ಕೋಲಾರ

ಸಂಭ್ರಮ, ಸಡಗರದ ರಾಮನವಮಿ

Published On :

ಕೋಲಾರ: ನಗರದ ವಿವಿಧೆಡೆ ಶ್ರೀರಾಮನವಮಿ ಸರಡಗ, ಸಂಭ್ರಮದಿಂದ ನಡೆಯಿತು.
ಬೇಸಿಗೆಯ ಬಿರು ಬಿಸಿಲಿನಲ್ಲಿ ಬಳಲಿದ ಜನರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಪಾನಕ, ಮಜ್ಜಿಗೆ, ಹೆಸರು ಬೇಳೆಯ ಕೋಸಂಬರಿಯನ್ನು ವಿತರಿಸಲಾಯಿತು.
ನಗರದ ಪಿ.ಸಿ. ಬಡಾವಣೆಯಲ್ಲಿರುವ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ಸೋಮವಾರ ರಾತ್ರಿಯಿಂದಲೇ ಶ್ರೀರಾಮ ಭಜನೆ, ದೇವರನಾಮ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆ ಆರಂಭಿಸಿ, ಮಧ್ಯಾಹ್ನ 12.30ಕ್ಕೆ ದೇವರಿಗೆ ಮಹಾಮಂಗಳಾತಿ ನೆರವೇರಿಸಿ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಕುಂಬಾರರ ಬೀದಿಯಲ್ಲಿನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ, ಕಾಳಮ್ಮ ಗುಡಿ, ಕಾಲೇಜು ವೃತ್ತದ ಬಳಿ ಇರುವ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನ, ಶಾರದಾಚಿತ್ರ ಮಂದಿರ ಬಳಿ ವಕ್ಕಲೇರಿ ಆಂಜನೇಯಸ್ವಾಮಿ ಗುಡಿ,  ಕುರುಬರಪೇಟೆಯಲ್ಲಿನ ಪಂಚಮುಖಿ ಆಂಜನೇಸ್ವಾಮಿ ದೇವಸ್ಥಾನ, ಕೊಂಡರಾಜನಹಳ್ಳಿಯ ಶ್ರೀವೀರಾಂಜನೇಯಸ್ವಾಮಿ ಗುಡಿ, ಕೆಇಬಿ ಕಾಲೋನಿಯ ವಿದ್ಯಾಗಣಪತಿ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಶ್ರೀರಾಮನವಮಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಹಳೇ ಬಸ್ ನಿಲ್ದಾಣದ ಹೂವಿನ ವ್ಯಾಪಾರಿಗಳು, ವಿಶ್ವಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಸೇನೆ, ಕೂಲಿ ಕಾರ್ಮಿಕರ ಸಂಘ, ಶ್ರೀರಾಮ ಕಾಫಿ ವರ್ಕ್ಸ್, ಎಪಿಎಂಸಿಯಲ್ಲಿನ ತರಕಾರಿ ವ್ಯಾಪಾರಿಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಿಂದಲೂ ಪುರುಷೋತ್ತಮನೆಂಬ ಬಿರುದು ಹೊತ್ತಿರುವ ಶ್ರೀರಾಮನ ಜಯಂತಿಯನ್ನು ಆಚರಿಸಿ ಭಕ್ತರಿಗೆ ಪ್ರಸಾದವನ್ನು ನೀಡಲಾಯಿತು.
ನಗರದ ಹೊರವಲಯದ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಪಕ್ಕದಲ್ಲಿರುವ ಶ್ರೀರಾಮನ ಗುಡಿಯ ಮೇಲೆ ನಿರ್ಮಿಸಿರುವ ರಾಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೋಲಾರ-ಮುಳಬಾಗಿಲು ಮಾರ್ಗದಲ್ಲಿ ಕಾಣುವ ಶ್ರೀರಾಮನ ಪ್ರತಿಮೆಯನ್ನು ಹೆದ್ದಾರಿಯಲ್ಲಿ ಸಂಚರಿಸಿದ ಪ್ರಯಾಣಿಕರು ನೋಡಿ ಆನಂದಿಸಿದರು. ಬುಧವಾರ ಶ್ರೀಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಶ್ರೀರಾಮ ಸೇವಾ ಸಮಿತಿಯಿಂದ ಶ್ರೀರಾಮನ ಪಟ್ಟಾಭಿಷೇಕವನ್ನು ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.