ಅದ್ಧೂರಿ ಕೋದಂಡರಾಮಸ್ವಾಮಿ ರಥೋತ್ಸವ
ಮಾಲೂರು: ಶ್ರೀ ರಾಮ ನವಮಿ ಪ್ರಯುಕ್ತ ಪಟ್ಟಣದ ಕೋಂದಡ ರಾಮ ದೇವಾಲಯದಲ್ಲಿ ನಡೆದ ವಿಶೇಷ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಮಂಗಳವಾರ ನಡೆಯಿತು.
ಗಜಗುಂಡ್ಲ ಕಲ್ಯಾಣಿಯ ದಡದಲ್ಲಿರುವ ಮುಜರಾಯಿ ಗೆ ಸೇರಿದ ಶ್ರೀ ಕೋಂದಡ ರಾಮ ದೇವಾಲಯದಲ್ಲಿ ಬೆಳಗ್ಗಿನಿಂದಲ್ಲೇ ಸ್ವಾಮಿಗೆ ವಿಶೇಷ ಅಲಂಕಾರ,ಪೂಜೆ ನಡೆಸಲಾಗಿತ್ತು. ಭಕ್ತಾಧಿಗಳು ಬೆಳಗ್ಗಿನಿಂದಲೇ ದೇವಾಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ ತಹಸೀಲ್ದಾರ್ ಶಿವುಕುಮಾರ್ ರವರು ಶ್ರೀರಾಮ ನವಮಿಯ ಪ್ರಯುಕ್ತ ಆಯೋಜಿಸಿದ್ದ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಉತ್ಸವ ಮೂರ್ತಿಗೆ ಭಕ್ತಾಧಿಗಳ ಹೂವು-ಹಣ್ಣು ಎಸೆದು ಹರಕೆ ಪೂರೈಸಿಕೊಂಡರು.
ದೇವಾಲಯದ ಅವರಣದಲ್ಲಿ ಭಕ್ತರಿಗಾಗಿ ಮಜ್ಜಿಗೆ-ಪಾನಕ ವಿತರಿಸುವ ಅರಿವಂಟಿಕೆಯ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಶ್ರೀ ಶಂಕರನಾರಾಯಣಸ್ವಾಮಿ ದೇವಾಲಯದ ಅವರಣದಲ್ಲಿ ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ ಶ್ರೀ ರಾಮ ನವಮಿ ಪ್ರಯುಕ್ತ ಸಾಯಿನಾಥರ ವಿಶೇಷ ಭಜನೆ ಹಮ್ಮಿಕೊಳ್ಳಲಾಗಿತ್ತು. ನಂತರ ಭಕ್ತರಿಗಾಗಿ ಪಾನಕ-ಕೋಸಂಬರಿ ವಿತರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ವಾಸವಿ ಮಂಜು, ಆಂಜನೇಯ ರೆಡ್ಡಿ, ಗಜೇಂದ್ರ, ಲಿಖಿತ್, ರಾಘವೇಂದ್ರ, ಮಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

