ಚುನಾವಣೆ ಬಳಿಕ ಸಿಎಂ ಸ್ಥಾನಕ್ಕೆ ಕಂಟಕ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ
ಮುಳಬಾಗಲು: ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಖುರ್ಚಿ ಅಲುಗಾಡಲಿದೆ ಎಂದು ಭವಿಷ್ಯ ನುಡಿದ ಜಗದೀಶಶೆಟ್ಟರ್ ರಾಜ್ಯದ 20 ಕ್ಷೇತ್ರಗಳಲ್ಲಿ ಬಿಜೆಪಿ ಜಯಬೇರಿ ಭಾರಿಸಲಿದೆ ಎಂದರು.
ಪಟ್ಟಣದಲ್ಲಿ ಇತ್ತೀಚೆಗೆ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಆಡಳಿತ ಸಂಪೂರ್ಣ ಕುಸಿದಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ದುರಾಡಳಿತ ಕೊನೆಗಾಣುವ ಸಮಯ ಸಮೀಪಿಸುತ್ತಿದೆ ಎಂದರು. ಕೆ.ಎಚ್. ಮುನಿಯಪ್ಪ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸಹಾಯ ಮಾಡುತ್ತಿಲ್ಲ, ಚುನಾವಣೆ ಸಮಯದಲ್ಲಿ ಅವರ ಮೇಲೆ ವಿಶೇಷ ಕಾಳಜಿವಹಿಸಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆಂದರು. ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ವೈ. ಸುರೇಂದ್ರಗೌಡ, ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ಪಿ.ಎಂ. ರಘುನಾಥ್ ಮಾತನಾಡಿದರು. ಜಿಜೆಪಿ ಜಿಲ್ಲಾ ಅಧ್ಯಕ್ಷ ಕೃಷ್ಣಾರೆಡ್ಡಿ, ಮೋತಕಪಲ್ಲಿ ಎಂ.ವಿ. ಜಗದೀಶ್, ಪಟಾಪಟ್ ಶ್ರೀನಿವಾಸ್, ಸಿ.ಕೆ. ರಾಧವಲ್ಲಭ, ಎನ್. ವೆಂಕಟೇಶ್, ಡಿ.ವಿ. ಮೋಹನರೆಡ್ಡಿ ಇದ್ದರು.
ಬಿಜೆಪಿಗೆ ಸೇರ್ಪಡೆ: ಜೆಡಿಎಸ್ ಪ್ರಭಾವಿ ಮುಖಂಡ ಬೇವಹಳ್ಳಿ ಮುನಿಯಪ್ಪ, ಪೆರುಮಾಕನಹಳ್ಳಿ ಮೋಹನ್, ಕಾಂಗ್ರೆಸ್ ಮುಖಂಡರಾದ ಹೆಬ್ಬಣೆ ನರೇಂದ್ರರೆಡ್ಡಿ, ಅಶೋಕರೆಡ್ಡಿ, ಎಂ.ಎಂ. ಶಿವಕುಮಾರ್, ದಿಲೀಪ್, ಮಂಜುನಾಥ್, ಲೋಕೇಶ್, ನವೀನ್, ಎ.ಟಿ. ಅನಿಲ್ಕುಮಾರ್, ವಿನೋದ್, ಶಂಕರ್ ಮತ್ತಿತರರು ತಮ್ಮ ನೂರಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

