ಉತ್ಸವದಲ್ಲಿ ಪಿಎಸ್ಐ ತೊಡೆಗೆ ತಿವಿದ ಕೋಣ
ಕ.ಪ್ರ.ವಾರ್ತೆ ಹರಿಹರ ಏ.23
ಇಲ್ಲಿನ ಗ್ರಾಮದೇವತೆ ಊರಮ್ಮನ ಉತ್ಸವ ಲಕ್ಷಾಂತರ ಭಕ್ತರ ಸಮ್ಮುಖ ಅದ್ಧೂರಿಯಾಗಿ ನಡೆಯಿತು. ಅಲ್ಲದೆ, ಪಟ್ಟದ ಕೋಣ ಬಲಿ ನೀಡುವ ಸಂದರ್ಭ ಪಿಎಸ್ಐ ಒಬ್ಬರನ್ನು ತಿವಿದು ಕೋಣ ಕಣ್ಮರೆಯಾಯಿತು. ಈ ಸಂದರ್ಭ ಲಾಠಿ ಪ್ರಹಾರವೂ ನಡೆದಿದ್ದು ಈ ಬಾರಿಯ ಉತ್ಸವದ ವಿಶೇಷವಾಗಿತ್ತು. ಭಕ್ತರು ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆ ತನಕ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿದರು. “D¨æàÞ... D¨æàÞ...’, “ÔÚ߯VæàÀÞ, ÔÚ߯VæàÀÞ...’ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಸಂಪ್ರದಾಯದಂತೆ ಮಂಗಳವಾರ ರಾತ್ರಿ ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಚೌಕಿ ಮನೆಯಲ್ಲಿ ಮಹಜೇನಹಳ್ಳಿ ಹಾಗೂ ಕಸಬಾ ಗ್ರಾಮಗಳ ಮುಖ್ಯಸ್ಥರು ಚರಗ ಸಿದ್ಧಪಡಿಸಿ ಅದರ ಒಂದು ಕಾಳೂ ಅಕ್ಕಪಕ್ಕದ ಗಡಿಗಳ ರೈತರು ವಶಪಡಿಸಿಕೊಳ್ಳದಂತೆ ಕಾಯುತ್ತಾ ಕುಳಿತಿದ್ದರು.
ಇತ್ತ ನಗರದ ಮಹಜೇನಹಳ್ಳಿ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗಿನಿಂದ ಮುತ್ತೈದೆಯರಿಂದ ಉಡಿ ತುಂಬಿಸಿಕೊಂಡ ಗ್ರಾಮದೇವತೆ ಊರಮ್ಮನ ಉತ್ಸವ ಮೂರ್ತಿ ರಾತ್ರಿ 12 ಗಂಟೆ ನಂತರ ಚೌಕಿಮನೆಗೆ ತೆರಳಲು ಶಾಸಕ ಎಚ್.ಎಸ್. ಶಿವಶಂಕರ್ ಹಾಗೂ ಉತ್ಸವ ಸಮಿತಿಯ ಮುಖಂಡರು ಚಾಲನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

