ಕೋಲಾರ

'ವಕೀಲರು-ನ್ಯಾಯಾಧೀಶರ ಬಾಂಧವ್ಯ ವೃದ್ಧಿಸಲಿ'

Published On :

ಮಾಲೂರು: ನ್ಯಾಯವಾದಿ-ನ್ಯಾಯಧೀಶರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಆದರೆ, ಅದು ಕಾನೂನು ಮೇಲೆ ಕ್ಷಕ್ಷಿದಾರರು ಇಟ್ಟಿರುವ ನಂಬಿಕೆ-ನ್ಯಾಯಕ್ಕೆ ಧಕ್ಕೆಯಾಗಬಾರದು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾ. ನಾಗರಾಜ್ ಹೇಳಿದರು.
ಸೋಮವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾದ ವಿ.ಮಾದೇಶ್ ಅವರ ಅಭಿನಂದಿಸಿ ಮಾತನಾಡಿದ ಅವರು, ಕರ್ತವ್ಯ ನಿರ್ವಹಿಸುವ ಪ್ರತಿಯೂಬ್ಬರು ಒಂದೇ ಕುಟುಂಬದವರಂತೆ ಕಾರ್ಯ ನಿರ್ವಹಿಸಬೇಕು. ಆದರೂ  ಅದು ಕ್ಷಕ್ಷಿದಾರರಿಗೆ ಸಿಗಬೇಕಾಗಿದ್ದ ನ್ಯಾಯಕ್ಕೆ ಅನ್ಯಾಯವಾಗಬಾರದು ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಸಿ.ಅಪ್ಪಾಜಿಗೌಡ ಮಾತನಾಡಿ, “ÑÛ¨Ú«æ-®ÚÂËÚÃÈÚßÉ¥Ú§Áæ ಯಾವುದೇ ಗುರಿ ಸಾಧಿಸಬಹುದು ಎಂಬುದಕ್ಕೆ ಮಾದೇಶ ÈÚáÛ¥ÚÂ’ ಎಂದರು.
ಸನ್ಮಾನ ಸ್ವೀಕರಿಸಿದ ಮಾದೇಶ್ ಮಾತನಾಡಿದರು. ಸರ್ಕಾರಿ ಅಭಿಯೋಜಕರಾಗಿ ಆಯ್ಕೆಯಾಗಿರುವ ಕಿಶೋರ್ ಕುಮಾರ್, ಕೋಲಾರ  ವಕೀಲರ ಸಂಘದ ಅಧ್ಯಕ್ಷ ಶಿವಣ್ಣ, ವೈ.ನಾರಾಯಣಸ್ವಾಮಿ, ಮುನಿಯಪ್ಪ, ರಮೇಶ್ ಮಾತನಾಡಿದರು.
ಹಿರಿಯ ವಕೀಲೆ ಡಿ.ಸರಸ್ವತಿ ಪ್ರಾರ್ಥಿಸಿದರು. ಹಿರಿಯ ವಕೀಲ ಡಿ.ನಾರಾಯಣಸ್ವಾಮಿ ಸ್ವಾಗತಿಸಿದರು. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ರಾಜಣ್ಣ ಸಂಕಣನವರ್, ಹೆಚ್ಚುವರಿ ಸಿವಿಲ್ ನ್ಯಾಯಧೀಶ ರಾಜು, ಹಿರಿಯ ವಕೀಲ ಮುನಿರಾಜು, ಆನಂದ್, ಮುನಿಕೃಷ್ಣಪ್ಪ, ನಾರಾಯಣಸ್ವಾಮಿ, ಬಾಬು ರಾಜೇಂದ್ರ ಪ್ರಸಾದ್, ಚೇತನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.