ಪ್ರಚಾರ ಕೂಲಿಗೆ ಆಗ್ರಹಿಸಿ ಬಿಜೆಪಿ
ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ರೋಡ್ ಶೋಗೆ ತೆರಳಿದ್ದ ಕಾರ್ಯಕರ್ತರು ತಮ್ಮ ಕೂಲಿ ನೀಡುವಂತೆ ಆಗ್ರಹಿಸಿ, ಪ್ರಚಾರ ಕಚೇರಿ ಮುಂದೆ ಪ್ರತಿಭಟಿಸಿದ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ.
ಬಾಗೇಪಲ್ಲಿ ತಾಲೂಕು ಹಾಗೂ ವಿವಿಧ ಗ್ರಾಮಗಳಿಂದ ಸುಮಾರು 170ಕ್ಕೂ ಹೆಚ್ಚು ಜನರು ಬಿಜೆಪಿ ಪರ ರೋಡ್ ಶೋಗೆ ತೆರಳಿದ್ದರು. ಅವರಿಗೆ ತಲಾ 300 ನೀಡುವ ಮಾತಾಗಿತ್ತು. ಆದರೆ, ಇದುವರೆಗೂ ತಮಗೆ ಯಾರೂ ದುಡ್ಡು ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಏ.6ರಂದು ಬೆಳಗ್ಗೆ 11 ಗಂಟೆಗೆ ಬಾಗೇಪಲ್ಲಿಯಿಂದ ಹೊರಟು ರಾತ್ರಿ ಸುಮಾರು 8 ಗಂಟೆಗೆ ನಮ್ಮನ್ನು ಇಲ್ಲಿ ಬಿಟ್ಟರು. ಸುಡುವ ಬಿಸಿಲಿನಲ್ಲಿ ಚಿಕ್ಕಬಳ್ಳಾಪುರದ ನಗರದಲ್ಲಿ ರೋಡ್ ಶೊ ಮತ್ತು ಸಮಾರಂಭದಲ್ಲಿ ಭಾಗವಹಿಸಿದೆವು. ಬೆಳಗಿನಿಂದ ತಿಂಡಿ ಇಲ್ಲ, ಊಟ ಇಲ್ಲ, ಕಾಫಿ ಟೀ ಇಲ್ಲ. ಕನಿಷ್ಠ ಕುಡಿಯುವ ನೀರೂ ಸಹ ಸಿಗಲಿಲ್ಲ ಎಂದು ದೂರಿದರು. ಆದರೆ, 2-3 ದಿನಗಳು ಕಳೆದರೂ ಸಹ ಇದುವವಿಗೂ ಹಣವನ್ನು ನೀಡಿಲ್ಲ. ಯಾರನ್ನು ಕೇಳಿದರೂ ಸಹ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಹೀಗಾದರೆ ನಮ್ಮನ್ನು ಏಕೆ ಕರೆದುಕೊಂಡು ಹೋಗಬೇಕಿತ್ತು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

