್ಯರಾದ ಶೇಖ್ ಮೌಲಾ ಮತ್ತು ಮಂಜುಳಮ್ಮ ಸೇರ್ಪಡೆಯಾದರು. ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ, ಸ್ಥಳೀಯ ನಾಯಕರಾದ ಹಾಲಿ ಶಾಸಕ ಕೃಷ್ಣಾರೆಡ್ಡಿ ಹಾಗೂ ಮಾಜಿ ಶಾಸಕ ಎಂ.ಸಿ.ಸುಧಾಕರ್ ಮಾತುಗಳಿಗೆ ಜನ ಮಾನ್ಯತೆ ನೀಡುವುದಿಲ್ಲ ಎಂದರು.
ಮತ್ತೆ ಯುಪಿಎ ಆಡಳಿತ ಶತಃಸಿದ್ಧ
ಬಂಗಾರಪೇಟೆ: ಕೇಂದ್ರದಲ್ಲಿ ಮತ್ತೆ ಯುಪಿಎ ಆಡಳಿತ ಬರುವುದರಲ್ಲಿ ಎಳ್ಳಷ್ಟು ಅನುಮಾನವಿಲ್ಲ. ಆದ್ದರಿಂದ ಮತದಾದರು ವಿನಾಕಾರಣ ಇತರೇ ಪಕ್ಷಗಳ ಅಭ್ಯರ್ಥಿಗಳ ಮಾತಿಗೆ ಬೆರಗಾಗದೆ, ಮತ್ತೆ ಕಾಂಗ್ರೆಸ್ನ್ನೇ ಬೆಂಬಲಿಸಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತದಾರರಲ್ಲಿ ಮನವಿ ಮಾಡಿದರು. ತಾಲೂಕಿನ ವಿವಿಧೆಡೆ ಪ್ರಚಾರ ಕೈಗೊಂಡಿರುವ ನಾರಾಯಣಸ್ವಾಮಿ, 'ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಒಬ್ಬ ಸಭ್ಯ ಹಾಗೂ ಕಳಂಕರಹಿತ ರಾಜಕಾರಣಿ. ಅವರ ಅಭಿವೃದ್ಧಿಯೇ ಅವರ ಸತತ ಗೆಲುವಿಗೆ ಶ್ರೀರಕ್ಷೆ' ಎಂದರು. ಶಾಸಕರ ಜೊತೆಯಲ್ಲಿ ಪಕ್ಷದ ಮುಖಂಡರಾದ ಕೆ.ಚಂದ್ರಾರೆಡ್ಡಿ, ಬ್ಲಾಕ್ ಅಧ್ಯಕ್ಷ ಮಂಜುನಾಥ್, ಹೊಸರಾಯಪ್ಪ,ಪಿಚ್ಚಹಳ್ಳಿ ಗೋವಿಂದರಾಜು, ವೆಂಕಟೇಶಗೌಡ, ಶ್ರೀನಿವಾಸಮೂರ್ತಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

