ಶುಲ್ಕ ಹೆಚ್ಚಳ: ಪೋಷಕರ ಪ್ರತಿಭಟನೆ
ಕೆಜಿಎಫ್: ಏಕಾಏಕಿ ಬೋಧನಾ ಶುಲ್ಕ ಏರಿಕೆ, ಕಾರ್ಮಿಕರೇತರ ಮಕ್ಕಳ ತ್ರೈಮಾಸಿಕ ಶುಲ್ಕ ಏರಿಕೆ, ಮಕ್ಕಳ ಬಸ್ ಸೌಲಭ್ಯ ಸ್ಥಗಿತ ಮಾಡಿರುವುದನ್ನು ಖಂಡಿಸಿ ಬೆಮೆಲ್ನಗರ ಕೇಂದ್ರೀಯ ವಿದ್ಯಾಲಯ ಪೋಷಕರ ಸಂಘದ ವತಿಯಿಂದ ಸೋಮವಾರ ಬೆಮಲ್ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರೀಯ ವಿದ್ಯಾಲಯದ ಈ ದಿಢೀರ್ ನಿರ್ಧಾರಗಳಿಂದಾಗಿ ತೀವ್ರ ತೊಂದರೆಯುಂಟಾಗಿದೆ. ಹೆಚ್ಚುವರಿ ಶುಲ್ಕದಿಂದಾಗಿ ಸಮಸ್ಯೆ ಉದ್ಭವವಾಗಿದೆ. ತ್ರೈಮಾಸಿಕ 6300 ಶುಲ್ಕ ಪಾವತಿಯಿಂದ ಪ್ರತಿ ವರ್ಷ 23200 ಪಾವತಿಸಬೇಕಾಗುತ್ತದೆ. ಆದರೆ, ಈ ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಆಡಳಿತ ಮಂಡಳಿ ಬೆಮೆಲ್ ಕಾರ್ಮಿಕರಲ್ಲದ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಸಂಚಾರ ಅಡಚಣೆಯಿಂದಾಗಿ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪೋಷಕರ ಸಂಘತ ಅಧ್ಯಕ್ಷ ವಿ.ಮುನಿರತ್ನಂ ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ನವಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಸಂಬಂಧಪಟ್ಟ ಆಡಳಿತ ಮಂಡಳಿ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸುವವರಿಗೆ ಧರಣಿ ನಡೆಸಲಾಗುತ್ತದೆ ಎಂದರು.
ಸಂಘದ ಪದಾಧಿಕಾರಿಗಳಾದ ಸತ್ಯನಾರಾಯಣ, ಮಂಜುನಾಥ್ರೆಡ್ಡಿ, ಸ್ತ್ರೀ ಶಕ್ತಿ ಸಂಘದ ಪ್ಲೋರಾ, ಬೆಮೆಲ್ ಕಾರ್ಖಾನೆಯ ಎಸ್ಸಿ ಎಸ್ಟಿ ಸಂಘದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಅರ್ಜುನನ್, ಸುನಿಲ್ಕುಮಾರ್, ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

