ಕೋಲಾರ

ಅಂಚೆ ಇಲಾಖೆ ಮೇಲೆ ಜಾಗತೀಕರಣ ಪ್ರಭಾವ

Published On :

ಚಿಂತಾಮಣಿ: ಜಾಗತೀಕರಣದ ಪ್ರಭಾವ ಭಾರತದ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಇದರಿಂದ ಅಂಚೆ ಇಲಾಖೆಯೂ ಹೊರತಾಗಿಲ್ಲ. ಎಷ್ಟೇ ತೊಂದರೆಗಳಿದ್ದರೂ ಗ್ರಾಮೀಣ ಅಂಚೆ ನೌಕರರ ಸೇವೆ ಅಪಾರ ಎಂದು ಕರ್ನಾಟಕ ವಲಯದ ಮುಖ್ಯ ಅಂಚೆಪಾಲಕರಾದ ಎಂ.ಎಸ್. ರಾಮಾನುಜನ್ ಅವರು ಅಭಿಪ್ರಾಯಪಟ್ಟರು.
ಕೈವಾರದ ಶ್ರೀ ಯೋಗಿನಾರಯಣ ಮಠದ ಸಭಾಂಗಣದಲ್ಲಿ ಅಖಿಲ ಭಾರತ ಅಂಚೆ ಗ್ರಾಮೀಣ ಸೇವಕರ  ಸಂಘ ಕರ್ನಾಟಕ ವಲಯದ ವತಿಯಿಂದ ಏರ್ಪಡಿಸಲಾಗಿದ್ದ ಎಂಟನೇ ದ್ವೈವಾರ್ಷಿಕ ಅಧಿವೇಶನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಭಾರತದಲ್ಲಿ ಶೇ.82ರಷ್ಟು ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶದಲ್ಲಿವೆ. ಅಂಚೆ ಇಲಾಖೆಯ ಆರ್ಥಿಗ ಪ್ರಗತಿಗೆ ಈ ಅಂಚೆಕಚೇರಿಗಳ ಕೊಡುಗೆ ಗಮನಾರ್ಹ ಎಂದರು.
ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಹದೇವಯ್ಯ, 'ಸೇವೆಯೇ ನಮ್ಮ ಗುರಿಯಾಗಬೇಕು. ಅಂಚೆ ಇಲಾಖೆಯ ಜನಪರ ಯೋಜನೆಗಳನ್ನು ಜನರ ಬಳಿಗೆ ತಲುಪಿಸಬೇಕು' ಎಂದರು.  ಕಾರ್ಯಕ್ರಮದಲ್ಲಿ ಜೆ.ಸಿ.ಎಂ ಕಾರ್ಯದರ್ಶಿ, ಕೈವಾರಕ್ಷೇತ್ರದ ಧರ್ಮಾಧಿಕಾರಿ ಎಂ. ಆರ್.ಜಯರಾಮ್, ವಲಯಾಧ್ಯಕ್ಷ ಕೆ.ಪ್ರಹ್ಲಾದ್ ರಾವ್, ಪ್ರಾಂತೀಯ ಅಂಚೆ ನಿರ್ದೇಶಕರಾದ ಎಲ್.ಕೆ.ದಾಸ್, ಪಿ.ಸುರೇಶ್, ಎನ್.ಡಿ. ನಾರಾಯಣಮೂರ್ತಿ, ಪಿ. ಮಲ್ಲಿಕಾರ್ಜುನ್, ಪ್ರಕಾಶ್‌ರಾವ್, ಪುಟ್ಟ ನರಸಿಂಹಮೂರ್ತಿ, ಎ.ಎನ್.ದೇಸಾಯಿ, ಆರ್.ವಿ.ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.