ಬೆಂಕಿ ಅನಾಹುತ: 35 ಕುರಿ ಭಸ್ಮ
ಚಿಂತಾಮಣಿ: ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 35 ಕುರಿಗಳು ಸೇರಿದಂತೆ ಒಟ್ಟು 4 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಕೆಂಚಾರ್ಲಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ಗಡಿಗವಾರಹಳ್ಳಿ ಮಜುರಾ ಕೃಷ್ಣಾಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.
ರೈತ ನಡಪಿ ನಾರಾಯಣಸ್ವಾಮಿ ಅವರ ಮನೆಯೇ ಬೆಂಕಿಗೆ ಆಹುತಿಯಾಗಿದೆ. ದುರ್ಘಟನೆಯಲ್ಲಿ 35 ಕುರಿಗಳು, 14 ಗ್ರಾಂ ಮೌಲ್ಯದ ಚಿನ್ನದ ಒಡವೆಗಳು, 7 ಮೂಟೆ ದವಸ ಧಾನ್ಯ, 4 ಸಾವಿರ ನಗದು ಬೆಂಕಿಗೆ ಆಹುತಿಯಾಗಿದೆ. ಒಟ್ಟು 4 ಲಕ್ಷ ನಷ್ಟವಾಗಿದೆ ಎಂದು ಪೂಲೀಸರಿಗೆ ಸಲ್ಲಿಸಲಾದ ದೂರಿನಲ್ಲಿ ತಿಳಿಸಲಾಗಿದೆ. ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಕೆಂಚಾರ್ಲಹಳ್ಳಿ ಠಾಣೆ ಸಬ್ಇನ್ಸ್ಪೆಕ್ಟರ್ ರಾಜಣ್ಣ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಚಿನ್ನದ ಸರ ಕಸಿದು ಪರಾರಿ
ಚಿಂತಾಮಣಿ: ಬಾಗೇಪಲ್ಲಿ ರಸ್ತೆಯ ಚೊಕ್ಕನಹಳ್ಳಿ ಗೇಟ್ ಬಳಿ ನಿಂತಿದ್ದ ಲಕ್ಷ್ಮಿದೇವಮ್ಮ ಅವರ ಚಿನ್ನದ ಸರವನ್ನು ಇಬ್ಬರು ಯುವಕರು ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ. ಈ ಚಿನ್ನದ ಸರ 70 ಸಾವಿರ ಬೆಲೆ ಬಾಳುತ್ತದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ವೃದ್ಧನ ಶವ ಪತ್ತೆ
ಚಿಂತಾಮಣಿ: ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಉಪ್ಪರಪೇಟೆ ಗ್ರಾಮದ ನಿರ್ಜನ ಪ್ರದೇಶಮೊಂದರಲ್ಲಿ ಸುಮಾರು 60 ವರ್ಷ ವಯಸ್ಸಿನ ವೃದ್ಧನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಗೌಡನಹಳ್ಳಿ ನಿವಾಸಿ ಮುನಿನಾರಾಯಣಪ್ಪ ಎಂದು ಗೊತ್ತಾಗಿದೆ. ಈ ಬಗ್ಗೆ ಪ್ರಕರ ದಾಖಲಾಗಿದೆ.
ವ್ಯಕ್ತಿ ನೇಣಿಗೆ ಶರಣು
ಚಿಂತಾಮಣಿ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೈವಾರ ಹೊರ ವಲಯದ ರುಧ್ರಭೂಮಿಯ ಹತ್ತಿರವಿರುವ ಮರಕ್ಕೆ ಬೆಂಗಳೂರಿನ ತೀಗಹಳ್ಳಿ ನಿವಾಸಿ ಮಲ್ಲೇಶಪ್ಪ(45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈವಾರ ತಪೋವನಕ್ಕೆ ಬೆಂಕಿ
ಚಿಂತಾಮಣಿ: ತಾಲೂಕಿನ ಕೈವಾರ ಗ್ರಾಮದ ಪವಿತ್ರ ಯಾತ್ರಾಸ್ಥಳವಾದ ತಪೋವನ ಹಾಗೂ ಸುತ್ತಲಿನ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಕಿಡಿಗೇಡಿಗಳು ಸಿಗರೇಟ್ ಸೇದ ಎಸೆದ ಪರಿಣಾಮ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಹರಸಾಹಸಪಟ್ಟರು. ಇನ್ನು ಪರಿಸ್ಥಿತಿ ಹತೋಟಿಗೆ ಬಾರದೆ ಇರುವುದರಿಂದ ಇನ್ನಷ್ಟು ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲು ಅಗ್ನಿಶಾಮಕ ಅಧಿಕಾರಿ ಸೂಚಿಸಿದ್ದಾರೆ.
ಸರ ಕದಿಯಲು ಯತ್ನ
ಕೋಲಾರ: ನಗರದ ಗೌರಿಪೇಟೆಯಲ್ಲಿ ಗುರುವಾರ ರಾತ್ರಿ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಮಹಿಳೆಯೊಬ್ಬರ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರ ದೋಚಲು ಯತ್ನಿಸಿರುವ ಘಟನೆ ನಡೆದಿದೆ. ನಾರಾಯಣಮ್ಮ ಎಂಬುವರು ದಾರಿಯಲ್ಲಿ ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಕಳ್ಳರು ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರ ಕದಿಯಲು ವಿಫಲ ಯತ್ನ ನಡೆಸಿ ಮಹಿಳೆ ಕೂಗಿಕೊಂಡಿದ್ದರಿಂದ ಪರಾರಿಯಾಗಿದ್ದಾರೆ. ಇದೇ ರೀತಿ ಗೌರಿಪೇಟೆಯಲ್ಲಿ ಕೆಲ ತಿಂಗಳ ಹಿಂದೆ ಮನೆ ಮುಂದೆ ನಿಂತಿದ್ದ ಮಹಿಳೆಯ ಸರಕದಿಯಲು ಯತ್ನಿ ಕಳ್ಳರು ಪರಾರಿಯಾಗಿದ್ದರು. ಇಂದು ನಡೆದ ಘಟನೆ ನಗರ ಠಾಣೆಯಲ್ಲಿ ದಾಖಲಾಗಿದೆ.
ಮನೆ ದರೋಡೆ
ಕೆಜಿಎಫ್: ಮನೆಯ ಹಿಂಬಾಗಿಲ ಚಿಲಕವನ್ನು ಮುರಿದು ಒಳ ನುಗ್ಗಿದ ಕಳ್ಳರು, ಚಿನ್ನಾಭರಣ ಹಾಗೂ ಒಡವೆಗಳನ್ನು ಕದ್ದು ಪರಾರಿಯಾಗಿದ ಘಟನೆ ಬೆಮೆಲ್ನಗರದಲ್ಲಿ ನಡೆದಿದೆ.
ಬೆಮೆಲ್ನಗರದ ನಿವಾಸಿ ಜಾನ್ಬಾಸ್ಕೋ ಎಂಬುವರು ತಮ್ಮ ಮನೆಗೆ ಬೀಗವನ್ನು ಹಾಕಿಕೊಂಡು ಕುಟುಂಬ ಸಮೇತ ಒರಿಯಂಟಲ್ ಲೈನ್ನಲ್ಲಿರುವ ಅತ್ತೆ ಮನೆಗೆ ಹೋಗಿದ್ದರು. ಮಾರನೆ ದಿನ ಬಂದು ಮನೆಯ ಮುಂಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಹಿಂಬಾಗಿಲು ಚಿಲಕವನ್ನು ಮುರಿದಿತ್ತು. ಬೀರುವಿನಲ್ಲಿಟ್ಟಿದ್ದ ಸುಮಾರು 47 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ 20 ಸಾವಿರ ನಗದು ಸೇರಿದಂತೆ ಒಟ್ಟು 1.8 ಲಕ್ಷ ಮೌಲ್ಯವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಜಾನ್ಬಾಸ್ಕೋ ಬೆಮೆಲ್ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
1.8 ಲಕ್ಷದ ಒಡವೆ ಕಳವು
ಕೆಜಿಎಫ್: ಮನೆಯ ಹಿಂಬಾಗಿಲ ಚಿಲಕವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದ ಚಿನ್ನದ ಒಡವೆಗಳು ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಮೆಲ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಮೆಲ್ನಗರದ ನಿವಾಸಿ ಜಾನ್ಬಾಸ್ಕೋ ಎಂಬುವರು ಮನೆಗೆ ಬೀಗವನ್ನು ಹಾಕಿಕೊಂಡು ಕುಟುಂಬ ಸಮೇತ ಒರಿಯಂಟಲ್ ಲೈನ್ನಲ್ಲಿರುವ ಅತ್ತೆ ಮನೆಗೆ ಹೋಗಿದ್ದರು. ಮಾರನೆ ದಿನ ಬಂದು ಮನೆಯ ಮುಂಬಾಗಿಲನ್ನು ತೆರೆದು ಒಳಗೆ ಹೋಗಿ ನೋಡಿದಾಗ ಹೀಂಬಾಗಿಲಿನ ಚಿಲಕವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಬೀರುವಿನಲ್ಲಿಟ್ಟಿದ್ದ ಸುಮಾರು 47 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ 20 ಸಾವಿರ ನಗದು ಸೇರಿದಂತೆ ಒಟ್ಟು1.8 ಲಕ್ಷಮೌಲ್ಯವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಜಾನ್ಬಾಸ್ಕೋ ಬೆಮೆಲ್ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

