ಕೋಲಾರ

ವಿದ್ಯಾರ್ಥಿನಿ ಅಪಹರಣ: 4 ಆರೋಪಿಗಳ ಬಂಧನ

Published On :

ಶಿಡ್ಲಘಟ್ಟ: ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಬಲವಂತವಾಗಿ ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಶಿಡ್ಲಘಟ್ಟ ಮಂಜುನಾಥ್, ಬೆಂಗಳೂರಿನ ದೇವರಾಜು, ಭಾಗ್ಯಲಕ್ಷ್ಮೀ, ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಕಿರುಗಂಬಿ ಗ್ರಾಮದ ಚಂದ್ರಶೇಖರ್ ಬಂಧಿತ ಆರೋಪಿಗಳು. ಕಳೆದ ಮೂರು ತಿಂಗಳ ಹಿಂದೆ ಅಪಹರಣಗೊಂಡಿದ್ದ ವಿದ್ಯಾರ್ಥಿನಿಯ ಮನೆಗೆ ಹೆಣ್ಣು ಕೇಳಲು ಮಂಜುನಾಥ್ ಕುಟುಂಬದವರು ಹೋಗಿದ್ದರು ಎನ್ನಲಾಗಿದೆ. ಆದರೆ, ಮಂಜುನಾಥನಿಗೆ ಹೆಣ್ಣು ಕೊಡಲು ವಿದ್ಯಾರ್ಥಿನಿಯ ಕುಟುಂಬದವರು ನಿರಾಕರಿಸಿದ್ದರು.
ಈ ನಡುವೆ ಕಾಲೇಜಿನ ಬಳಿಗೆ ತನ್ನ ಸಹಚರರೊಂದಿಗೆ ಮಾರುತಿ ಓಮ್ನಿ ವಾಹನದಲ್ಲಿ ಬಂದ ಮಂಜುನಾಥ್, ನಾವಿಬ್ಬರು ಮದುವೆಯಾಗಲು ನಿಮ್ಮ ತಂದೆಯನ್ನು ಒಪ್ಪಿಸಿದ್ದೇನೆ ಎಂದು ವಿದ್ಯಾರ್ಥಿನಿಯನ್ನು ನಂಬಿಸಲು ಯತ್ನಿಸಿದ್ದು ಆಕೆ ಒಪ್ಪದಿದ್ದಾಗ ತನ್ನ ಗೆಳೆಯರ ಸಹಕಾರದೊಂದಿಗೆ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ.
ದೂರವಾಣಿ ಕರೆಯ ಮುಖಾಂತರ ವಿಚಾರ ತಿಳಿದ ಪೋಲಿಸರು ತಕ್ಷಣ ಆರೋಪಿಗಳ ಬೆನ್ನತ್ತಿ ಚಿಂತಾಮಣಿ ತಾಲೂಕಿನ ಗಡಿಗವಾರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಬಳಿಯಿರುವುದನ್ನು ಖಚಿತ ಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ, ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಪಿ.ಬಿ. ಹನುಮಂತಪ್ಪ, ಪುರುಷೋತ್ತಮ್, ಕೃಷ್ಣಪ್ಪ, ಸಿದ್ದರಾಜು ಮತ್ತಿತರರು ಭಾಗವಹಿಸಿದ್ದರು. ಪಟ್ಟಣದ ಪುರಠಾಣೆಯಲ್ಲಿ ಪ್ರಕರಣ ದಾಖಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.