ಕೋಲಾರ

ಬಾರದ ಫಲಿತಾಂಶ; ವಿದ್ಯಾರ್ಥಿಗಳು ಆತಂಕ

Published On :

ಮುಳಬಾಗಲು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಫಲಿತಾಂಶದಲ್ಲಾದ ಲೋಪ ಸರಿಪಡಿಸುವಂತೆ ಬೆಂಗೆಳೂರು ವಿವಿಗೆ ಕಾಲೇಜು ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು ನಿರ್ಲಕ್ಷ್ಯವಹಿಸಿರುವ ಕಾರಣ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
2013ರ ಮೇನಲ್ಲಿ ಬಿಎ 2ನೇ ಸೆಮಿಸ್ಟರ್‌ನ ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿ ಪರೀಕ್ಷೆ ಬರೆದ 101 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿಲ್ಲ. ಅಂಕಪಟ್ಟಿಯೂ ಬಂದಿಲ್ಲ. ಇದೀಗ 2014ರ ಮೇ ಪರೀಕ್ಷೆ ಸಮೀಪಿಸುತ್ತಿದೆ ಆದರೆ ಹಿಂದಿನ ಸೆಮಿಸ್ಟರ್‌ನ ರಾಜ್ಯಶಾಸ್ತ್ರದ ಫಲಿತಾಂಶ ಬಾರದ ಕಾರಣ 3 ನೇ ಸೆಮಿಸ್ಟರ್ ಪರೀಕ್ಷೆಗಳು ತೆಗೆದುಕೊಳ್ಳಲು ವಿದ್ಯಾರ್ಥಿಗಳು ಗೊಂದಲಕ್ಕಿಡಾಗಿದ್ದಾರೆ. ಬಿಎ, ಬಿಎಸ್ಸಿ, ಬಿಕಾಂ 1ನೇ ಸೆಮಿಸ್ಟರ್ ವಿದ್ಯಾರ್ಥಿಗಳು 2011ರ ನವೆಂಬರ್‌ನಲ್ಲಿ ಪರೀಕ್ಷೆ ಬರೆದಿದ್ದು, ಫಲಿತಾಂಶ ಪ್ರಕಟಗೊಂಡಿದೆ. 2012ರ ನವೆಂಬರ್‌ನಲ್ಲಿ ನಡೆದ ಬಿಎ 1ನೇ ಸೆಮಿಸ್ಟರ್ 2013 ರ ಮೇನಲ್ಲಿ ನಡೆದ ಬಿಕಾಂ ಪದವಿ, 2,4 ನೇ ಸೆಮಿಸ್ಟರ್ ಫಲಿತಾಂಶ ಬಂದು ವರ್ಷ ಕಳೆದರು 185 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಕಾಲೇಜಿಗೆ ಕಳುಹಿಸಿಲ್ಲ. ಭಾವಚಿತ್ರವಿಲ್ಲ ಎಂದು 80 ವಿದ್ಯಾರ್ಥಿಗಳ ಅಂಕ ಪಟ್ಟಿ ನೀಡಿಲ್ಲ. ಮತ್ತೊಮ್ಮೆ ಭಾವಚಿತ್ರ ಕಳುಹಿಸಿದರೂ ಕ್ರಮ ಕೈಗೊಂಡಿಲ್ಲ. ಆಂಗ್ಲ ಭಾಷೆ ವಿಷಯದಲ್ಲಿ 45 ವಿದ್ಯಾರ್ಥಿಗಳು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರೂ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಹೆಸರು ಮತ್ತು ನೋಂದಣೆ ಸಂಖ್ಯೆ ಪ್ರಕಟಗೊಂಡಿಲ್ಲ.
ವಿದ್ಯಾರ್ಥಿಗಳು ನೇರವಾಗಿ ವಿವಿಗೆ ಹೋಗಿ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ. ವಾರದಲ್ಲಿ ಫಲಿತಾಂಶ ಬಾರದಿದ್ದಲ್ಲಿ ವಿವಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಪ್ರಾಂಶುಪಾಲ ಜಮೀರ್ ಅಹ್ಮದ್ ಕನ್ನಡ ಪ್ರಭದೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಬಂದು ಫಲಿತಾಂಶದ ಮಾಹಿತಿ ಕೇಳುತ್ತಾರೆ. 2014ರ ಏಪ್ರಿಲ್ 7ರಂದು ಮತ್ತೆ ವಿವಿಗೆ ಮನವಿ ಮಾಡಿ ಪತ್ರ ಮೂಲಕ ಮಾಹಿತಿ ನೀಡಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.