ಕಸ ವಿಲೇವಾರಿ ಮಾಡಿ
ಕೆಜಿಎಫ್: ಕೆಜಿಎಫ್ ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಇದು ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುತ್ತಿದೆ. ಆದರೆ, ಇಲ್ಲಿನ ನಗರಸಭೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ನಗರದ ಹೃದಯ ಭಾಗದಲ್ಲಿರುವ ಇಂತಹ ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿ ಈ ರೀತಿ ಕಸದ ರಾಶಿ ತುಂಬಿಕೊಂಡರೆ ಹೇಗೆ? ನಗರದ ಗೀತಾರಸ್ತೆ, ಪ್ರಿಚರ್ಡ್ರಸ್ತೆ, ಅಶೋಕ್ನಗರ ರಸ್ತೆ, ಉರಿಗಾಂ ರೇಲ್ವೆ ರಸ್ತೆ ಸೇರಿದಂತೆ ಎಂ.ಜಿ.ಮಾರುಕಟ್ಟೆ ಸುತ್ತಮುತ್ತಲಿನಲ್ಲಿ ಕಸ ವಿಲೇವಾರಿಯಾಗಿಲ್ಲ. ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಬೇಕು.
ಟಿ ಪ್ರಭಾಕರರೆಡ್ಡಿ, ಉಪನ್ಯಾಸಕರು ಕೆಜಿಎಫ್.
ಕಸದ ಗುಂಡಿಯಾಗಿರುವ ಚರಂಡಿ
ಕೋಲಾರ ನಗರದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬಾಕ್ಸ್ ಚರಂಡಿಗಳನ್ನು ನಿರ್ಮಿಸಲಾಗಿದ್ದು ಇದರಲ್ಲಿ ಕೊಳಚೆ ನೀರು ಹರಿಯುವುದಕ್ಕೆ ಬದಲು ಕಸದ ರಾಶಿ ತುಂಬಿ ಗಬ್ಬು ನಾಗುತ್ತಿದೆ. ಎಂಬಿ ರಸ್ತೆಯ ಶಿವ ಸರ್ವಿಸ್ ಸ್ಟೇಷನ್ ಎದುರುಗಡೆ ಇರುವ ಚರಂಡಿಯನ್ನು ಇನ್ನು ಪೂರ್ಣಗೊಳಿಸಿಲ್ಲ. ಕಸದ ಗುಂಡಿಯಾಗಿರುವ ಚರಂಡಿಗೆ ಮುಕ್ತಿ ದೊರಕಿಸಬೇಕು. ಹಾಗೆಯೇ ಇಲ್ಲಿ ಸುತ್ತಮುತ್ತಲು ಇರುವ ಮಾಂಸದ ಅಂಗಡಿಗಳವರು ಪ್ರತಿನಿತ್ಯ ಮಾಂಸದ ತ್ಯಾಜ್ಯಗಳನ್ನು ಎಸೆಯುತ್ತಿರುವುದರಿಂದ ಜನರು ನೆಮ್ಮಿದಿಯಿಂದ ಓಡಾಡುವುದಕ್ಕೆ ಅಹಸ್ಯಪಡುವಂತಾಗಿದೆ.ನಗರಸಭೆಯವರು ಕೂಡಲೇ ಚರಂಡಿಯನ್ನು ಸ್ವಚ್ಛಗೊಳಿಸಿ ಜನತೆಯ ಆರೋಗ್ಯ ಕಾಪಾಡಬೇಕು.
ಟಿ ಆಟೋ ಶಿವಾಜಿ, ಕೋಲಾರ
ನಾಗರಕುಂಟೆಗೆ ಮುಕ್ತಿ ಎಂದು?
ಕೋಲಾರ ನಗರದ ಕಠಾರಿಪಾಳ್ಯದ ನಾಗರಕುಂಟೆಯನ್ನು ಅಭಿವೃದ್ಧಿಪಡಿಸಲು ಕಳೆದ ಎರಡು ವರ್ಷಗಳ ಹಿಂದೆ ನಾಗರಕುಂಟೆಯ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಕಾಮಗಾರಿ ಆರಂಭಿಸಿ ಇದ್ದಕ್ಕಿಂತೆ ಸ್ಥಗಿತಗೊಳಿಸಿರುವುದರಿಂದ ಈ ಹಿಂದಿಗಿಂತಲೂ ಕಸ ಸುರಿಯುವುದು ಹೆಚ್ಚಾಗುತ್ತಿದೆ. ನಾಗರಕುಂಟೆಯ ಸುತ್ತ ಬೇಲಿ ನಿರ್ಮಿಸಿ ಸರ್ಕಾರಿ ಆಸ್ತಿಯನ್ನು ಸಂರಕ್ಷಣೆ ಮಾಡಬೇಕಾಗಿದ್ದ ನಗರಸಭೆ ದಿವ್ಯ ನಿರ್ಲಕ್ಷ್ಯ ತೋರಿರುವುದರಿಂದ ನಾಗರಕುಂಟೆಗೆ ಮುಕ್ತಿ ಸಿಗದಂತಾಗಿದೆ. ನಗರಸಭೆಯ ನೂತನ ಅಧ್ಯಕ್ಷ ಮುಬಾಕರ್ ಅವರು ಲೋಕಸಭಾ ಚುನಾವಣೆ ಮುಗಿದ ತಕ್ಷಣ ಸಾಮಾನ್ಯ ಸಭೆಯನ್ನು ಕರೆದು ನಾಗರಕುಂಟೆಯ ಅಭಿವೃದ್ಧಿ ಕೆಲಸ ಮುಂದುವರೆಸಿದರೆ, ಜನರಿಗೆ ಮಳೆಗಾಲದಲ್ಲಿ ಒಂದಿಟ್ಟು ನೀರು ಸಿಗುತ್ತದೆ, ಅಂತರ್ಜಲ ಅಭಿವೃದ್ಧಿಯಾಗುತ್ತದೆ, ವಾಯು ವಿಹಾರಿಗಳಿಗೆ ಸುಂದರ ತಾಣವಾಗುತ್ತದೆ.
ಟಿ ಮಾನಸ, ನಾಗರಕುಂಟೆ ನಿವಾಸಿ, ಕೋಲಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

