ಕೋಲಾರ

ಭದ್ರತಾ ಸಿಬ್ಬಂದಿ ಬಂದೂಕು ತಗುಲಿ ಮಹಿಳೆಗೆ ಗಾಯ, ಪ್ರತಿಭಟನೆ

Published On :

ಕೋಲಾರ: ನಗರದ ಕೋಗಿಲಹಳ್ಳಿ ಸಮೀಪದ ವಿನೋಭ ನಗರದಲ್ಲಿ ಗುರುವಾರ ಮಧ್ಯಾಹ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಾರನ್ನು ಮುತ್ತಿಗೆ ಹಾಕಿದ ಜನರನ್ನು ನಿಯಂತ್ರಿಸಲು ಮುಂದಾದ ಭದ್ರತಾ ಸಿಬ್ಬಂದಿಯೊಬ್ಬರ ಬಂದೂಕಿನ ಮೊನಚು ತಾಕಿ ಮಹಿಳೆಯೊಬ್ಬರು ಗಾಯಗೊಂಡ ಘಟನೆ ನಡೆದಿದೆ.
ವಿನೋಭ ನಗರದ ಮತಗಟ್ಟೆ ವ್ಯಾಪ್ತಿಯಲ್ಲಿ 426 ಮಂದಿ ಮತದಾರರಿದ್ದು 181 ಮಂದಿ ಮತ ಚಲಾಯಿಸಿದ್ದರು. ಇದ್ದಕ್ಕಿದಂತೆ ಕೆಲವರು ನಮ್ಮ ವಾರ್ಡಿಗೆ ಮೂಲ ಸೌಕರ್ಯಗಳಿಲ್ಲವೆಂದು ಪ್ರತಿಭಟನೆ ನಡೆಸಿದ್ದರಿಂದ ಮತದಾನ ಸ್ಥಿಗತಗೊಂಡಿತ್ತು.
ಮಧ್ಯಾಹ್ನ ನಗರಸಭೆ ಅಧ್ಯಕ್ಷ ಮುಬಾಕರ್ ಹಾಗೂ ಜೆಡಿಎಸ್ ಮುಖಂಡರು ವಿನೋಭ ನಗರಕ್ಕೆ ಭೇಟಿ ನೀಡಿ ಮತದಾರರನ್ನು ಓಲೈಸಲು ಯತ್ನಿಸಿದ್ದರು, ಇದೇ ಸಮಯಕ್ಕೆ ಜಿಲ್ಲಾ ಎಸ್ಪಿ ಅಜಯ್ ಹಿಲೋರಿಯವರು ಕಾರು ಸಾಗುತ್ತಿದ್ದನ್ನು ಗಮನಿಸಿದ ಜನರು ಎಸ್ಪಿ ಕಾರಿಗೆ ಮುತ್ತಿಗೆ ಹಾಕಿದರು.
ಬಳಿ ಬಣ್ಣದ ಸಿಗ್ನಲ್ ಲೈಟ್ ಇದ್ದ ಕಾರನ್ನು ನೋಡಿ ಜನರು ಅಭ್ಯರ್ಥಿ ಇರಬಹುದೆಂದು ಅನುಮಾನಗೊಂಡು ಕಾರನ್ನು ತಡೆದಿದ್ದರು.ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ ಕಾರಿಗೆ ಜನರು ಮುತ್ತಿಗೆ ಹಾಕಿರುವುದನ್ನು ಗಮನಿಸಿ ತಕ್ಷಣ ಓಡಿ ಬಂದು ಜನರನ್ನು ಚದುರಿಸಲಾರಂಭಿಸಿದರು. ಈ ವೇಳೆ ನುಕುನುಗ್ಗಲು ಉಂಟಾಯಿತು.
ಗುಂಪಿನಲ್ಲಿದ್ದವರು ಭದ್ರತಾ ಸಿಬ್ಬಂದಿಯಿಂದ ಬಂದೂಕು ಕಸಿದುಕೊಳ್ಳಲು ಯತ್ನಿಸಿದಾಗ ಬಂದೂಕಿನ ಮೊನಚು ಮಹಿಳೆಯೊಬ್ಬರ ಹಣೆಗೆ ತಾಕಿದ್ದರಿಂದ ಆ ಮಹಿಳೆಗೆ ಗಾಯವಾಗಿ ರಕ್ತ ಸುರಿಯಲಾರಂಭಿಸಿತು. ಇದರಿಂದ ಕುಪಿತರಾದ ಜನರು ಪ್ರತಿಭಟನೆ ನಡೆಸಿದ್ದರಿಂದ ಬಿಗುವಿನ ವಾತಾವರಣ ಉಂಟಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.